ಖಾತೆಯಲ್ಲಿ ಲಕ್ಷಾಂತರ ರು ಹಣವಿದ್ದರೂ ಭಿಕ್ಷುಕರಂತೆ ಬದುಕುತ್ತಿದ್ದ ನಿವೃತ್ತ ಪೊಲೀಸ್ ಅಧಿಕಾರಿಯೋರ್ವರಿಗೆ ನೆರವು ನೀಡಲಾಗಿದೆ.
ಚಿಕ್ಕಬಳ್ಳಾಪುರ (ನ.09): ಖಾತೆಯಲ್ಲಿ ಲಕ್ಷಾಂತರ ಹಣವಿದ್ದರೂ ಬೀದಿ ಬದಿಯಲ್ಲಿ ಭಿಕ್ಷೆ ಬೇಡಿ ಚಿಂದಿ ಆಯ್ದುಕೊಂಡು ಜೀವನ ನಡೆಸುತ್ತಿದ್ದ ಮಾಜಿ ಪೊಲೀಸ್ ಅಧಿಕಾರಿಗೆ ಪೊಲೀಸ್ ಅಧಿಕಾರಿಗಳು ನೆರವು ನೀಡಿದ್ದಾರೆ.
ಪೊಲೀಸ್ ಇಲಾಖೆಯಲ್ಲಿ ಸಬ್ ಇನ್ಸ್‌ಪೆಕ್ಟರ್ ಆಗಿದ್ದ ಮಧುಸೂದನ್ ರಾವ್ 2011ರಲ್ಲಿ ವಾಲೆಂಟರಿ ರಿಟೈರ್‌ಮೆಂಟ್ ತೆಗೆದುಕೊಂಡಿದ್ದರು. ಅವರಿಗೆ ಓರ್ವ ಮಗ ಹಾಗೂ ಇಬ್ಬರು ಹೆಣ್ಣು ಮಕ್ಕಳಿದ್ದು ಎಲ್ಲರಿಗೂ ವಿವಾಹವಾಗಿದೆ.
ಪತ್ನಿ ಅನಾರೋಗ್ಯದಿಂದ ಮೃತಪಟ್ಟಿದ್ದು, ರಿಟೈರ್‌ಮೆಂಟ್ ಬಳಿಕ ಅವರು ಮದ್ಯದ ದಾಸರಾಗಿದ್ದು, ಇದರಿಂದ ಅವರನ್ನು ಮನೆಯಿಂದ ಹೊರಹಾಕಲಾಗಿತ್ತು. ಇದರಿಂದ ಖಿನ್ನತೆಗೆ ಒಳಗಾದ ಅವರು ಮದ್ಯ ಸೇವನೆ ಹೆಚ್ಚು ಹಚ್ಚು ಮಾಡುತ್ತಿದ್ದು, ಕುಟುಂಬದಲ್ಲಿ ಅಸಮಾಧಾನ ಭುಗಿಲೆದ್ದಿತು. ಬಳಿಕ ಭಿಕ್ಷೆ ಬೇಡಿ ಚಿಂದಿ ಆಯ್ದು ಬದುಕುತ್ತಿದ್ದರು.
ಪಡಿತರ ವಿತರಣೆಯಲ್ಲಿ ಫಲಾನುಭವಿಗಳ ಸಮಸ್ಯೆ: ರಾಜ್ಯದಲ್ಲಿ ಮೊದಲ ಬಾರಿಗೆ ಆಹಾರ ಅದಾಲತ್ ..
ಬ್ಯಾಂಕ್ ಖಾತೆಯಲ್ಲಿ ಲಕ್ಷ ಲಕ್ಷ ಹಣ ಇದ್ದರೂ ಬೀದಿ ಬದಿಯಲ್ಲಿ ಮಲಗಿ ಜೀವನ ಸಾಗಿಸುತ್ತಿದ್ದರು. ಇದನ್ನು ನೋಡಿದ ಚಿಂತಾಮಣಿ ಪೊಲೀಸ್ ಠಾಣೆ ಸಿಪಿಐ ಆನಂದ್ ಕುಮಾರ್ ಮತ್ತು ಸಿಬ್ಬಂದಿ ಮಧುಸೂದನ್ ರಾವ್ ಅವರನ್ನು ಠಾಣೆಗೆ ಕರೆದುಕೊಂಡು ಹೋಗಿ ಗಡ್ಡ ತೆಗೆದು ಕೂದಲು ಕತ್ತರಿಸಿ ಹೊಸ ಬಟ್ಟೆ ಹಾಕಿ ಶುದ್ಧ ಮಾಡಿಸಿದರು. ಅಲ್ಲದೇ ಅವರ ಜೀವನಕ್ಕೆ ಅಗತ್ಯ ನೆರವು ನೀಡಲು ಮುಂದಾಗಿದ್ದು ಇದಕ್ಕೆ ಹಲವರಿಂದ ಶ್ಲಾಘನೆ ವ್ಯಕ್ತವಾಗಿದೆ.
ಈ ಬಗ್ಗೆ ಡೈಲಿ ತಂತಿ ವರದಿ ಮಾಡಿದ್ದು ಈ ವಿಚಾರ ಬೆಳಕಿಗೆ ಬಂದಿತ್ತು.