ಪ್ರಧಾನಿ ನರೇಂದ್ರ ಮೋದಿ ಅವರು ಜನಪರ ಬದ್ದತೆಯ ನಾಯಕರಾಗಿದ್ದು ಅವರು ನಮ್ಮೆಲ್ಲರ ಹೆಮ್ಮೆ ಎಂದು ಶಾಸಕ ಮಹೇಶ್ ಹೇಳಿದರು. ಅವರು ಶಿಕ್ಷಣ ಇಲಾಖೆ ಪ್ರಧಾನಮಂತ್ರಿ ನರೇಂದ್ರ ಮೋದಿ ರವರು ವಿದ್ಯಾರ್ಥಿಗಳೊಡನೆ ಪರೀಕ್ಷಾ ಪೇ ಚರ್ಚಾ ಸಂವಾದದ ವೇಳೆ ಸಂತಫ್ರಾನ್ಸಿಸ್ ಅಸಿಸ್ಸಿ ಶಾಲೆಯಲ್ಲಿ ಹಮ್ಮಿಕೊಂಡಿದ್ದ ನೇರಪ್ರಸಾರ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಕೊಳ್ಳೇಗಾಲ (ಜ.28): ಪ್ರಧಾನಿ ನರೇಂದ್ರ ಮೋದಿ ಅವರು ಜನಪರ ಬದ್ದತೆಯ ನಾಯಕರಾಗಿದ್ದು ಅವರು ನಮ್ಮೆಲ್ಲರ ಹೆಮ್ಮೆ ಎಂದು ಶಾಸಕ ಮಹೇಶ್ ಹೇಳಿದರು. ಅವರು ಶಿಕ್ಷಣ ಇಲಾಖೆ ಪ್ರಧಾನಮಂತ್ರಿ ನರೇಂದ್ರ ಮೋದಿ ರವರು ವಿದ್ಯಾರ್ಥಿಗಳೊಡನೆ ಪರೀಕ್ಷಾ ಪೇ ಚರ್ಚಾ ಸಂವಾದದ ವೇಳೆ ಸಂತಫ್ರಾನ್ಸಿಸ್ ಅಸಿಸ್ಸಿ ಶಾಲೆಯಲ್ಲಿ ಹಮ್ಮಿಕೊಂಡಿದ್ದ ನೇರಪ್ರಸಾರ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿ, ಒಬ್ಬ ಪ್ರಧಾನ ಮಂತ್ರಿ ಎರಡೂವರೆ ಗಂಟೆಗಳ ಕಾಲ ಮಾತನಾಡಿ ವಿದ್ಯಾರ್ಥಿಗಳಿಗೆ ದೈರ್ಯ ತುಂಬಿದ್ದು ನಿಜಕ್ಕೂ ಅಭಿನಂದನಾರ್ಹ.
ನರೇಂದ್ರ ಮೋದಿ ನಮ್ಮೆಲ್ಲರ ಹೆಮ್ಮೆ, ಇಂದು ಎಂಸಿಕೆಜಿ, ಬಸವಲಿಂಗಪ್ಪ ಶಾಲೆಯ ವಿದ್ಯಾರ್ಥಿಗಳು ಸಂವಾದದಲ್ಲಿ ಪಾಲ್ಗೊಂಡಿದ್ದರು. ಇಡೀ ದೇಶದಲ್ಲಿ ಪರೀಕ್ಷೆ ಕುರಿತಂತೆ ಮೋದಿಯವರನ್ನು ಮಕ್ಕಳು ಕೇಳಿದ ಪ್ರಶ್ನೆಗಳಿಗೆ ಹಾಗೂ ಸಿಕ್ಕ ಉತ್ತರಗಳನ್ನು ಗಮನಿಸಿದರೆ ಪರೀಕ್ಷಾ ಭಯದಿಂದ ಆತ್ಮ ವಿಶ್ವಾಸ ಹೊಂದಿ ಪರೀಕ್ಷೆ ಬರೆಯಬೇಕು, ಸಮಯವವನ್ನು ನಿರ್ಧಿಷ್ಟವಾಗಿ ಯಾವ ರೀತಿ ನಿಗದಿ ಮಾಡಬೇಕು ಎಂಬ ಸಂದೇಶ ರವಾನಿಸಿದ್ದಾರೆ. ಇದು ಆರನೇ ಆವೃತ್ತಿಯಾಗಿದ್ದು ಇದೊಂದು ಉತ್ತಮ ಕಾರ್ಯಕ್ರಮ ಎಂದು ಶ್ಲಾಘಿಸಿದರು.
undefined
Chamarajanagar: ಕಾಡ್ಗಿಚ್ಚು ತಪ್ಪಿಸಲು ಅರಣ್ಯ ಇಲಾಖೆಯಿಂದ ಫೈರ್‌ಲೈನ್!
ಇದೇ ವೇಳೆ ಚಿತ್ರಕಲಾ ಸ್ಪರ್ಧೆ, ಪ್ರಬಂಧ ಸ್ಪರ್ಧೆಗಳಲ್ಲಿ ಭಾಗವಹಿಸಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು. ಈ ಸಂದರ್ಭದಲ್ಲಿ ಬಿಇಒ ಚಂದ್ರಪಾಟೀಲ್, ಅಕ್ಷರ ದಾಸೋಹ ರಂಗಸ್ವಾಮಿ, ಮುಖ್ಯ ಶಿಕ್ಷಕರ ಕಾರ್ಯದರ್ಶಿ ಶಿವರಾಜ್, ಸಹಶಿಕ್ಷಕರ ಸಂಘದ ಅಧ್ಯಕ್ಷ ಅಕ್ಬರ್, ಜಿಲ್ಲಾ ಉಪಾಧ್ಯಕ್ಷ ಶಾಂತರಾಜು, ಸರ್ಕಾರಿ ನೌಕರರ ಸಂಘದ ಕಾರ್ಯದರ್ಶಿ ಚಿಕ್ಕರಾಜು, ಬಸವರಾಜು, ಸುಬ್ರಮಣ್ಯ ಇನ್ನಿತರರು ಇದ್ದರು.
