ಹೊನ್ನಾಳಿ ಶಾಸಕ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ ಹುಬ್ಬಳ್ಳಿ ಘಟನೆ ಬಗ್ಗೆ ಪ್ರತಿಕ್ರಿಯಿಸುತ್ತಾ ಮೌಲ್ವಿ ಮದರಸಗಳ ಬಗ್ಗೆ ತಮ್ಮ ವಿವೇಚನೆಯನ್ನು ಹರಿಬಿಟ್ಟಿದ್ದಾರೆ.
ವರದಿ: ವರದರಾಜ್, ದಾವಣಗೆರೆ
ದಾವಣಗೆರೆ (ಏ.20): ಹೊನ್ನಾಳಿ ಶಾಸಕ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ (MP Renukacharya) ಹುಬ್ಬಳ್ಳಿ ಘಟನೆ (Hubballi Riot) ಬಗ್ಗೆ ಪ್ರತಿಕ್ರಿಯಿಸುತ್ತಾ ಮೌಲ್ವಿ ಮದರಸಗಳ (Madrasa) ಬಗ್ಗೆ ತಮ್ಮ ವಿವೇಚನೆಯನ್ನು ಹರಿಬಿಟ್ಟಿದ್ದಾರೆ. ದಾವಣಗೆರೆ ಜಿಲ್ಲೆ ಹೊನ್ನಾಳಿಯಲ್ಲಿ ಮಾತನಾಡಿದ ರೇಣುಕಾಚಾರ್ಯ ಶರೀಫರು ಅಬ್ದುಲ್ ಕಲಾಂರ ಬಗ್ಗೆ ನಮಗೆ ಅಪಾರ ಗೌರವ ಪ್ರೀತಿ ಇದೆ ಎನ್ನುತ್ತಲೇ ಹುಬ್ಬಳ್ಳಿ ಘಟನೆಯನ್ನು ಖಂಡಿಸಿದ್ದಾರೆ. ಕಳೆದ ನಾಲ್ಕು ದಿನಗಳ ಹಿಂದೆ ಹುಬ್ಬಳಿಯಲ್ಲಿ ನಡೆದ ಘಟನೆಗೆ ಕಾಂಗ್ರೆಸ್ ನೇರ ಹೊಣೆ ಎಂದಿದ್ದಾರೆ. ಹುಬ್ಬಳ್ಳಿ ಘಟನೆಗೆ ಸಂಬಂಧಿಸಿ ಕಾಂಗ್ರೆಸ್ (Congress) ಮುಖಂಡರು ಬೇಷರತ್ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದ್ದಾರೆ.
undefined
ಒಬ್ಬ ವಿದ್ಯಾರ್ಥಿ ಸ್ಟೇಟಸ್ ಹಾಕಿದ್ದನ್ನೇ ದೊಡ್ಡದು ಮಾಡಿಕೊಂಡು ಸಾವಿರಾರು ಜನ ಒಂದೆಡೆ ಸೇರಿ ದೊಂಬಿ ಮಾಡಿದ್ದಾರೆ. ಇದು ಪೂರ್ವ ನಿಯೋಜಿತ ಘಟನೆ. ಅರ್ಧ ಗಂಟೆಯಲ್ಲಿ ಸಹಸ್ರಾರು ಜನ ಸೇರಿಕೊಂಡು ಪೊಲೀಸರ ಮೇಲೆ ಹಲ್ಲೆ ಮಾಡಿದ್ದಾರೆ. ಕೆಲವರು ಪೊಲೀಸ್ ಜೀಪ್ ಮೇಲೆ ಹತ್ತಿದ್ದಾರೆ. ಇಂತಹ ಘಟನೆ ಹತ್ತಿಕ್ಕಲು ರಾಜ್ಯದಲ್ಲಿ ಯುಪಿ ಮಾದರಿ ಕಾನೂನು ಮಾಡಬೇಕು ಎಂದು ಆಗ್ರಹಿಸಿದರು. ಮಸೀದಿಗಳಲ್ಲಿರುವ ನಮ್ಮದೇ ಮೌಲ್ವಿಗಳು ಭಾರತ್ ಮಾತಾಕಿ ಜೈ ಎನ್ನುತ್ತಾರೆ. ಯಾರು ಭಾರತ್ ಮಾತಾಕಿ ಜೈ ಅನ್ನೊದಿಲ್ವ ಅವರನ್ನು ಬಂಧಿಸಬೇಕೆಂದು ಎಂದು ಆಗ್ರಹಿಸಿದ್ದಾರೆ.
