ಧ್ರುವನಾರಾಯಣ್‌ ಅಗಲಿಕೆಯಿಂದ ಅನಾಥಭಾವ: ಡಾ.ಯತೀಂದ್ರ ಸಿದ್ದರಾಮಯ್ಯ

By Kannadaprabha News  |  First Published Mar 22, 2023, 1:30 AM IST

ಶರಣರ ಬದುಕನ್ನು ಮರಣದಲ್ಲಿ ಕಾಣುವಂತೆ ಮಾತಿದೆ. ಇದಕ್ಕೆ ಧ್ರುವನಾರಾಯಣ್‌ ಉದಾಹರಣೆಯಾದರು. ಬದ್ಧತೆ ರಾಜಕಾರಣಿಯಾಗಿ, ಕಳಂಕ ರಹಿತವಾಗಿ ಅತ್ಯಂತ ಸರಳವಾಗಿ ಎಳ್ಳಷ್ಟುಆಡಂಬರ ಇಲ್ಲದೇ ಬದುಕಿದ್ದು ನಮಗೆಲ್ಲ ಮಾದರಿ ಎಂದು ಅವರು ಹೇಳಿದರು.ುತ್ನ ಮಾಡುತ್ತಿರುವುದು ನಿಲ್ಲಬೇಕು: ಶಾಸಕ ಡಾ. ಯತೀಂದ್ರ ಸಿದ್ದರಾಮಯ್ಯ 


ಮೈಸೂರು(ಮಾ.22): ಆರ್‌. ಧ್ರುವನಾರಾಯಣ್‌ ಅವರಿಗೆ ರಾಜಕೀಯದಲ್ಲಿ ಉತ್ತಮ ಭವಿಷ್ಯವಿತ್ತು. ರಾಜ್ಯ ಮಟ್ಟದಲ್ಲಿ ಪ್ರಭಾವ ಬೀರುವ ಸಾಮರ್ಥ್ಯ ಇತ್ತು. ಅಗಲಿಕೆಯಿಂದ ಅನಾಥಭಾವ ಕಾಡುತ್ತಿದೆ ಎಂದು ಶಾಸಕ ಡಾ. ಯತೀಂದ್ರ ಸಿದ್ದರಾಮಯ್ಯ ತಿಳಿಸಿದರು.

ನಗರದ ಇಂದಿರಾ ಗಾಂಧಿ ಕಾಂಗ್ರೆಸ್‌ ಭವನದಲ್ಲಿ ಮೈಸೂರು ನಗರ ಮತ್ತು ಜಿಲ್ಲಾ ಕಾಂಗ್ರೆಸ್‌ ಸಮಿತಿಯು ಮಂಗಳವಾರ ಆಯೋಜಿಸಿದ್ದ ಮಾಜಿ ಸಂಸದ, ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್‌. ಧ್ರುವನಾರಾಯಣ್‌ ಅವರಿಗೆ ಭಾವಪೂರ್ಣ ನುಡಿನಮನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

Latest Videos

undefined

ಏಪ್ರಿಲ್‌ ಮೊದಲ ವಾರದಲ್ಲಿ ಚುನಾವಣೆ ಘೋಷಣೆ: ಮಾಹಿತಿ ನೀಡಿದ ರಾಜ್ಯ ನಾಯಕ

ಶರಣರ ಬದುಕನ್ನು ಮರಣದಲ್ಲಿ ಕಾಣುವಂತೆ ಮಾತಿದೆ. ಇದಕ್ಕೆ ಧ್ರುವನಾರಾಯಣ್‌ ಉದಾಹರಣೆಯಾದರು. ಬದ್ಧತೆ ರಾಜಕಾರಣಿಯಾಗಿ, ಕಳಂಕ ರಹಿತವಾಗಿ ಅತ್ಯಂತ ಸರಳವಾಗಿ ಎಳ್ಳಷ್ಟುಆಡಂಬರ ಇಲ್ಲದೇ ಬದುಕಿದ್ದು ನಮಗೆಲ್ಲ ಮಾದರಿ ಎಂದು ಅವರು ಹೇಳಿದರು.ುತ್ನ ಮಾಡುತ್ತಿರುವುದು ನಿಲ್ಲಬೇಕು ಎಂದು ಅವರು ತಿಳಿಸಿದರು.

