ಬಿಜೆಪಿ ಶಾಸಕ ರಾಮದಾಸ್‌ ಹೆಗಲಿಗೆ ಮಹತ್ವದ ಜವಾಬ್ದಾರಿ

By Kannadaprabha NewsFirst Published Oct 14, 2021, 11:15 AM IST
Highlights
  • ಮುಂದಿನ ಚುನಾವಣೆಯಲ್ಲಿ ಬಿಜೆಪಿ ಗೆಲ್ಲಿಸುವ ದೃಷ್ಟಿಯಿಂದ ಕ್ಷೇತ್ರದಲ್ಲಿ ಸಂಘಟನಾತ್ಮಕವಾಗಿ ಬಲಪಡಿಸಲು ಒತ್ತು
  • ಕೃಷ್ಣರಾಜ ಕ್ಷೇತ್ರದ ಶಾಸಕ ಎಸ್‌.ಎ. ರಾಮದಾಸ್‌ ಅವರಿಗೆ ಮಹತ್ವದ ಜವಾಬ್ದಾರಿ

 ಮೈಸೂರು (ಅ.14):  ಟಿ. ನರಸೀಪುರ (T Narasipura) ವಿಧಾನಸಭಾ ಕ್ಷೇತ್ರವನ್ನು (Constituency) ಮುಂದಿನ ಚುನಾವಣೆಯಲ್ಲಿ (Election) ಬಿಜೆಪಿ (BJP) ಗೆಲ್ಲಿಸುವ ದೃಷ್ಟಿಯಿಂದ ಕ್ಷೇತ್ರದಲ್ಲಿ ಸಂಘಟನಾತ್ಮಕವಾಗಿ ಬಲಪಡಿಸಲು ಮಾಜಿ ಸಚಿವ ಹಾಗೂ ಕೃಷ್ಣರಾಜ ಕ್ಷೇತ್ರದ ಶಾಸಕ ಎಸ್‌.ಎ. ರಾಮದಾಸ್‌ (SA Ramadas) ಅವರನ್ನು ಉಸ್ತುವಾರಿಯಾಗಿ ನೇಮಿಸಲಾಗಿದ್ದು, ಈ ಹಿನ್ನೆಲೆಯಲ್ಲಿ ಮೊದಲ ಸಭೆ ನಡೆಸಿದರು.

ವಿದ್ಯಾರಣ್ಯಪುರಂನ ಶಾಸಕರ ಕಚೇರಿಯಲ್ಲಿ ನಡೆದ ಮೊದಲ ಸಭೆಯಲ್ಲಿ ಕ್ಷೇತ್ರದ ಮುಖಂಡರೊಡನೆ ಮಾತುಕತೆ ನಡೆಸಿದರು. ಸಭೆಯಲ್ಲಿ ಟಿ. ನರಸೀಪುರ ವಿಧಾನ ಮಂಡಲದ ಬಿಜೆಪಿ (BJP) ಪದಾಧಿಕಾರಿಗಳ ಅಭಿಪ್ರಾಯಗಳನ್ನು ಆಲಿಸಿದ ಶಾಸಕರು ಮಾತನಾಡಿ, ಟಿ. ನರಸೀಪುರ ಮಂಡಲದ ಬಿಜೆಪಿಯಲ್ಲಿ ಸಂಘಟನೆಯ ಜವಬ್ದಾರಿಯನ್ನು ನನಗೆ ನೀಡಿದ್ದು ಇನ್ನು ಮುಂದೆ ಬೂತ್‌ ಮಟ್ಟದಿಂದ ಕಾರ್ಯಕರ್ತರನ್ನು ಬಲಪಡಿಸಿ ರಾಜ್ಯ ಹಾಗೂ ಕೇಂದ್ರ ಸರ್ಕಾರದ (Central Govt) ಯೋಜನೆಯನ್ನು ಸಾರ್ವಜನಿಕರಿಗೆ ತಲುಪುವಂತೆ ಮಾಡಬೇಕು ಎಂದು ತಿಳಿಸದರು.

ಬೊಮ್ಮಾಯಿ ಸಾಹೇಬ್ರು ಕ್ಯಾಪ್ಟನ್, 29 ಪ್ಲೇಯರ್ಸ್, ನೋಡುವವರು ಕರ್ನಾಟಕದ 7 ಕೋಟಿ ಜನ!

ರಾಜ್ಯ ಸಂಘಟನೆಯು ಒಂದು ಕ್ಷೇತ್ರದ ಜವಬ್ದಾರಿ ತೆಗೆದುಕೊಳ್ಳಬೇಕು. ನನಗೆ ಯಾವ ಕ್ಷೇತ್ರ ಬೇಕೋ ಆ ಕ್ಷೇತ್ರದ ಆಯ್ಕೆಯನ್ನು ಮಾಡಲು ತಿಳಿಸಿತು. ಆದರೆ ನಾನು ಯಾವ ಕ್ಷೇತ್ರ ಕಷ್ಟಕರವಾಗಿದೆ ಆ ಕ್ಷೇತ್ರವನ್ನೇ ನನಗೆ ಜವಬ್ದಾರಿ ನೀಡಲು ಕೋರಿದ ನಂತರ ಟಿ.ನರಸೀಪುರದ ಜವಾಬ್ದಾರಿ ನೀಡಿರುತ್ತಾರೆ. ಪ್ರತಿಯೊಬ್ಬರು ಟಿ. ನರಸೀಪುರ ಕ್ಷೇತ್ರವನ್ನು ಬಿಜೆಪಿ ಕ್ಷೇತ್ರವನ್ನಾಗಿಸಲು ದುಡಿಯಬೇಕು ಎಂದು ಕರೆ ನೀಡಿದರು.

