ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಅಧಿಕಾರ ಸ್ವೀಕಾರ ಮಾಡಿದ ಶಾಸಕ ಎನ್.ಎ. ಹ್ಯಾರಿಸ್ ಅವರು ಮೊದಲ ದಿನವೇ ಮುಖ್ಯವಾದ ಶಪಥವೊಂದನ್ನು ಮಾಡಿದ್ದಾರೆ.
ಬೆಂಗಳೂರು (ಜ.29): ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ನಾನು ಬೆಂಗಳೂರಿನ ಜನಕ್ಕೆ ಅನುಕೂಲವಾಗುವ ರೀತಿ ಕೆಲಸ ಮಾಡಲು ನನ್ನ ಪ್ರಯತ್ನ ಮತ್ತು ಶ್ರಮಿಸುತ್ತೇನೆ. ಮುಖ್ಯವಾಗಿ ಪಾರದರ್ಶಕ ಆಡಳಿತ (Transparency) ಹಾಗೂ ಜನಸ್ನೇಹಿಯಾಗಿ ಮಾಡುತ್ತೇನೆ ಎಂದು ಬಿಡಿಎ ಅಧ್ಯಕ್ಷ ಎನ್.ಎ. ಹ್ಯಾರಿಸ್ ಶಪಥ ಮಾಡಿದ್ದಾರೆ.
ಅಲ್ಲದೇ ಸನ್ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ನನ್ನ ಮೇಲೆ ನಂಬಿಕೆಯಿಟ್ಟು ಅವಕಾಶ ಕೊಟ್ಟಿದ್ದಾರೆ. ಆ ನಂಬಿಕೆಗೆ ಚ್ಯುತಿ ಬಾರದಂತೆ ಶೇ.100 ರಷ್ಟು ಕಾರ್ಯವನ್ನು ಪೂರೈಸುತ್ತೇನೆ ಎಂದು ತಿಳಿಸಿದರು. ಇಲ್ಲಿ ಯಾವುದಾದರೂ ಸಮಸ್ಯೆಗಳೇನಾದರೂ ಇದ್ದರೆ ಅದನ್ನು ಇನ್ನೆರಡು ಮೂರು ದಿನಗಳಲ್ಲಿ ಅಧಿಕಾರಿಗಳ ಜೊತೆ ಸಭೆ ನಡೆಸಿ ಆದಷ್ಟು ಬೇಗ ಪರಿಹಾರ ಕಂಡುಕೊಳ್ಳುವ ಪ್ರಯತ್ನ ಮಾಡುತ್ತೇನೆ. ಬಿಡಿಎ ಅಧ್ಯಕ್ಷ ಜವಾಬ್ದಾರಿಯನ್ನ ನನಗೆ ವಹಿಸಿದ್ದಾರೆ. ಬೆಂಗಳೂರು ನಗರದ ಬಗ್ಗೆ ನನಗೆ ಗೊತ್ತಿದೆ. ಈಗಾಗಲೇ ನಾಲ್ಕು ಬಾರಿ ಶಾಸಕನಾಗಿ ಕೆಲಸ ಮಾಡಿದ್ದೇನೆ. ಟ್ರಾನ್ಸಪರೆನ್ಸಿ ತರುವಲ್ಲಿ ಪ್ರಯತ್ನಿಸುತ್ತೇನೆ. ಬಿಡಿಎ ಪ್ರಾಧಿಕಾರವನ್ನು ಜನಸ್ನೇಹಿ ಮಾಡಲು ಯತ್ನಿಸುತ್ತೇನೆ. ಸಿಎಂ ಮತ್ತು ಡಿಸಿಎಂ ಅವರು ಕೂಡ ಬಿಡಿಎ ಅನ್ನು ಜನಸ್ನೇಹಿ ಮಾಡಿ ಎಂದಿದ್ದಾರೆ. ಹೊಸ ಲೇಔಟ್ ಬಗ್ಗೆಯೂ ಯೋಜನೆ ಇದೆ ಎಂದು ತಿಳಿಸಿದರು.