ಡಿಕೆಶಿ ಬಗ್ಗೆ ಬೇಗ ಎಚ್ಚೆತ್ತುಕೊಳ್ಳಿ, ನಿಮಗೂ ಖೆಡ್ಡಾ ತೋಡ್ಬಹುದು: ಸಿದ್ದುಗೆ ಎಚ್ಚರಿಕೆ ನೀಡಿದ ರೇಣುಕಾಚಾರ್ಯ
ಮಸೀದಿಗಳಲ್ಲಿ ಮೌಲ್ವಿಗಳು ಧರ್ಮ ಭೋದನೆ ಮಾಡೋದಿಲ್ಲ.ಬದಲಾಗಿ ಮಸೀದಿಗಳಲ್ಲಿ ಪ್ರಚೋದನೆ ಮಾಡುತ್ತಾರೆ. ಹಿಂದೂ ಸ್ವಾಮೀಜಿ ಗಳು ಸಾಧು ಸಂತರಿರುವ ಮಾನವೀಯ ಮೌಲ್ಯಗಳು ಜೀವನ ಮೌಲ್ಯಗಳನ್ನು ಸಾರುತ್ತಾರೆ. ಆದರೆ ಇವರು ಪ್ರಚೋದನೆ ನೀಡುತ್ತಾರೆ. ಮತ್ತಷ್ಟು ಭಾವನೆಗಳನ್ನು ಕೆರಳಿಸಿ ಹಿಂದೂಗಳ ಮೇಲೆ ಹಲ್ಲೆ ಮಾಡ್ತಾರೆ. ಕೆಲ ಮುಖಂಡರು ಶಿರಶ್ಚೇದನ ಮಾಡಿ ಎಂದು ಘೋಷಣೆ ಕೂಗುತ್ತಾರೆ ಇದನ್ನ ಏನಾದರೂ ಪಾಕಿಸ್ತಾನ ಮಾಡಿಕೊಂಡಿದ್ದಾರಾ? ಹುಬ್ಬಳ್ಳಿ ಸೇರಿದಂತೆ ರಾಜ್ಯದ ಎಲ್ಲಾ ಕಡೆ ಮೌಲ್ವಿಗಳ ಶೋಧ ಮಾಡಬೇಕು. ಯಾರು ಭಾರತ್ ಮಾತಾಕಿ ಜೈ ಎನ್ನುವವರನ್ನು ಬಿಟ್ಟು ಎಲ್ಲರನ್ನು ಬಂಧಿಸಬೇಕು ಎಂದು ಆಗ್ರಹಿಸಿದ್ದಾರೆ.
