ದಾವಣಗೆರೆ: ಬಾಪೂಜಿ ಸಂಸ್ಥೆ ಮೇಲೆ ಐಟಿ ದಾಳಿ ಆಗಿಲ್ಲ, ಶಾಮನೂರು ಪ್ರತಿಕ್ರಿಯೆ

By Kannadaprabha News  |  First Published Feb 18, 2021, 10:05 AM IST

ಐಟಿ ದಾಳಿಯ ಬಗೆಗಿನ ಸುದ್ದಿಯನ್ನು ಸಂಪೂರ್ಣವಾಗಿ ಅಲ್ಲಗೆಳೆದ ಶಾಮನೂರು ಶಿವಶಂಕರಪ್ಪ| ಬಾಪೂಜಿ ವಿದ್ಯಾಸಂಸ್ಥೆಗಳ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆದಿಲ್ಲ| 


ದಾವಣಗೆರೆ(ಫೆ.18): ಹಿರಿಯ ರಾಜಕಾರಣಿ, ದಾವಣಗೆರೆ ದಕ್ಷಿಣ ಶಾಸಕ ಶಾಮನೂರು ಶಿವಶಂಕರಪ್ಪ ಅವರ ಒಡೆತನದ ಬಾಪೂಜಿ ವಿದ್ಯಾಸಂಸ್ಥೆಗಳ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿರುವುದಾಗಿ ಇಲಾಖೆ ಮೂಲಗಳಿಂದ ತಿಳಿದುಬಂದಿದ್ದರೂ ಅಂತಹ ಯಾವುದೇ ದಾಳಿ ನಡೆದಿಲ್ಲ ಎಂಬುದಾಗಿ ಸ್ವತಃ ಶಾಮನೂರು ಶಿವಶಂಕರಪ್ಪ ಸ್ಪಷ್ಟಪಡಿಸಿದ್ದಾರೆ. 

ಈ ಬಗ್ಗೆ ಕನ್ನಡಪ್ರಭ ಪ್ರತಿನಿಧಿಯೊಂದಿಗೆ ಮಾತನಾಡಿರುವ ಅವರು ಐಟಿ ದಾಳಿಯ ಬಗೆಗಿನ ಸುದ್ದಿಯನ್ನು ಸಂಪೂರ್ಣವಾಗಿ ಅಲ್ಲಗೆಳೆದಿದ್ದಾರೆ. ರಾಜ್ಯದ ಆರೇಳು ಕಡೆ ವೈದ್ಯಕೀಯ ಕಾಲೇಜುಗಳ ಮೇಲೆ ದಾಳಿ ಮಾಡಿರುವ ರೀತಿಯಲ್ಲಿ ನಮ್ಮ ಕಾಲೇಜುಗಳ ಮೇಲೂ ದಾಳಿ ನಡೆದಿದೆ ಎಂದು ಬೆಳಗ್ಗೆ 11.30ಕ್ಕೆ ನನಗೆ ಮಾಧ್ಯಮಗಳ ಮೂಲಕ ತಿಳಿಯಿತು. 

Tap to resize

Latest Videos

ದಾವಣಗೆರೆ: ಕಾಂಗ್ರೆಸ್‌ ಮುಖಂಡ ಶಾಮನೂರು ಒಡೆತನದ ಕಾಲೇಜಿನ ಮೇಲೆ ದಾಳಿ

ತಕ್ಷಣವೇ ನಾನು ನಮ್ಮ ಸಂಸ್ಥೆಯ ಎರಡೂ ವೈದ್ಯಕೀಯ ಕಾಲೇಜು, ದಂತ ವೈದ್ಯಕೀಯ ಕಾಲೇಜುಗಳ ಪ್ರಾಚಾರ್ಯರು, ಆಡಳಿತಾಧಿಕಾರಿಗಳಿಗೆ ಕರೆ ಮಾಡಿ ವಿಚಾರಿಸಿದ್ದು, ಯಾವುದೇ ದಾಳಿ ಆಗಿಲ್ಲ ಎಂದು ಸ್ಪಷ್ಟಪಡಿಸಿದರು ಎಂದು ಹೇಳಿದ್ದಾರೆ.
 

click me!