undefined
ಬೆಂಗಳೂರು ಪ್ರಾಧಿಕಾರದ ಅಧ್ಯಕ್ಷರಾದ ಬೆನ್ನಲ್ಲೇ ಎನ್.ಎ.ಹ್ಯಾರಿಸ್ ಶಾಸಕ ಸ್ಥಾನಕ್ಕೆ ಎದುರಾಯ್ತು ಕಂಟಕ
ಶಾಂತಿನಗರ ಅಭಿವೃದ್ಧಿಯಾಗಿಲ್ಲ ಈಗ ನಿಮ್ಮನ್ನ ಬಿಡಿಎ ಅಧ್ಯಕ್ಷರನ್ನಾಗಿ ಮಾಡಿರೊದಕ್ಕೆ ವಿರೋದ ವ್ಯಕ್ತವಾಗಿದೆ ಎನ್ನೋ ಪ್ರಶ್ನೆಗೆ ಉತ್ತರಿಸಿ, ರಾಜಕೀಯ ವಾಗಿ ಮಾತನಾಡಿದ್ರೆ ನಾನು ರಾಜಕೀಯ ಮಾತನಾಡ್ತೇನೆ. ಬೆಂಗಳೂರು ಎಲ್ಲವೂ ಬಿಡಿಎನಲ್ಲಿ ಬರೊಲ್ಲ. ಎಲ್ಲರ ಸಲಹೆಯನ್ನ ತೆಗೆದುಕೊಂಡು ಕೆಲಸ ಮಾಡ್ತೇನೆ. ಬಿಡಿಎ ಯನ್ನ ಇನ್ನಷ್ಟು ಅಭಿವೃದ್ಧಿ ಮಾಡ್ತೇವೆ. ಸಂಪನ್ಮೂಲಗಳ ಕ್ರೋಡಿಕರಣಕ್ಕೆ ಮುಂದಾಗ್ತೇವೆ ಎಂದು ತಿಳಿಸಿದರು. ಇನ್ನು ಮಂಡ್ಯದಲ್ಲಿ ಹನುಆನ್ ಧ್ವಜ ವಿವಾದದ ಕುರಿತು ಬಿಜೆಪಿ ಪ್ರತಿಭಟನೆಯ ಬಗ್ಗೆ ಮಾತನಾಡಿ, ವಿರೋಧ ಪಕ್ಷ ಅವರ ಕೆಲಸ ಮಾಡ್ತಿದ್ದಾರೆ. ಅವರಿಗೆ ಅದನ್ನ ಬಿಟ್ಟು ಬೇರೆ ಕೆಲಸ ಇಲ್ಲ. ವಿರೋಧ ಪಕ್ಷ ಸರ್ಕಾರಕ್ಕೆ ಸಲಹೆಯನ್ನ ಕೊಡಬೇಕು. ಜನರಿಗೆ ಒಳ್ಳೆಯದಾಗೋ ಹಾಗೆ ಕೆಲಸ ಸಲಹೆ ಕೊಡಬೇಕು. ಅದನ್ನ ಬಿಟ್ಟು ಈ ರೀತಿ ನಡೆದುಕೊಂಡ್ರೆ ಜನರಿಗೆ ಪ್ರಯೋಜನ ಆಗಲ್ಲ ಎಂದು ಹೇಳಿದರು.
ಬಿಡಿಎ ಅಧಿಕಾರ ಸ್ವೀಕಾರ ಮಾಡುವ ಸಂದರ್ಭದಲ್ಲಿ ಉಪ ಮುಖ್ಯಮಂತ್ರಿ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿ.ಕೆ. ಶಿವಕುಮಾರ್ ಹಾಗೂ ಸಚಿವರಾದ ಕೃಷ್ಣ ಬೈರೇಗೌಡ, ರಹೀಂ ಖಾನ್, ಜ಼ಮೀರ್ ಅಹಮದ್ ಖಾನ್ ಮತ್ತು ಶಾಸಕರಾದ ರಿಜ್ವಾನ್ ಅರ್ಷದ್, ಪ್ರಿಯಾಕೃಷ್ಣ ಉಪಸ್ಥಿತರಿದ್ದರು.
