ಕೆ.ಆರ್. ನಗರ (ಅ.14): ಪಟ್ಟಣದ ಪುರಸಭೆಯ ( Municipality) ಮಾಜಿ ಅಧ್ಯಕ್ಷೆ ಗೀತಾ ಮಹೇಶ್ (Geetha Mahesh) ಮತ್ತು ಅವರ ಪತಿ ಜೆಡಿಎಸ್‌ನ (JDS) ಪ್ರಭಾವಿ ದಲಿತ ಮುಖಂಡ ಮಹೇಶ್ (Mahesh) ಅವರು ಜೆಡಿಎಸ್ ಬಿಟ್ಟು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರ ಸಮ್ಮುಖದಲ್ಲಿ ಕಾಂಗ್ರೆಸ್ (congress) ಪಕ್ಷಕ್ಕೆ ಸೇರ್ಪಡೆಯಾದರು.
ಮೈಸೂರಿನ (Mysuru) ಸಿದ್ದರಾಮಯ್ಯ ಅವರ ನಿವಾಸದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ.ಬಿ.ಜೆ. ವಿಜಯಕುಮಾರ್ (BJ Vijayakumar) ಅಧ್ಯಕ್ಷತೆ ಮತ್ತು ಕೆಪಿಸಿಸಿ (KPCC) ಕಾರ್ಯಕಾರಿಣಿ ಸದಸ್ಯ ದೊಡ್ಡಸ್ವಾಮೇಗೌಡ ಹಾಗೂ ಜಿಪಂ ಮಾಜಿ ಸದಸ್ಯ ಡಿ. ರವಿಶಂಕರ್ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಕಾಂಗ್ರೆಸ್ ಸೇರಿದರು.
undefined
ಕಾಂಗ್ರೆಸ್‌ಗೆ ಸಿದ್ದರಾಮಯ್ಯರಿಂದಲೇ ಬೆಂಕಿ: ಕುಮಾರಸ್ವಾಮಿ
12ನೇ ನೇ ವಾರ್ಡಿನಿಂದ ಎರಡು ಬಾರಿ ಜೆಡಿಎಸ್ ಪಕ್ಷದ ಚಿಹ್ನೆಯಡಿ ಜಯಶಾಲಿಯಾಗಿದ್ದ ಗೀತಾಮಹೇಶ್ ಅವರು ಒಂದು ಬಾರಿ ಅಧ್ಯಕ್ಷರಾಗಿಯೂ (President) ಸೇವೆ ಸಲ್ಲಿಸಿದ್ದರು. ಅಲ್ಲದೆ ಅವರ ಪತಿ ಮಹೇಶ್ ಅವರು ದಲಿತ ಸಮಾಜದ ಪ್ರಭಾವಿ ಮುಖಂಡರು (Dalit Leader). ಸತತ ಎರಡು ಬಾರಿ ಪುರಸಭೆ ಸದಸ್ಯರಾಗಿ ಆಯ್ಕೆಯಾಗಿದ್ದರು. ಕಳೆದ ಚುನಾವಣೆಯಲ್ಲಿ (Election) 3ನೇ ಬಾರಿ ಸ್ಪರ್ಧಿಸಲು ಜೆಡಿಎಸ್‌ನಿಂದ ಅವಕಾಶ ನಿರಾಕರಿಸಿದ್ದರಿಂದ ಇವರಿಬ್ಬರು ಅಂದಿನಿಂದ ಮಾನಸಿಕವಾಗಿ ಪಕ್ಷ ಮತ್ತು ಅದರ ಕಾರ್ಯ ಚಟುವಟಿಕೆಯಿಂದ ದೂರ ಸರಿದಿದ್ದರು.
