ಸಿಎಂ ಕೊರೋನಾ ನಿಧಿಗೆ 50 ಲಕ್ಷ ದೇಣಿಗೆ ನೀಡಿದ ಶಾಸಕ

Kannadaprabha News   | Asianet News
Published : May 02, 2020, 12:03 PM IST
ಸಿಎಂ ಕೊರೋನಾ ನಿಧಿಗೆ 50 ಲಕ್ಷ ದೇಣಿಗೆ ನೀಡಿದ ಶಾಸಕ

ಸಾರಾಂಶ

ಕೊರೋನಾ ವೈರಸ್‌ ಮಹಾಮಾರಿ ನಿಯಂತ್ರಿಸುವ ಸಲುವಾಗಿ ದೇಶವನ್ನು ಲಾಕ್‌ಡೌನ್‌ ಮಾಡಿರುವ ಹಿನ್ನೆಲೆಯಲ್ಲಿ ದೇಶದಲ್ಲಿ ಆರ್ಥಿಕ ಬಿಕ್ಕಟ್ಟು ಸೃಷ್ಟಿಯಾಗದಂತೆ ತಡೆದು ದೇಶದ ನಾಗರಿಕರ ರಕ್ಷಣಾ ಹಿತದೃಷ್ಟಿಯಿಂದ ವೈಯಕ್ತಿಕ ರು.50ಲಕ್ಷ ಹಣವನ್ನು ಮುಖ್ಯಮಂತ್ರಿ ಪರಿಹಾರ ನಿಧಿಗೆ ನೀಡಿದ್ದೇನೆಂದು ಎಂದು ಶಾಸಕ ಎಂ.ಚಂದ್ರಪ್ಪ ತಿಳಿಸಿದ್ದಾರೆ.  

ಚಿತ್ರದುರ್ಗ(ಮೇ.02): ಕೊರೋನಾ ವೈರಸ್‌ ಮಹಾಮಾರಿ ನಿಯಂತ್ರಿಸುವ ಸಲುವಾಗಿ ದೇಶವನ್ನು ಲಾಕ್‌ಡೌನ್‌ ಮಾಡಿರುವ ಹಿನ್ನೆಲೆಯಲ್ಲಿ ದೇಶದಲ್ಲಿ ಆರ್ಥಿಕ ಬಿಕ್ಕಟ್ಟು ಸೃಷ್ಟಿಯಾಗದಂತೆ ತಡೆದು ದೇಶದ ನಾಗರಿಕರ ರಕ್ಷಣಾ ಹಿತದೃಷ್ಟಿಯಿಂದ ವೈಯಕ್ತಿಕ ರು.50ಲಕ್ಷ ಹಣವನ್ನು ಮುಖ್ಯಮಂತ್ರಿ ಪರಿಹಾರ ನಿಧಿಗೆ ನೀಡಿದ್ದೇನೆಂದು ಎಂದು ಶಾಸಕ ಎಂ.ಚಂದ್ರಪ್ಪ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಕೊರೋನಾ ವೈರಸ್‌ ನಿಯಂತ್ರಣಕ್ಕೆ ವೈಯಕ್ತಿವಾಗಿ ರು.50 ಲಕ್ಷ ದೇಣಿಗೆಯ ಚೆಕ್‌ ಅನ್ನು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರಿಗೆ ವಿತರಿಸಿ ಪತ್ರಿಕೆಯೊಂದಿಗೆ ಮಾತನಾಡಿದ ಅವರು, ಕೊರೋನಾ ವೈರಸ್‌ ನಿಯಂತ್ರಣಕ್ಕೆ ಲಾಕ್‌ಡೌನ್‌ ಜಾರಿಯಲ್ಲಿರುವುದರಿಂದ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಜನರ ರಕ್ಷಣೆಗೆ ಬೇಕಾದ ಎಲ್ಲ ಮಾದರಿಯ ಕ್ರಮ ಕೈಗೊಂಡು ಸಮರ್ಥವಾಗಿ ನಿರ್ವಹಿಸುತ್ತಿದ್ದಾರೆ.

