Upper Bhadra Project: ಮಂದಗತಿ ಕಾಮಗಾರಿಗೆ ಚಿತ್ರದುರ್ಗ ರೈತರ ಆಕ್ರೋಶ

By Suvarna NewsFirst Published Jan 28, 2023, 7:00 PM IST
Highlights

ಭದ್ರಾ ಯೋಜನೆಯನ್ನು ರಾಷ್ಟ್ರೀಯ ಯೋಜನೆಯಾಗಿ ಘೋಷಿಸಲು ಕೇಂದ್ರಸರ್ಕಾರ ಮೀನಾಮೇಷ ಎಣಿಸುತ್ತಿದೆ. ಅಲ್ಲದೇ  ಕೆಲವೇ ದಿನಗಳಲ್ಲಿ 2023 ರ ವಿಧಾನಸಭಾ ಚುನಾವಣೆ ಸಹ ಶುರುವಾಗುವ ಪರಿಣಾಮ‌ ಈ ಯೋಜನೆ ಚುನಾವಣಾ ದಾಳವಾಗಿ ಬಳಸಿಕೊಳ್ಳಲು ಸರ್ಕಾರ ಹೊರಟಿರುವಂತಿದೆ.

ವರದಿ: ಕಿರಣ್ಎಲ್ ತೊಡರನಾಳ್ ಏಷ್ಯಾನೆಟ್ ಸುವರ್ಣ ನ್ಯೂಸ್

ಚಿತ್ರದುರ್ಗ (ಜ.28): ಅದೊಂದು‌ ಬರದನಾಡಿನ ಕನಸಿನ ಯೋಜನೆ. ಇನ್ನೇನು ಕೆಲವೇ ದಿನಗಳಲ್ಲಿ ರಾಷ್ಟ್ರೀಯ ಯೋಜನೆಯಾಗಿ ಮುಕ್ತಾಯ ಆಗಲಿದೆ ಅಂತ ರೈತರು ಭಾವಿಸಿದ್ರು. ಆದ್ರೆ ದಿನ ದಿನಕ್ಕೂ ಕಾಮಗಾರಿಯನ್ನು ವಿಳಂಬ ಮಾಡ್ತಿರುವ ಸರ್ಕಾರದ ನಡೆ ವಿರುದ್ಧ ರೈತರು ಅನುಮಾನ ಹಾಗೂ ಆತಂಕ ಹೊರಹಾಕಿದ್ದಾರೆ. ಬಿಜೆಪಿಯ ಸಮ್ಮಿಶ್ರ ಸರ್ಕಾರದಲ್ಲಿ ಅಂದಿನ ನೀರಾವರಿ ಸಚಿವರಾಗಿದ್ದ ಬಸವರಾಜ್ ಬೊಮ್ಮಾಯಿ ಘೋಷಿಸಿದ್ದ‌ ಭದ್ರಾ ಮೇಲ್ದಂಡೆ ಯೋಜನೆ‌ಯು ಕೋಟೆನಾಡು ಚಿತ್ರದುರ್ಗದ ಕನಸಿನ ಕೂಸಾಗಿದೆ. ಹೀಗಾಗಿ ಬಸವರಾಜ್ ಬೊಮ್ಮಾಯಿ ರಾಜ್ಯದ ಸಿಎಂ ಆದ ಬಳಿಕ ಚಿತ್ರದುರ್ಗ ಜಿಲ್ಲೆ ಜನರಲ್ಲಿ ಭರವಸೆ ಹೆಚ್ಚಾಗಿದ್ದೂ, ಈ ಯೋಜನೆ ಶೀಘ್ರದಲ್ಲೇ ರಾಷ್ಟ್ರೀಯ ಯೋಜನೆಯಾಗಲಿದೆ. ವೇಗವಾಗಿ ಕಾಮಗಾರಿಯನ್ನು ಸಂಪೂರ್ಣವಾಗಿ ಮುಗಿಯಲಿದೆ. ಇದರಿಂದಾಗಿ  ನೀರಿನ ಬವಣೆ ನೀಗಲಿದೆ ಎಂಬ ನಿರೀಕ್ಷೆಯಲ್ಲಿದ್ರು.