ನಮ್ಮ ದೇವಸ್ಥಾನದಲ್ಲಿ ತೀರ್ಥ ಪ್ರಸಾದ, ಅರತಿ ಬೆಳಗುತ್ತಾರೆ ಹಾಗೇ ಮಸೀದಿಗಳಲ್ಲಿ ಮದ್ದು ಗುಂಡುಗಳು ಸಂಗ್ರಹಿಸಿಡುತ್ತಾರೆ ಎಂದು ಹೇಳಿದ್ದೇ. ಆಗ ನನ್ನ ವಿರುದ್ದ ಕಾಂಗ್ರೆಸ್ಸಿಗರು ಪ್ರತಿಭಟನೆ ಮಾಡಿದರು. ಮದರಸಗಳಲ್ಲಿ ಒಳ್ಳೆ ಶಿಕ್ಷಣ ಕೊಡುವುದಿಲ್ಲ. ಮಕ್ಕಳಿಗೆ ಅಲ್ಲಿ ದೇಶದ್ರೋಹದ ಪಾಠವನ್ನು ಹೇಳುತ್ತಾರೆ. ಈ ಮದರಸಗಳನ್ನು ಬ್ಯಾನ್ ಮಾಡಿದರೆ ಈ ರೀತಿ ಘಟನೆ ನಡೆಯುವುದಿಲ್ಲ ಎಂದರು. ಕಾಂಗ್ರೆಸ್ ಶಾಸಕನ ಮನೆ ಮೇಲೆ ಕೂಡ ಬೆಂಕಿ ಹಾಕಿದ್ರು.ಆಗ ಅದೇ ಅಲ್ಪಸಂಖ್ಯಾತರ ಪರವಾಗಿ ಇದೇ ಕಾಂಗ್ರೆಸ್ ನಾಯಕರು ನಿಂತರು. ಟಿಪ್ಪು ಜಯಂತಿ ಮಾಡಿ ಈ ದೇಶದ ಕಾನೂನು ಸುವ್ಯವಸ್ಥೆ ಹಾಳು ಮಾಡಿದರು. ಕಾಂಗ್ರೆಸ್‌ನವರು ಭಾರತದ ಪರನೋ ಇಲ್ಲ ಅಲ್ಪಸಂಖ್ಯಾತರ ಪರನೋ ಎಂದು ಹೇಳಲಿ.
ಕಮಿಷನ್ ದೂರು ಸಿದ್ಧವಾಗಿದ್ದೇ ಕಾಂಗ್ರೆಸ್ಸಿಗರ ಮನೆಯಲ್ಲಿ: ರೇಣುಕಾಚಾರ್ಯ
ಎಲ್ಲಾ ಅಲ್ಪಸಂಖ್ಯಾತರು ಕೂಡ ಭಯೋತ್ಪಾದಕರು ಎಂದು ಹೇಳುತ್ತಿಲ್ಲ. ವೋಟ್‌ಗಾಗಿ ಅಲ್ಪಸಂಖ್ಯಾತರನ್ನು ಭಯೋತ್ಪಾದಕ ರನ್ನಾಗಿ ಮಾಡುತ್ತಾರೆ. ಹುಬ್ಬಳ್ಳಿ ದಾಳಿಗೆ ಪ್ರಚೋದನೆ ಮಾಡಿದ ಮೌಲ್ವಿಗಳನ್ನು ಬಂಧಿಸಿ ಗಲ್ಲಿಗೇರಿಸಬೇಕು ಎಂದು ಒತ್ತಾಯ ಮಾಡಿದರು. ಸಿದ್ದರಾಮಯ್ಯನವರು ಗಲಭೆ ಮಾಡಿದವರನ್ನು ಅಮಾಯಕರು ಎಂದು ಹೇಳುತ್ತರೆ. ನಿಮ್ಮ ಪ್ರಚೋದನೆ ಹೇಳಿಕೆಗಳಿಂದ ನಿಮಗೆ ನಾಚಿಕೆ ಆಗೋದಿಲ್ವಾ. ಯಾರು ಈ ರೀತಿಯಾಗಿ ಮಾಡ್ತಾರೋ ಅಂತವರ ಮತದಾನದ ಹಕ್ಕು ಮೊಟಕುಗೊಳಿಸಬೇಕು. ಅಲ್ಲದೆ ಅವರಿಗೆ ಸರ್ಕಾರದಿಂದ ಬರುವ ಸೌಲಭ್ಯಗಳ ಜೊತೆ ಬಿಪಿಎಲ್ ಕಾರ್ಡ್ ಕೂಡ ಮೊಟಕುಗೊಳಿಸಬೇಕು ಎಂದು ರೇಣುಕಾಚಾರ್ಯ ಒತ್ತಾಯಿಸಿದರು.