ಸಭೆಯಲ್ಲಿ ಮಾಜಿ ಶಾಸಕ ಭಾರತೀ ಶಂಕರ್‌, ಜಿಲ್ಲಾಧ್ಯಕ್ಷೆ ಮಂಗಳಾ ಸೋಮಶೇಖರ್‌, ವಿಧಾನ ಪರಿಷತ್‌ ಮಾಜಿ ಸದಸ್ಯ ಸಿ. ರಮೇಶ್‌, ಮೈಸೂರು ವಿಭಾಗದ ಪ್ರಭಾರಿ ಮೈ.ವಿ. ರವಿಶಂಕರ್‌ ಇದ್ದರು.

ಹಿಂದೆ ಸಂಪುಟ ವಿಸ್ತರಣೆ ವೇಳೆ ಅಸಮಾಧಾನಗೊಂಡಿದ್ದ ರಾಮದಾಸ್

 

ನಾನು ಮುಖ್ಯಮಂತ್ರಿ (CM ) ಅವರಿಗೆ  ಪತ್ರ (Letter) ಕೊಟ್ಟು ಬಂದಿದ್ದೇನೆ. ಅದನ್ನು ಕೊನೆಯವರೆಗೆ  ಓದಲು ಮನವಿ ಮಾಡಿದ್ದೇನೆ. ಕೆಟ್ಟದಿರಬಹುದು ಒಳ್ಳೆಯದಿರಬಹುದು  ನೋವಾಗಬಹುದು. ಆದರೆ  ರಾಜ್ಯದ  ಹಿತದೃಷ್ಟಿಯಿಂದ ಅದನ್ನು ಬರೆದಿದ್ದೇನೆ ಎಂದು ಮೈಸೂರು (Mysuru) ಕೆಆರ್ ಕ್ಷೇತ್ರದ ಬಿಜೆಪಿ ಶಾಸಕ ಹಾಗು ಮಾಜಿ ಸಚಿವ ಎಸ್‌ ಎ ರಾಮದಾಸ್ ಸಂಪುಟ ವಿಸ್ತರಣೆ  ವೇಳೆ ಅಸಮಾಧಾನ ತೋಡಿಕೊಂಡಿದ್ದರು.

ಮೈಸೂರಿಗೆ ಸಿಎಂ ಬಂದಾಗ ಯಾಕೆ ಭೇಟಿಯಾಗಿಲ್ಲ; ಮುಚ್ಚಿದ ಲಕೋಟೆಯಲ್ಲಿ ಉತ್ತರ ಕೊಟ್ಟ ರಾಮದಾಸ್!

 ನಾನು ಅಸಮಾಧಾನದಿಂದ ಸಿಎಂ ಭೇಟಿ ಮಾಡದೆ ಉಲಿದಿದ್ದಲ್ಲ. ಮುಖ್ಯಮಂತ್ರಿ ಅವರನ್ನು ಮೈಸೂರಿನಲ್ಲಿ ಯಾಕೆ ಭೇಟಿ ಮಾಡಿಲ್ಲ ಎಂಬುದರ ಬಗ್ಗೆ 6 ಪುಟಗಳ ವಿವರಾವದ ಪತ್ರ ಬರೆದಿದ್ದೆನೆ. ಸಮಾಧಾನ ಅಸಮಾಧಾನ ವಿಚಾರ ಇಲ್ಲ.   ಮುಂಬರುವ 2023ರ ಚುನಾವಣೆ (2023 Election) ದೃಷ್ಟಿಯಿಂದ ಜನರ ಭಾವನೆಗೆ ತಕ್ಕಂತೆ ಕೆಲಸ ಮಾಡಲು ಸೂಚಿಸಿದ್ದೇನೆ ಎಂದಿದ್ದರು.

ಯಾವುದೇ ಸಲಹೆ ಬೇಕಾದರು ಕೊಡಲು ನಾನು ಸಿದ್ದ. ಪ್ರಮುಖವಾದ ಅಂಶಗಳನ್ನು ಪತ್ರದಲ್ಲಿ ಬರೆಯಬೇಕಿತ್ತು ಬರೆದಿದ್ದೇನೆ ಎಂದರು. ಅಲ್ಲದೆ ಮೈಸೂರಿಗೆ ಮಂತ್ರಿ ಸ್ಥಾನ ಕೊಟ್ಟಿಲ್ಲ ಎನ್ನುವುದು ನಾನು ಹೇಳಬೇಕಿಲ್ಲ ಅವರಿಗೆ ಗೊತ್ತಿದೆ ಎಂದಿದ್ದರು.

click me!