ಶಾಸಕ ಸ್ಥಾನದಿಂದ ಅನರ್ಹತೆಗೊಳ್ಳುವ ಆತಂಕ:
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ಅಧ್ಯಕ್ಷರಾಗಿ ಶಾಂತಿನಗರ ವಿಧಾನಸಭಾ ಕ್ಷೇತ್ರದ ಶಾಸಕ ಎನ್.ಎ. ಹ್ಯಾರಿಸ್ ಅವರು ಇಂದು ಬೆಳಗ್ಗೆಯಷ್ಟೇ ಅಧಿಕಾರ ಸ್ವೀಕರಿಸಿದ್ದಾರೆ. ಇದಾದ ಕೆಲವೇ ಗಂಟೆಗಳ ಅಂತರದಲ್ಲಿ ಈಗ ಅವರ ಶಾಸಕ ಸ್ಥಾನವೇ ಅನರ್ಹಗೊಳ್ಳುವ ಭೀತಿ ಶುರುವಾಗಿದೆ. ವಿಧಾನಸಭಾ ಚುನಾವಣೆಯ ವೇಳೆ ಎನ್.ಎ. ಹ್ಯಾರಿಸ್ ಅವರು ಆಯೋಗಕ್ಕೆ ತಪ್ಪು ಮಾಹಿತಿ ಹಾಗೂ ಪ್ರಮಾಣ ಪತ್ರಗಳನ್ನು ನೀಡಿ ಗೆಲುವು ಸಾಧಿಸಿದ್ದಾರೆ. ಆದ್ದರಿಂದ ಪರಾಜಿತ ಅಭ್ಯರ್ಥಿ ಶಿವಕುಮಾರ್ ಅವರು ಹ್ಯಾರೀಸ್ ಅವರ ಶಾಸಕ ಸ್ಥಾನವನ್ನು ರದ್ದುಗೊಳಿಸಬೇಕು ಎಂದು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಕೆ ಮಾಡಿದ್ದರು.
ಶಾಂತಿನಗರ ಅಭಿವೃದ್ಧಿ ಮಾಡಲಾಗದ ಶಾಸಕ ಹ್ಯಾರಿಸ್ ಬೆಂಗಳೂರನ್ನೇನು ಡೆವಲಪ್ ಮಾಡ್ತಾರೆ? ಎಎಪಿ ಕಿಡಿ
ಈ ಚುನಾವಣಾ ತಕರಾರು ಅರ್ಜಿಯನ್ನು ಸೋಮವಾರ ಹೈಕೋರ್ಟ್ ನ್ಯಾಯಮೂರ್ತಿ ಸೂರಜ್ ಗೋವಿಂದ್ ಅವರ ಏಕಸದಸ್ಯ ಪೀಠದಲ್ಲಿ ಅರ್ಜಿ ವಿಚಾರಣೆ ಮಾಡಲಾಗಿದೆ. ಚುನಾವಣಾ ಪ್ರಮಾಣ ಪತ್ರದಲ್ಲಿ ತಪ್ಪು ಮಾಹಿತಿ ನೀಡಿದ ವಿಚಾರಣೆ ವೇಳೆ ಸುಳ್ಳು ಮಾಹಿತಿ ನೀಡಿದ್ದರಿಂದ ಚುನಾವಣೆ ಮೇಲೆ ಪರಿಣಾಮ ಬೀರಿದೆ. ಹೀಗಾಗಿ ಹ್ಯಾರಿಸ್ ಅನರ್ಹ ಮಾಡುವಂತೆ ಪರಾಜಿತ ಅಭ್ಯರ್ಥಿ ಮನವಿ ಮಾಡಿದ್ದಾರೆ. ವಾದ ಪ್ರತಿವಾದ ಆಲಿಸಿದ ನ್ಯಾಯಾಧೀಶರು ತೀರ್ಪು ಕಾಯ್ದಿರಿಸಿದ್ದಾರೆ.