ಆತಂಕ ನಿವಾರಿಸಲು ಪರೀಕ್ಷಾ ಪೇ ಚರ್ಚೆ ಸಹಕಾರಿ: ಪರೀಕ್ಷೆ ಬಗ್ಗೆ ಮಕ್ಕಳಲ್ಲಿ ಆತಂಕ ನಿವಾರಣೆಯ ಉದ್ದೇಶದಿಂದಲೇ ಪ್ರಧಾನಿ ಮೋದಿ ಪರೀಕ್ಷಾ ಪೇ ಚರ್ಚಾ ಕಾರ್ಯಕ್ರಮದಲ್ಲಿ ಮಕ್ಕಳ ಕುರಿತು ಮಾತನಾಡಿದ್ದಾರೆ ಎಂದು ಶಾಸಕ ಸಿ.ಎಸ್. ನಿರಂಜನ್‌ಕುಮಾರ್ ಹೇಳಿದರು. ಪಟ್ಟಣದ ಬಾಲಕಿಯರ ಪ್ರೌಢಶಾಲೆಯಲ್ಲಿ ಪರೀಕ್ಷಾ ಪೇ ಚರ್ಚಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಪ್ರಧಾನಿ ಮೋದಿ ಮಾತು ಆಲಿಸಿದ ಬಳಿಕ ಮಕ್ಕಳೊಂದಿಗೆ ಶಾಸಕರು ಮಾತನಾಡಿದ ಪರೀಕ್ಷೆ ಬಂದಾಗ ಗಾಬರಿ,ಓದೇ ಇಲ್ಲ ಎಂದು ಆತಂಕ ಪಡಬೇಡಿ ಎಂದರು.
ಪ್ರೌಢಶಾಲೆಯ ವಿದ್ಯಾರ್ಥಿಗಳು ಪರೀಕ್ಷಾ ಹಂತಕ್ಕೆ ಬಂದಿದ್ದೀರಾ. ಓದಿಗೆ ಸಮಯ ನಿಗದಿ ಮಾಡಿಕೊಳ್ಳಿ. ಒತ್ತಡಕ್ಕೆ ಒಳಗಾಗದೆ ಓದಿಗೆ ಪ್ಲಾನ್ ಮಾಡಿಕೊಳ್ಳಿ ಹಾಗೂ ಓದು, ಬರಹ ಹಾಗೂ ಸಮಯದ ಬಗ್ಗೆ ಹೊಂದಾಣಿಕೆ ಮಾಡಿಕೊಳ್ಳಿ ಎಂದರು. ಓದುವಾಗ ಯಾವುದೇ ಗೊಂದಲಕ್ಕೆ ಸಿಲುಕುವುದು ಬೇಡ. ವಿಷಯದಲ್ಲಿನ ಕೊರತೆಗಳು ಬಗ್ಗೆ ಮೊದಲು ತಿಳಿದುಕೊಳ್ಳುವ ಜೊತೆಗೆ ಎಲ್ಲಾ ವಿಷಯಗಳಿಗೂ ಆದ್ಯತೆ ನೀಡಬೇಕು ಎಂದರು. ಪ್ರಧಾನಿ ಮೋದಿ ಅವರ ಪರೀಕ್ಷಾ ಪೇ ಚರ್ಚಾದಲ್ಲಿ ಮಾತು ನಿಮಗೆ ಪ್ರೋತ್ಸಾಹ ನೀಡಲಿದೆ.
Chamarajanagar: ಟಿಕೆಟ್ ಯಾರಿಗೆಂದು ಹೈಕಮಾಂಡ್ ತೀರ್ಮಾನಿಸುತ್ತೆ: ಶಾಸಕ ಮಹೇಶ್
ಪ್ರಧಾನಿ ಮಕ್ಕಳೊಂದಿಗೆ ಪರೀಕ್ಷೆ ಸಂಬಂಧ ಮಾತನಾಡಬೇಕು ಎಂಬುದಿಲ್ಲ ಆದರೂ ಮೋದಿ ಬದ್ಧತೆ ಹಾಗೂ ಪ್ರೀತಿ ಇರುವ ಕಾರಣ ಮಾತನಾಡಿದ್ದಾರೆ ಎಂದರು. ಮಕ್ಕಳು ಓದಿ ವಿದ್ಯಾವಂತರಾದರೆ ದೇಶದ ಅಭಿವೃದ್ಧಿ ಹಾಗೂ ಮಕ್ಕಳು ಬುದ್ಧಿವಂತರಾದರೆ ಈ ದೇಶದ ಆಸ್ತಿಯ ಜೊತೆಗೆ ಕುಟುಂಬಕ್ಕೂ ಆಧಾರವಾಗಲಿದ್ದಾರೆ ಎಂದರು. ಈ ಸಮಯದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಸಿ.ಶಿವಮೂರ್ತಿ ಹಾಗೂ ಉಪನ್ಯಾಸಕರು ಹಾಗೂ ಶಾಲೆಯ ವಿದ್ಯಾರ್ಥಿಗಳಿದ್ದರು.