Hoskote: 'ಬ್ರಹ್ಮರಥೋತ್ಸವಕ್ಕೆ ರಾಜಕೀಯ ನಾಯಕರು, ಕುತಂತ್ರಿಗಳಿಂದ ಅಡ್ಡಿ: ಶರತ್ ಬಚ್ಚೇಗೌಡ

Published : May 04, 2022, 08:56 AM IST
Hoskote: 'ಬ್ರಹ್ಮರಥೋತ್ಸವಕ್ಕೆ ರಾಜಕೀಯ ನಾಯಕರು, ಕುತಂತ್ರಿಗಳಿಂದ ಅಡ್ಡಿ: ಶರತ್ ಬಚ್ಚೇಗೌಡ

ಸಾರಾಂಶ

*   ರಥೋತ್ಸವದ ಬಗ್ಗೆ‌ ಸ್ವಾಭಿಮಾನಿ ಶಾಸಕ ಶರತ್ ಬಚ್ಚೇಗೌಡರಿಂದ ಆಕ್ರೋಶ *  ಪರೋಕ್ಷವಾಗಿ ಎಂಟಿಬಿ. ನಾಗರಾಜ್‌ಗೆ ಕುಟುಕಿದ ಬಚ್ಚೇಗೌಡ *  ಬ್ರಹ್ಮ ರಥೋತ್ಸವಕ್ಕೆ ಮಾಜಿ ಶಾಸಕ ಹಾಲಿ ಸಚಿವರಿಂದ ಅಡ್ಡಿ ಆರೋಪ 

ಬೆಂಗಳೂರು(ಮೇ.04):  ರಾಜ್ಯದಲ್ಲೇ ಹೊಸಕೋಟೆ‌(Hoskote) ವಿಧಾನಸಭಾ ಕ್ಷೇತ್ರವೇಂದರೇ ಸಾಕು ಎಲ್ಲರ‌ ಕಿವಿಗಳು ನಿಮಿರುತ್ತವೇ‌. ಈ ಬಾರಿ ಹೊಸಕೋಟೆಯ ಪಟ್ಟಣದ ಶಕ್ತಿ  ದೇವತೆಯಾಗಿರುವ ಅವಿಮುಕ್ತೇಶ್ವರ ದೇವರ ಬ್ರಹ್ಮರಥೋತ್ಸವದ ಶತಮಾನಗಳಿಂದ ನಡೆದು ಬಂದಿರುವ ಸಂಪ್ರಾದಯಕ್ಕೆ ಚ್ಯುತಿ ಮಾಡುತ್ತಿದ್ದಾರೆಂಬ ಹೇಳಿಕೆ ವಿವಾದಕ್ಕೀಡಾಗಿದೆ.

ಸ್ಥಳೀಯ ಸ್ವಾಭಿಮಾನಿ ಶಾಸಕ. ಶರತ್ ಬಚ್ಚೇಗೌಡರು(Sharath Bache Gowda) ಪರೋಕ್ಷವಾಗಿ ಎಂಟಿಬಿ. ನಾಗರಾಜ್‌ಗೆ(MTB Nagaraj) ಕುಟುಕಿದ್ದಾರೆ. ಹೊಸಕೋಟೆ ನಗರದಲ್ಲಿ ಐತಿಹಾಸಿಕ  ಶ್ರೀ ಅವಿಭಕ್ತೇಶ್ವರ ಬ್ರಹ್ಮ ರಥೋತ್ಸವ(Brahmma Rathotsava) ಹಾಗೂ ಕರಗ ಮಹೋತ್ಸವಕ್ಕೆ ಇದೀಗ ರಾಜಕೀಯ ನಾಯಕರು ಹಾಗೂ ಕುತಂತ್ರಿಗಳಿಂದ ಅಡ್ಡಿಯಾಗುತ್ತಿದೆ ಎಂದು ಹೊಸಕೋಟೆ ಶಾಸಕ ಶರತ್ ಬಚ್ಚೇಗೌಡ ಕಿಡಿಕಾರಿದ್ದಾರೆ.