ಬದಲಾದ ರಾಜಕೀಯ ಸನ್ನಿವೇಶದಲ್ಲಿ ಮುಂಬರುವ ವಿಧಾನಸಭಾ ಚುನಾವಣೆಯ (Assembly Election) ಕಾಂಗ್ರೆಸ್ ಪಕ್ಷದ ಸಂಭಾವ್ಯ ಅಭ್ಯರ್ಥಿ ಡಿ. ರವಿಶಂಕರ್ ಅವರನ್ನು ಬೆಂಬಲಿಸಿ ಪಕ್ಷ ಸೇರಿದ ಇವರಿಬ್ಬರಿಗೆ ಮಾಜಿ ಮುಖ್ಯಮಂತ್ರಿಗಳು ಕಾಂಗ್ರೆಸ್ ಬಾವುಟ (Congress Flag) ನೀಡಿ ಸ್ವಾಗತ ಕೋರಿದರು.
News Hour: ಕಾಂಗ್ರೆಸ್‌ನಲ್ಲಿ ಕೋಲಾಹಲ.. ಸಿದ್ದರಾಮಯ್ಯ ಕುಮಾರಸ್ವಾಮಿಗೆ ಪುಟಗೋಸಿ ತಿರುಗೇಟು
ಶಾಸಕ ಡಾ. ಯತೀಂದ್ರ ಸಿದ್ದರಾಮಯ್ಯ, ಮಾಜಿ ಶಾಸಕ ಎಂ.ಕೆ. ಸೋಮಶೇಖರ್, ಕೆಪಿಸಿಸಿ ಸದಸ್ಯ ಕೆ. ಮರೀಗೌಡ, ಕೆ.ಆರ್. ನಗರ ಪುರಸಭೆ ಅಧ್ಯಕ್ಷ ಕೆ.ಜಿ. ಸುಬ್ರಹ್ಮಣ್ಯ, ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ನಟರಾಜು, ಉಪಾಧ್ಯಕ್ಷೆ ಸೌಮ್ಯ ಲೋಕೇಶ್, ಸದಸ್ಯರಾದ ಕೋಳಿಪ್ರಕಾಶ್, ಪಲ್ಲವಿ ಆನಂದ್, ಅಶ್ವಿನಿ ಪುಟ್ಟಸ್ವಾಮಿ, ಶಂಕರ್, ಕೆ. ವಿನಯ್, ಶಾರದಾ ನಾಗೇಶ್, ಮಿಕ್ಸರ್‌ಶಂಕರ್, ಶಿವುನಾಯಕ್, ಸೈಯದ್‌ಸಿದ್ದಿಕ್, ಮಾಜಿ ಸದಸ್ಯರಾದ ಕೆ.ಎಲ್. ಕುಮಾರ್, ಜಾವೀದ್‌ಪಾಷಾ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಎಂ.ಎಸ್. ಮಹದೇವ್, ಉದಯಕುಮಾರ್, ಎಂ.ಜೆ. ರಮೇಶ್, ವಕ್ತಾರ ಸೈಯದ್‌ಜಾಬೀರ್, ತಾಲೂಕು ಕುರುಬರ ಸಂಘದ ಅಧ್ಯಕ್ಷ ಜೆ. ಶಿವಣ್ಣ, ವಕೀಲರಾದ ಎಂ.ಬಿ. ಮೂರ್ತಿ, ಜಿ.ಎಲ್. ಧರ್ಮ, ಹರೀಶ್, ಪ್ರಸಾದ್, ಕಾಂಗ್ರೆಸ್ ಮುಖಂಡರಾದ ಡಿ.ಕೆ. ಕೊಪ್ಪಲುರಾಜಯ್ಯ, ಕೆ.ಎಸ್. ಮಹೇಶ್, ಶಾಂತಿರಾಜ್, ಶ್ರೀನಿವಾಸ್, ಜಯಂತ್, ದಿಡ್ಡಹಳ್ಳಿ ಬಸವರಾಜು, ಸಾ.ಮಾ. ಯೋಗೇಶ್, ನಂದೀಶ್, ಚಿಬುಕಹಳ್ಳಿ ಬಲರಾಮ, ಚಂದ್ರು, ಸುಖೇಂದ್ರ, ಮೂಡಲಕೊಪ್ಪಲು ಕೃಷ್ಣೇಗೌಡ, ನವೀನ್ ರಂಗಶೆಟ್ಟಿಮೊದಲಾದವರು ಇದ್ದರು.