ಜೆಂಟಲ್‌ಮನ್‌ ರಾಜಕಾರಣಕ್ಕೆ ಮಾದರಿ:

ಎಐಸಿಸಿ ಕಾರ್ಯದರ್ಶಿಯಾದ ಶಾಸಕ ರೋಸಿ ಜಾನ್‌ ಮಾತನಾಡಿ, ಧ್ರುವನಾರಾಯಣ್‌ ಅವರೊಂದಿಗೆ ನಾನು ಪ್ರವಾಸ ಮಾಡಿದ್ದೇನೆ. ಎಲ್ಲಾ ಪಕ್ಷದವರೂ ಗೌರವಿಸುತ್ತಿದ್ದರು. ಜೆಂಟಲ್‌ಮನ್‌ ರಾಜಕಾರಣಕ್ಕೆ ಮಾದರಿಯಾಗಿದ್ದರು. ಕಿರಿಯ ತಮ್ಮನಂತೆ ನೋಡಿಕೊಂಡರು ಎಂದರು.

ಪರಾರ್ಥದಿಂದ ಕೆಲಸ ಮಾಡಿದವರು:

ಹಿರಿಯ ಸಾಹಿತಿ ಪ್ರೊ.ಎಸ್‌.ಜಿ. ಸಿದ್ಧರಾಮಯ್ಯ ಮಾತನಾಡಿ, ಧ್ರುವನಾರಾಯಣ್‌ ಸಮುದಾಯ ಮತ್ತು ರಾಜಕೀಯ ನಿಷ್ಠೆ ಬೇರ್ಪಡಿಸಲಾಗದ ತಾತ್ವಿಕವಾಗಿ ಅಂತಃಕರ್ಗತವಾಗಿತ್ತು. ರಾಜಕೀಯ ಶೂನ್ಯ ಆವರಿಸಿತು. ಅವರ ನಿರ್ಗಮನ ದಿಗ್ಭ್ರಾಂತಿ. ಸ್ವಾರ್ಥಕ್ಕಾಗಿ ಬದುಕದೇ ಪರಾರ್ಥದಿಂದ ಕೆಲಸ ಮಾಡಿದವರು ಎಂದು ಸ್ಮರಿಸಿದರು.

ಮಹಿಳಾ ಕಾಂಗ್ರೆಸ್‌ ಜಿಲ್ಲಾಧ್ಯಕ್ಷೆ ಹಾಗೂ ಜಿಪಂ ಮಾಜಿ ಅಧ್ಯಕ್ಷೆ ಲತಾ ಸಿದ್ದಶೆಟ್ಟಿಮಾತನಾಡಿ, ಕವಲಂದೆ ಭಾಗದ ಹಳ್ಳಿಗಳು ಕುಡಿಯುವ ನೀರಿನ ತರಲು ಇನ್ನೊಂದು ಊರಿಗೆ ಹೋಗಬೇಕಿತ್ತು. ಕಬಿನಿ ನೀರು ತಂದು 56 ಹಳ್ಳಿಗಳ ನೀರನ್ನು ಒದಗಿಸಿದರು. ಶಾಲಾ ಕಾಲೇಜುಗಳಿಗೆ ಮೇಜು, ಕುರ್ಚಿ ನೀಡಿದ್ದರು ಎಂದರು.