ಲಾಕ್‌ಡೌನ್‌ ನಡುವೆಯೇ ಡಿಸಿ ಕಚೇರಿ ಮುಂದೆ ರೈತ ಸಂಘ ಪ್ರತಿಭಟನೆ, ಈರುಳ್ಳಿ ಖರೀದಿಗೆ ಒತ್ತಾಯ

ಅವರ ಆಡಳಿತದಲ್ಲಿ ಆರ್ಥಿಕ ಸಂಕಷ್ಟಸೃಷ್ಟಿಯಾಗದಂತೆ ನೋಡಿಕೊಳ್ಳುವುದು. ಶಾಸಕನಾದ ನಮ್ಮ ಕರ್ತವ್ಯ. ಹೀಗಾಗಿ, ನಮ್ಮ ಕೈಲಾದಷ್ಟುಅರ್ಥಿಕ ಸಹಕಾರವನ್ನು ನೀಡುವ ಮೂಲಕ ರಾಜ್ಯವನ್ನು ಕೊರೋನಾ ವೈರಸ್‌ ಸೋಂಕಿನಿಂದ ಪಾರು ಮಾಡಲು ಅಗತ್ಯ ಸೌಲಭ್ಯಗಳನ್ನು ಕಲ್ಪಿಸಲು ಧನಸಹಾಯ ಮಾಡಿದ್ದೇನೆ ಎಂದರು.

ಕಳೆದ ವರ್ಷ ರಾಜ್ಯದಲ್ಲಿ ಸೃಷ್ಟಿಯಾಗಿದ್ದ ನೆರೆ ಆವಳಿಗೆ ಸಿಕ್ಕಿಕೊಂಡಿರುವವರನ್ನು ರಕ್ಷಣೆ ಮಾಡುವ ದೃಷ್ಟಿಯಿಂದ ಅಂದು ಸಹ ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿಗೆ ರು.1ಕೋಟಿ 42 ಲಕ್ಷ ರು. ಹಣವನ್ನು ವೈಯಕ್ತಿಕವಾಗಿ ನೀಡಿದ್ದೇನೆ. ಅದೇ ಮಾದರಿಯಲ್ಲಿ ಈ ಭಾರಿ ಸಹ ನಮ್ಮ ಕುಟುಂಬದ ಸಂಪನ್ಮೂಲವನ್ನು ಕೊರೋನಾ ಪರಿಹಾರ ನಿಧಿಗೆ ನೀಡಿದ್ದೇನೆ.

ಒಂದೇ ದಿನ 6 ಹೊಸ ಕೇಸ್‌: ಮಗು ಸೇರಿ 8 ಜನಕ್ಕೆ ಸೋಂಕು!

ಅಗತ್ಯವಿದ್ದಲ್ಲಿ ಇನ್ನಷ್ಟುಧನ ಸಹಾಯ ನೀಡಲು ಬದ್ಧನಾಗಿದ್ದೇನೆ. ಜನಪ್ರತಿನಿಧಿಯಾಗಿ ದೇಶಕ್ಕಾಗಿ ನಾನು ಎನ್ನುವ ಮೂಲಕ ಬದುಕು ಕಟ್ಟಿಕೊಳ್ಳಬೇಕಾಗಿದೆ ಎಂದರು. ಸಚಿವರಾದ ಜಗದೀಶ್‌ ಶೆಟ್ಟರ್‌, ಯುವ ಐಕಾನ್‌ ಪ್ರಶಸ್ತಿ ಪುರಸ್ಕೃತ ಎಂ.ರಘುಚಂದನ್‌, ಜಿಲ್ಲಾ ಉಸ್ತುವಾರಿ ಸಚಿವ ಶ್ರೀರಾಮಲು ಇದ್ದರು.

PREV
click me!

Recommended Stories

ವೃದ್ಧೆಯ ಕೇರ್ ಟೇಕರ್‌ನಿಂದಲೇ ₹31 ಲಕ್ಷ ಮೌಲ್ಯದ ಚಿನ್ನಾಭರಣ ಕಳವು: ಬಿಹಾರ ಮೂಲದ ಚಾಂದಿನಿ ಬಂಧನ!
ಡೆವಿಲ್ ಬ್ಯಾನರ್‌ನಲ್ಲಿ 'ಡಾ.ಅಂಬೇಡ್ಕರ್ ತಲೆಮೇಲೆ ಕೊಲೆ ಆರೋಪಿ' ಕೂರಿಸಿದ ಅಂದಾಭಿಮಾನಿಗಳು!