ನಾವು ಕಟ್ಟಿದ ಹುತ್ತಕ್ಕೆ 'ನಾಗರಾಜ' ಬಂದು ಸೇರಿದ: ಶರತ್

ಹೌದು, ನಿನ್ನೆ(ಮಂಗಳವಾರ) ಹೊಸಕೋಟೆಯಲ್ಲಿ ಜಾತ್ರಾ ಮಹೋತ್ಸವದ(Fair) ಕಮಿಟಿ ಸಭೆಯನ್ನು ಮುಗಿಸಿ ಬಂದ ಶರತ್‌ ಬಚ್ಚೇಗೌಡ ಹೊಸಕೋಟೆ ದೇವಾಲಯದ ಸಂಪ್ರದಾಯವನ್ನು ಹಲವು ವರ್ಷಗಳಿಂದ ಆಚರಣೆ ಮಾಡಿಕೊಂಡು ಬಂದಿದ್ದು ತಾಲೀಕಿನ ಮೊದಲ ಪ್ರಜೆ ಇದರ ಉಸ್ತುವಾರಿ ವಹಿಸಿಕೊಳ್ಳುವುದು ವಾಡಿಕೆಯಾಗಿದೆ ಹಾಗೂ ಸಂಪ್ರದಾಯ. ಆದರೆ ಇಂದು ಎಲ್ಲಿಂದಲೋ ಹೊಸಕೋಟೆಗೆ ಸಂಬಂಧವಿಲ್ಲದ ವ್ಯಕ್ತಿ ಗರುಡಾಚಾರ್ ಪಾಳ್ಯದಿಂದ ಬಂದಿರುವ ತಾಲೂಕಿನವರೇ ಅಲ್ಲದ ಹೊರಗಿನ ವ್ಯಕ್ತಿಗಳು ಇಂದು ಇದಕ್ಕೆ ಧಕ್ಕೆ ತರುವ ಕೆಲಸ ಮಾಡುತ್ತಿದ್ದಾರೆ. ಇಂತಹವರಿಗೆ ನಾವು ಆಸ್ಪದ ಕೊಡುವುದಿಲ್ಲ ಅಂತ ಕಿಡಿ ಕಾರಿದ್ದಾರೆ. 

ಈ ಸಂಪ್ರದಾಯವನ್ನು(Tradition) ನಾವು ಪಾಲಿಸಿ ಯಾವುದೇ ಅಡ್ಡಿ ಬಂದರೂ ಸಹ ದೇವರ ಬ್ರಹ್ಮ ರಥೋತ್ಸವ ಹಾಗೂ ಕರಗ ಮಹೋತ್ಸವವನ್ನು ನಡೆಸುತ್ತೇವೆ ಎಂದು ಶರತ್ ಬಚ್ಚೇಗೌಡ ಖಡಕ್ ಎಚ್ಚರಿಕೆ ನೀಡಿದ್ದಾರೆ. ಇದೀಗ ಈ ವಿವಾದ ಯಾವ ರೀತಿಯ ಸ್ವರೂಪ ಪಡೆದುಕೊಳ್ಳುತ್ತದೇಯೋ ಮುಂಬರುವ ದಿನಗಳಲ್ಲಿ ತಾಲೂಕಿನಲ್ಲಿ ನಡೆಯುವ ಎಲ್ಲಾ‌ ಧಾರ್ಮಿಕ ಮತ್ತು ಸಾಂಪ್ರದಾಯಿಕ ಆಚರಣೆಗಳಲ್ಲಿ ತಲೆದೂರುವ ಸಾಧ್ಯತೆಗಳಿವೆಯೆಂಬುದು ಸಾರ್ವಜನಿಕರಲ್ಲಿ ಪಿಸು ಮಾತುಗಳು ಆರಂಭವಾಗಿವೆ.
 

PREV
Read more Articles on
click me!

Recommended Stories

Breaking ಮಂಡ್ಯ ಬಸ್ ಅಪಘಾತದಲ್ಲಿ 23 ಪ್ರಯಾಣಿಕರಿಗೆ ಗಾಯ, ಇಬ್ಬರು ಗಂಭೀರ
ಸಿಎಂ, ಡಿಸಿಎಂ ನಡುವೆ ಬೂದಿ ಮುಚ್ಚಿದ ಕೆಂಡದ ಪರಿಸ್ಥಿತಿ: ಸಂಸದ ಜಗದೀಶ್ ಶೆಟ್ಟರ್