ಇದೇ ವೇಳೆ ರಂಗಾಯಣದ ಮಾಜಿ ನಿರ್ದೇಶಕ ಎಚ್‌. ಜನಾರ್ಧನ್‌ ಅವರು, ಕವಿ ಕುವೆಂಪು ವಿಶ್ವಮಾನವ ಗೀತೆಯನ್ನು ಹಾಡಿದರು. ಶಾಸಕರಾದ ತನ್ವೀರ್‌ ಸೇಠ್‌, ಡಾ.ಡಿ. ತಿಮ್ಮಯ್ಯ, ಮಾಜಿ ಶಾಸಕರಾದ ರಮೇಶ್‌ ಬಂಡಿಸಿದ್ದೇಗೌಡ, ವಾಸು, ಸಂದೇಶ್‌ ನಾಗರಾಜ್‌, ಎ.ಆರ್‌. ಕೃಷ್ಣಮೂರ್ತಿ, ಆರ್‌. ಧರ್ಮಸೇನ, ಸುನೀತಾ ವೀರಪ್ಪಗೌಡ, ಮಾಜಿ ಸಂಸದ ಕಾಗಲವಾಡಿ ಎಂ. ಶಿವಣ್ಣ, ಮಾಜಿ ಮೇಯರ್‌ಗಳಾದ ಪುರುಷೋತ್ತಮ್‌, ಅಯೂಬ್‌ ಖಾನ್‌, ಪುಷ್ಪಲತಾ ಚಿಕ್ಕಣ್ಣ, ಜಿಪಂ ಮಾಜಿ ಅಧ್ಯಕ್ಷ ಬಿ.ಎಂ. ರಾಮು, ಸಾಹಿತಿ ಪ್ರೊ. ಕಾಳೇಗೌಡ ನಾಗವಾರ, ಪತ್ರಕರ್ತರಾದ ಕೆ. ದೀಪಕ್‌, ಟಿ. ಗುರುರಾಜ್‌, ಕಸಾಪ ಜಿಲ್ಲಾಧ್ಯಕ್ಷ ಮಡ್ಡೀಕೆರೆ ಗೋಪಾಲ್‌, ಚಿತ್ರ ನಿರ್ದೇಶಕ ನಂಜುಂಡೇಗೌಡ, ಮಹಿಳಾ ಕಾಂಗ್ರೆಸ್‌ ರಾಜ್ಯಾಧ್ಯಕ್ಷೆ ಡಾ. ಪುಷ್ಪಾ ಅಮರನಾಥ್‌, ಜಿಲ್ಲಾಧ್ಯಕ್ಷ ಡಾ.ಬಿ.ಜೆ. ವಿಜಯ್‌ಕುಮಾರ್‌, ನಗರಾಧ್ಯಕ್ಷ ಆರ್‌. ಮೂರ್ತಿ, ಮುಖಂಡರಾದ ಡಿ. ರವಿಂಶಕರ್‌, ಎಂ. ಲಕ್ಷ್ಮಣ, ಚಂದ್ರಮೌಳಿ, ಹರೀಶ್‌ಗೌಡ, ಎಂ. ಶಿವಣ್ಣ, ಸಂದೇಶ್‌, ಈಶ್ವರ್‌ ಚಕ್ಕಡಿ, ಭಾಸ್ಕರ್‌ ಗೌಡ ಮೊದಲಾದವರು ಇದ್ದರು.

ಅನೈತಿಕ ಮಾರ್ಗದಲ್ಲಿ ಅಧಿಕಾರ ಪಡೆಯಲು ಪೈಪೋಟಿ

ಅಪಪ್ರಚಾರಕ್ಕೆ ಪ್ರತ್ಯುತ್ತರ ನೀಡಿ

ಆರ್‌. ಧ್ರುವನಾರಾಯಣ್‌ ಅವರ ಹಠಾತ್‌ ನಿಧನದಿಂದ ತುಂಬಲಾರದ ನಷ್ಟವಾಗಿದೆ. ಅವರ ನಿಧನದಿಂದ ಕಾಂಗ್ರೆಸ್‌ ಪಕ್ಷಕ್ಕೆ ಆಘಾತವಾಗಿದೆ. ಅವರು ಪಕ್ಷ ಸಂಘಟನೆಗಾಗಿ ಹಗಲಿರುಳು ದುಡಿಯುತ್ತಿದ್ದರು. ಪಕ್ಷ ಕೂಡ ಅವರ ಸೇವೆಯನ್ನು ಗುರುತಿಸಿ ಟಿಕೆಟ್‌ ನೀಡಲು ತೀರ್ಮಾನಿಸಿತ್ತು ಎಂದು ಶಾಸಕ ಡಾ. ಯತೀಂದ್ರ ಸಿದ್ದರಾಮಯ್ಯ ತಿಳಿಸಿದರು

ನಂಜನಗೂಡು ಕ್ಷೇತ್ರದ ಟಿಕೆಟ್‌ ಆರ್‌. ಧ್ರುವನಾರಾಯಣ್‌ ಅವರಿಗೆ ಸಿಗುವ ಸಾಧ್ಯತೆಯೇ ಹೆಚ್ಚಿತ್ತು. ಆದರೆ, ಪ್ರತಿ ಪಕ್ಷದ ಕೆಲವು ನಾಯಕರು ಕಾಂಗ್ರೆಸ್‌ ಟಿಕೆಟ್‌ ಸಿಗದ ಕಾರಣ ಒತ್ತಡದಿಂದ ಧ್ರುವನಾರಾಯಣ್‌ ಸಾವನ್ನಪ್ಪಿದ್ದಾರೆ ಎಂದು ಅಪಪ್ರಚಾರ ಮಾಡುತ್ತಿದ್ದಾರೆ. ಪ್ರತಿಪಕ್ಷ ನಾಯಕರು ಮಾಡುತ್ತಿರುವ ಆರೋಪಗಳಿಗೆ ಕಾಂಗ್ರೆಸ್‌ ನಾಯಕರು ತಲೆಯಾಡಿಸುವ ಬದಲು ಪ್ರತ್ಯುತ್ತರ ನೀಡಬೇಕು ಎಂದು ಅವರು ಹೇಳಿದರು.

click me!