ಸಾಯುವಾಗಲೂ ಕರ್ತವ್ಯ ಪ್ರಜ್ಞೆ ಮೆರೆದ ಚಾಲಕ..!

Published : Aug 04, 2019, 11:35 AM ISTUpdated : Aug 04, 2019, 12:54 PM IST
ಸಾಯುವಾಗಲೂ ಕರ್ತವ್ಯ ಪ್ರಜ್ಞೆ ಮೆರೆದ ಚಾಲಕ..!

ಸಾರಾಂಶ

ಸರ್ಕಾರಿ ಬಸ್‌ ಚಾಲಕ ಕರ್ತವ್ಯದ ಸಂದರ್ಭದಲ್ಲಿಯೇ ಹೃದಯಾಘಾತದಿಂದ ಮೃತಪಟ್ಟಿರುವ ಘಟನೆ ಕೋಲಾರದ ಚಿಂತಾಮಣಿಯಲ್ಲಿ ನಡೆದಿದೆ. ಸಾಯುವ ಸಂದರ್ಭದಲ್ಲಿಯೂ ಬಸ್‌ ನಿಲ್ಲಿಸಿದ್ದ ಚಾಲಕನ ಕರ್ತವ್ಯ ಪ್ರಜ್ಞೆ ಬಗ್ಗೆ ಸಾರ್ವಜನಿಕರಿಂದ ಪ್ರಶಂಸೆ ವ್ಯಕ್ತವಾಗಿದೆ.

ಕೋಲಾರ(ಆ.04): ಸರ್ಕಾರಿ ಬಸ್‌ ಚಾಲಕ ಕರ್ತವ್ಯದಲ್ಲಿದ್ದಾಗಲೇ ಹೃದಯಾಪಘಾತವಾಗಿ ನಿಧನರಾಗಿರುವ ಘಟನೆ ಚಿಂತಾಮಣಿಯಲ್ಲಿ ನಡೆದಿದೆ.

ತಾಲೂಕಿನ ದೊಡ್ಡಹಳ್ಳಿ ಗ್ರಾಮದಲ್ಲಿ ಶುಕ್ರವಾರ ತಡರಾತ್ರಿ ಬಸ್‌ ಚಾಲನೆ ಮಾಡಿಕೊಂಡು ಬಂದು ನಿಲ್ಲಿಸಿದ ಚಾಲಕ ಶ್ರೀರಾಮಪ್ಪ (52) ಕುಳಿತಲ್ಲಿಯೇ ಹೃದಯಾಘಾತವಾಗಿ ಮೃತಪಟ್ಟಿದ್ದಾರೆ. ನಿರ್ವಾಹಕ, ಗ್ರಾಮಸ್ಥರು, ಘಟಕ ವ್ಯವಸ್ಥಾಪಕ ಅಪ್ಪಿರೆಡ್ಡಿ ಕೂಡಲೇ ಸ್ಥಳಕ್ಕೆ ದೌಡಾಯಿಸಿ ಚಾಲಕನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ವೈದ್ಯರು ಪರೀಕ್ಷಿಸಿ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.

ಸಾರ್ವಜನಿಕರಿಂದ ಪ್ರಶಂಸೆ:

ಬಸ್‌ ಚಾಲನೆ ವೇಳೆ ಅಘಾತವಾಗದೆ ಬಸ್‌ ನಿಲ್ಲಿಸಿದ ನಂತರ ಹೃದಯಾಪಘಾತವಾಗಿ ಚಾಲಕ ಮೃತ ಶ್ರೀರಾಮಪ್ಪ ಮೃತಪಟ್ಟಿದ್ದು, ಅಂತ್ಯಕಾಲದಲ್ಲಿಯೂ ಕರ್ತವ್ಯಪ್ರಜ್ಞೆ ಮೆರೆದಿರುವ ಚಾಲಕನಿಂದಾಗಿ ಬಸ್ಸಿನಲ್ಲಿದ್ದ ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ ಎಂದು ಸಾರ್ವಜನಿಕರು ಪ್ರಶಂಸಿದ್ದಾರೆ.

ಮೈಸೂರು: ಚಾಲಕನ‌ ಸಮಯ ಪ್ರಜ್ಞೆ; ತಪ್ಪಿತು ಭಾರೀ ದುರಂತ

ಘಟಕ ವ್ಯವಸ್ಥಾಪಕ ಅಪ್ಪಿರೆಡ್ಡಿ , ವಿಭಾಗೀಯ ಸಂಚಲನಾಧಿಕಾರಿ ಮಂಜುನಾಥ್‌, ಕಾರ್ಮಿಕ ಕಲ್ಯಾಣಾಧಿಕಾರಿ ಜಿ. ಶಾಂತ, ಭದ್ರತಾ ನಿರೀಕ್ಷಕ ಉಮೇಶ್‌, ಸಹಾಯಕ ಕಾರ್ಯಧೀಕ್ಷಕಿ ಸರಿತಾ, ಚಾಕಲರು, ನಿರ್ವಾಕರು , ತಾಂತ್ರಿಕ ಹಾಗೂ ಆಡಳಿತ ಸಿಬ್ಬಂದಿ ಆಗಮಿಸಿ ಮೃತರ ಅಂತಿಮ ದರ್ಶನ ಪಡೆದು ಶ್ರದ್ಧಾಂಜಲಿ ಸಲ್ಲಿಸಿದರು.

ಕರ್ನಾಟಕ ರಾಜಕೀಯದ ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

PREV
click me!

Recommended Stories

ಪುಟಿನ್‌ಗೆ ಇಲ್ಲೇ ಎಲೆಕ್ಷನ್‌ ನಿಲ್ಲೋಕೆ ಟಿಕೆಟ್‌ ಕೊಡ್ತಾರೆ ಅಂದ್ಕೊಂಡಿದ್ದೆ.. ಸಂತೋಷ್‌ ಲಾಡ್‌ ಲೇವಡಿ
ಗಡುವು ಮೀರಿಸಿದರೆ ಮುಂದೆ ಕೆಲಸವಿಲ್ಲ: ಮೆಟ್ರೋ ಗುತ್ತಿಗೆದಾರರಿಗೆ ಡಿ.ಕೆ.ಶಿವಕುಮಾರ್‌ ಎಚ್ಚರಿಕೆ