'ಸಚಿವ ಸ್ಥಾನದ ಆಸೆಯಿಲ್ಲ: ಕೊಟ್ರೆ ಬೇಡ ಅನ್ನಲ್ಲ'..!

By Kannadaprabha NewsFirst Published Aug 4, 2019, 12:18 PM IST
Highlights

ನನಗೆ ಸಚಿವ ಸ್ಥಾನದ ಆಸೆ ಇಲ್ಲ. ಕೊಟ್ಟರೆ ಮಾಡೋಕೆ ರೆಡಿ ಅನ್ನೋ ಮೂಲಕ ಸ್ಥಾನಸ ಆಸೆ ಇಲ್ಲ, ಕೊಟ್ರೆ ಬೇಡ ಅನ್ನಲ್ಲ ಎಂದಿದ್ದಾರೆ ಶಾಸಕ ಪ್ರೀತಂ ಗೌಡ. ಸಚಿವ ಸ್ಥಾನಕ್ಕಾಗಿ ಒತ್ತಡ ಹೇರುವುದಿಲ್ಲ. ಅವಕಾಶ ಸಿಕ್ಕರೆ ಸಚಿವನಾಗಲು ರೆಡಿ ಎಂದು ಅವರು ಹೇಳಿದ್ದಾರೆ.

ಹಾಸನ(ಆ.04): ನನಗೆ ಸಚಿವ ಸ್ಥಾನದ ಆಸೆ ಇಲ್ಲ. ನಾನು ಯಾವುದೇ ಸಚಿವ ಸ್ಥಾನದ ಆಸೆ ಇಟ್ಟು ಕೊಂಡಿಲ್ಲ. ಅದಕ್ಕಾಗಿ ಯಡಿಯೂರಪ್ಪ ಅವರಿಗಾಗಲಿ, ಪಕ್ಷಕ್ಕಾಗಲಿ ಯಾವುದೇ ಒತ್ತಡ ಹೇರುವುದಿಲ್ಲ. ನನ್ನನ್ನು ಗುರುತಿಸಿ ಕೆಲಸ ಮಾಡಲಿಕ್ಕೆ ಹೇಳಿದ್ದಾರೆ. ಅವಕಾಶ ಸಿಕ್ಕರೆ ಸಚಿವನಾಗಲು ರೆಡಿ ಎಂದು ಶಾಸಕ ಪ್ರೀತಂಗೌಡ ಹೇಳಿದರು.

ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಲ್ಲೆಯಲ್ಲಿ ಶೀಘ್ರದಲ್ಲೆ ಅಭಿವೃದ್ಧಿ ಪರ್ವ ಆರಂಭವಾಗಲಿದೆ. ಯಡಿಯೂರಪ್ಪ ಮುಖ್ಯಮಂತ್ರಿಯಾದೇ ಪ್ರೀತಂಗೌಡ ಸಿಎಂ ಆದ ಹಾಗೆ ಎಂದರು.

ಕಾಂಗ್ರೆಸ್‌ ಮತ್ತು ಜೆಡಿಎಸ್‌ ಸಮ್ಮಿಶ್ರ ಸರ್ಕಾದ ಪತನದ ಹಿಂದೆ ಬಿಜೆಪಿ ಯಾವುದೇ ಕೈವಾಡ ಇಲ್ಲ. ಕೇವಲ ಯಾವುದೋ ಒಂದು ಪ್ರದೇಶದಲ್ಲಿ 400-500 ಕೋಟಿ ಕಟ್ಟಡ ಕಟ್ಟಿದರೆ ಅದು ಅಭಿವೃದ್ಧಿ ಆಗಲ್ಲ, ಜನ ಸಾಮಾನ್ಯರ ಅಭಿವೃದ್ಧಿ ಮೂಲಕ ಅಭಿವೃದ್ಧಿ ಎಂದರೆ ಏನು ಎಂದು ಮುಂದಿನ ದಿನಗಳಲ್ಲಿ ತೋರಿಸಲಾಗುವುದು ಎಂದು ಮಾಜಿ ಸಚಿವ ರೇವಣ್ಣಗೆ ಟಾಂಗ್‌ ನೀಡಿದರು.

ಜಿಲ್ಲೆಯಲ್ಲಿ ಯಾವುದು ಜನಪರ ಕೆಲಸವೋ ಅದು ಮುಂದು ವರಿಯುತ್ತದೆ. ಜಿಲ್ಲೆಯಲ್ಲಿ ಆಧುನಿಕ ಬ್ರಿಟಿಷರ ಆಡಳಿತ ಜಾರಿಯಲ್ಲಿತ್ತು. ಒಬ್ಬ ಶಾಸಕ ಅನ್ನೋ ಕನಿಷ್ಠ ಸೌಜನ್ಯ ತೋರದೆ ನಿಕೃಷ್ಟವಾಗಿ ನಡೆಸಿಕೊಂಡರು ಎಂದು ರೇವಣ್ಣ ವಿರುದ್ಧ ಹರಿಹಾಯ್ದರು.

'17 ಅನರ್ಹ ಶಾಸಕರು ಬಿಎಸ್‌ವೈ ಅವ್ರನ್ನು ಕಿತ್ತು ತಿಂತಾರೆ'

ಅಧಿಕಾರ ಶಾಶ್ವತ ಅಲ್ಲ. ನಾನು ಅವರಿಗಿಂತ (ರೇವಣ್ಣ) ಹೆಚ್ಚಾಗಿ ದೇವರನ್ನು ನಂಬುವವನು. ಭಗವಂತ ಈಗ ನನ್ನ ಪರವಾಗಿದ್ದಾನೆ. ಬಿಜೆಪಿ ಅಧಿಕಾರಕ್ಕೆ ಬಂದು ಯಡಿಯೂರಪ್ಪ ಸಿಎಂ ಆಗಬೇಕು ಎನ್ನೋದು ರಾಜ್ಯದ ಜನರ ಆಸೆಯಿತ್ತು. ಭಗವಂತ ಆಶೀರ್ವಾದದಿಂದ ತಡವಾಗಿಯಾದರೂ ಬಿಜೆಪಿ ಅಧಿಕಾರಕ್ಕೆ ಬಂದಿದೆ ಎಂದರು.

ಕರ್ನಾಟಕ ರಾಜಕೀಯದ ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

click me!