ದಷ್ಟಪುಷ್ಟರಾಗಿದ್ದ ಸಹೋದರರನ್ನು ಬಲಿಪಡೆದ ಕೊರೋನಾ

Published : Jun 02, 2021, 05:43 PM IST
ದಷ್ಟಪುಷ್ಟರಾಗಿದ್ದ ಸಹೋದರರನ್ನು ಬಲಿಪಡೆದ ಕೊರೋನಾ

ಸಾರಾಂಶ

* ಗುಂಡುಕಲ್ಲಿನಂತಿದ್ದ ಸೋದರರನ್ನು ಬಲಿ ಪಡೆದ ಕೊರೋನಾ * ಮನೆಯ ಹಿರಿಜೀವಗಳನ್ನು ಕಿತ್ತುಕೊಂಡ ಕ್ರೂರಿ * ಹಿರಿಯ ಜೀವಗಳನ್ನು ಕಳೆದುಕೊಂಡ ಕುಟುಂಬಸ್ಥರು ಕಂಗಾಲು

ಧಾರವಾಡ, (ಜೂನ್.02): ಕೊರೋನಾ ಎರಡನೇ ಕೊಂಚ ಕಡಿಮೆಯಾಗಿದೆ. ಆದ್ರೆ, ಕ್ರೂರಿ ಕೊರೋನಾ ಬಲಿ ಪಡೆಯುತ್ತಿರುವವ ಸಂಖ್ಯೆ ಮಾತ್ರ ಕಡಿಮೆಯಾಗಿಲ್ಲ. 

ಹೌದು....ಗುಂಡುಕಲ್ಲಿನಂತೆ ದಷ್ಟಪುಷ್ಟವಾಗಿದ್ದ ಸಹೋದರರನ್ನು ಕೊರೋನಾ ಮಹಾಮಾರಿ ಬಲಿಪಡೆದಿದೆ. ಈ  ಘಟನೆ ತಾಲೂಕಿನ ಮುಗದ ಗ್ರಾಮದಲ್ಲಿ ನಡೆದಿದೆ.

ಚಾಮರಾಜನಗರ : ಒಂದೇ ಕುಟುಂಬದ ನಾಲ್ವರೂ ಅತ್ಮಹತ್ಯೆಗೆ ಶರಣು

ದೈತ್ಯ ಕಾಯ ಮತ್ತು ಶ್ರಮಿಕ ವರ್ಗದ ಸಹೋದರರು ಗ್ರಾಮದಲ್ಲಿ ಎಲ್ಲರಿಗೂ ಬೇಕಾದವರು. ಮೊದಲು ಗ್ರಾಮದ ಸುಬ್ಬಪ್ಪ ಭೋವಿ ಅವರಲ್ಲಿ ಸೋಂಕು ಪತ್ತೆಯಾಗಿದ್ದು, ಖಾಸಗಿ ಆಸ್ಪತ್ರೆಯಲ್ಲಿ ನೀಡಿದ ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟಿದ್ದಾರೆ‌.

ಇದಾದ ಬಳಿಕ ಅವರ ಸಹೋದರ ಭರಮಪ್ಪ ಅವರಿಗೂ ಸೋಂಕು ಪತ್ತೆಯಾಗಿದ್ದು, ಅವರೂ ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟಿದ್ದಾರೆ. ಈ ಹಿರಿಯ ಜೀವಗಳನ್ನು ಕಳೆದುಕೊಂಡ  ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ.

PREV
click me!

Recommended Stories

'ಕುಡುಕರ ಲಿವರ್‌ಗೆ ಸರ್ಕಾರದ ಗ್ಯಾರಂಟಿ ಕೊಡಿ..' ಅಬಕಾರಿ ಆದಾಯ ಹೆಚ್ಚಿಸಲು ಖತರ್ನಾಕ್‌ ಐಡಿಯಾ ಕೊಟ್ಟ ಬಿಜೆಪಿ MLC
ನೆಲಮಂಗಲದಲ್ಲಿ ಹಸುವಿನ ಕತ್ತು ಕೊಯ್ದು ವಿಕೃತಿ ಮೆರೆದ ಕಳ್ಳರು; ಬೆಚ್ಚಿಬಿದ್ದ ಗ್ರಾಮಸ್ಥರು