ಮಹಿಳೆಗೆ ಬಿಎಸ್‌ ವೈ ಸಂಪುಟದಲ್ಲಿ ವಿಸ್ತರಣೆ ವೇಳೆ ಸಚಿವ ಸ್ಥಾನ?

Kannadaprabha News   | Asianet News
Published : Nov 09, 2020, 02:41 PM ISTUpdated : Nov 09, 2020, 03:15 PM IST
ಮಹಿಳೆಗೆ ಬಿಎಸ್‌ ವೈ ಸಂಪುಟದಲ್ಲಿ ವಿಸ್ತರಣೆ ವೇಳೆ ಸಚಿವ ಸ್ಥಾನ?

ಸಾರಾಂಶ

ಶಾಸಕಿಯೋರ್ವರಿಗೆ ಸಂಪುಟ ವಿಸ್ತರಣೆ ವೇಳೆ ಸಚಿವ ಸ್ಥಾನ ಸಿಗುತ್ತಾ..? ಈ ಬಗ್ಗೆ ಚರ್ಚೆಗಳು ನಡೆಯುತ್ತಿವೆ. 

ಚಳ್ಳಕೆರೆ(ನ.09): ಯಾದವ ಮಹಿಳಾ ಸಮುದಾಯದ ರಾಷ್ಟ್ರೀಯ ಅಧ್ಯಕ್ಷೆ, ಹಿರಿಯೂರು ಕ್ಷೇತ್ರದ ಶಾಸಕಿ ಪೂರ್ಣಿಮಾ ಶ್ರೀನಿವಾಸ್‌ ಅವರಿಗೆ ಸಚಿವ ಸ್ಥಾನ ನೀಡುವಂತೆ ಯಾದವ ಸಮುದಾಯದ ಮುಖಂಡರು ಆಗ್ರಹಿಸಿದ್ದಾರೆ. 

ಶಾಸಕಿ ಪೂರ್ಣಿಮಾ ಶ್ರೀನಿವಾಸ್‌ ಅವರಿಗೆ ರಾಷ್ಟ್ರೀಯ ಮಹಿಳಾ ಮೋರ್ಚಾ ಅಧ್ಯಕ್ಷೆ ಸ್ಥಾನ ನೀಡುವ ಮೂಲಕ ಅವರ ಪ್ರಗತಿಪರ ಕಾರ್ಯಕ್ರಮಗಳಿಗೆ ಹಾಗೂ ಇಡೀ ಸಮುದಾಯಕ್ಕೆ ಗೌರವ ನೀಡಿದಂತಾಗಿದೆ. ಇದೇ ಸಂದರ್ಭದಲ್ಲಿ ಶಾಸಕಿ ಪೂರ್ಣಿಮಾ ಶ್ರೀನಿವಾಸ್‌ಗೆ ಸರ್ಕಾರದಲ್ಲಿ ಸಚಿವ ಸ್ಥಾನ ನೀಡಬೇಕೆಂದು ಆಗ್ರಹಿಸಿದ್ದಾರೆ.

'ಕಾಂಗ್ರೆಸ್ ಸೋಲಿಗೆ ಡಿಕೆಶಿ-ಸಿದ್ರಾಮಯ್ಯರಿಂದಲೇ ಮಾಸ್ಟರ್ ಪ್ಲಾನ್ : ಬಿಜೆಪಿ ಗೆಲುವು ಕನ್ಫರ್ಮ್'

ತಾಲೂಕು ಯಾದವ ಸಮುದಾಯದ ಹಿರಿಯ ಮುಖಂಡ ಕೆ.ಹನುಮಂತಪ್ಪ, ಜೆ.ಕೆ.ಈರಣ್ಣ, ಕಾಟಪ್ಪನಹಟ್ಟಿವೀರೇಶ್‌, ಇಂಡಸ್‌ ವ್ಯಾಲಿ ಚಿಕ್ಕಣ್ಣ, ಜೆಎಂಸಿ ವೀರೇಶ್‌, ತಿಪ್ಪೇಸ್ವಾಮಿ, ಎಚ್‌.ಮಹಲಿಂಗಪ್ಪ, ಹುಲಿಕುಂಟೆ ವೈ.ಕಾಂತರಾಜು, ಶ್ರೀಕಾಂತ್‌, ಮೂಡಲಗಿರಿಯಪ್ಪ ಸರ್ಕಾರವನ್ನು ಒತ್ತಾಯಿಸಿದ್ದಾರೆ.

PREV
click me!

Recommended Stories

ಸಿಎಂ ಗೊಂದಲಕ್ಕೆ ಮತ್ತೆ ಬೆಂಕಿ: ಸಿದ್ದರಾಮಯ್ಯ 5 ವರ್ಷ ಸಿಎಂ, ಬದಲಾದರೆ ಡಿಕೆಶಿ ಒಬ್ರೇ ರೇಸ್‌ನಲ್ಲಿಲ್ಲ..; - ಕೆಎನ್ ರಾಜಣ್ಣ
ಬೆಂಗಳೂರು ಜನರಿಗೆ ಹೊಟ್ಟೆತುಂಬಾ ಬಿರಿಯಾನಿ ಬಾಡೂಟ ಕೊಟ್ಟ ಕುಟುಂಬ ಸಾಲದ ಸುಳಿಗೆ ಸಿಲುಕಿ ಆತ್ಮ*ಹತ್ಯೆ!