ಆದ್ರೆ ಭದ್ರಾ ಯೋಜನೆಯನ್ನು ರಾಷ್ಟ್ರೀಯ ಯೋಜನೆಯಾಗಿ ಘೋಷಿಸಲು ಕೇಂದ್ರಸರ್ಕಾರ ಮೀನಾಮೇಷ ಎಣಿಸುತ್ತಿದೆ. ಅಲ್ಲದೇ  ಕೆಲವೇ ದಿನಗಳಲ್ಲಿ 2023 ರ ವಿಧಾನಸಭಾ ಚುನಾವಣೆ ಸಹ ಶುರುವಾಗುವ ಪರಿಣಾಮ‌ ಈ ಯೋಜನೆ ಚುನಾವಣಾ ದಾಳವಾಗಿ ಬಳಸಿಕೊಳ್ಳಲು ಸರ್ಕಾರ ಹೊರಟಿರುವಂತಿದೆ. ಹೀಗಾಗಿ ಈ ವರ್ಷವೂ ಸಹ ಈ ಕಾಮಗಾರಿ ರಾಷ್ಟ್ರೀಯ ಯೋಜನೆ ಆಗಲ್ವೇನೊ ಎಂಬ ಅನುಮಾನ ರೈತರಲ್ಲಿ ಮೂಡಿದೆ. ಹೀಗಾಗಿ ತಕ್ಷಣವೇ ಭದ್ರಾ ಯೋಜನೆಯನ್ನು ತಕ್ಷಣವೇ ರಾಷ್ಟ್ರೀಯ ಯೋಜನೆಯಾಗಿ ಘೋಷಿಸಿ, ಕಾಮಗಾರಿಯನ್ನು ತ್ವರಿತವಾಗಿ ಮುಗಿಸುವಂತೆ ರೈತರು ಆಗ್ರಹಿಸಿದ್ದಾರೆ.

ಭದ್ರಾ ರಾಷ್ಟ್ರೀಯ ಯೋಜನೆಗೆ ಸಿಎಂ ಬೊಮ್ಮಾಯಿ ಒತ್ತಡ: ಕೇಂದ್ರ ಸಚಿವರಿಂದ ಸಕಾರಾತ್ಮಕ ಸ್ಪಂದನೆ

ಇನ್ನು ಇದಕ್ಕೆ ಪ್ರತಿಕ್ರಿಯಿಸಿರೋ ಚಿತ್ರದುರ್ಗದ ಬಿಜೆಪಿ‌ ಹಿರಿಯ ಶಾಸ ಕ‌ತಿಪ್ಪಾರೆಡ್ಡಿ, ಇದು ಕರ್ನಾಟಕದ ಬೃಹತ್ ನೀರಾವರಿ ಯೋಜನೆಗಳಲ್ಲಿ ಒಂದಾಗಿದೆ. ಈ ಭದ್ರಾ ಮೇಲ್ದಂಡೆ ಯೋಜನೆ ಶೀಘ್ರದಲ್ಲೇ ಕೇಂದ್ರ ಸರ್ಕಾರ ಸಚಿವ ಸಂಪುಟದಲ್ಲಿ ರಾಷ್ಟ್ರೀಯ ಯೋಜನೆಯಾಗಿ ಘೋಷಣೆಯಾಗಲಿದ್ದೂ, ಪ್ರಧಾ‌ನಿ ಮೋದಿ ಇದನ್ನು ಉದ್ಘಾಟಿಸಲಿದ್ದಾರೆ. ಹೀಗಾಗಿ ರೈತರಲ್ಲಿ ಯಾವುದೇ ಆತಂಕ ಬೇಡವೇಂದು ಭರವಸೆ ನೀಡಿದ್ದಾರೆ.

Chitradurga: ಭದ್ರಾದಿಂದ ವಿವಿ ಸಾಗರ ಜಲಾಶಯಕ್ಕೆ ನೀರು ಹರಿಸೋದಕ್ಕೆ ಕಾಡ ಸಮಿತಿ ಆಕ್ಷೇಪ!

ಒಟ್ಟಾರೆ ಕಳೆದ ಒಂದೂವರೆ ದಶಕಗಳಿಂದ ಬರದನಾಡಿನ ರೈತರು ಭದ್ರಾ ನೀರಿನ ಕನಸು ಕಾಣ್ತಿದ್ದಾರೆ. ಆದ್ರೆ ಅದು ಕನಸಾಗಿಯೇ ಉಳಿದಿದೆ. ಹೀಗಾಗಿ ಭದ್ರಾ ಮೇಲ್ದಂಡೆ ಯೋಜನೆಯನ್ನು ಚುನಾವಣಾ ದಾಳವಾಗಿ ಬಳಸಿಕೊಳ್ಳದೇ, ಈ ಡಬಲ್ ಎಂಜಿನ್ ಸರ್ಕಾರ ತ್ವರಿತವಾಗಿ ಈ ಬರದನಾಡಿನ ಬವಣೆ ನೀಗಿಸಲು ಅಗತ್ಯ ಕ್ರಮ ಕೈಗೊಳ್ಳಬೇಕಿದೆ‌.

click me!