ಅಕ್ರಮ ಮರಳು ಸಾಗಾಟ ಮಾಡೋರಿಗೆ ದಂಡ ಹಾಕಿದ ಅಧಿಕಾರಿಗೆ ಕ್ಲಾಸ್: ಎಂಎಲ್‌ಗೆ ಮಹಿಳಾ ಆಫೀಸರ್‌ ತಿರುಗೇಟು

By Girish GoudarFirst Published Oct 2, 2024, 4:53 PM IST
Highlights

ನಿಯಮದ ಪ್ರಕಾರ ನಾನು ಕೆಲಸ ಮಾಡುತ್ತಿದ್ದೇನೆ ಎಂದು ಮಹಿಳಾ ಅಧಿಕಾರಿ ಆಶಾ ಅವರು ಶಾಸಕರಿಗೆ ತಿರುಗೇಟು ಕೊಟ್ಟಿದ್ದಾರೆ. ಜಿಲ್ಲೆಯ ಮರಳುಗಾರಿಕೆ ಪ್ರಕರಣ ಸದ್ಯಕ್ಕೆ ಕೋರ್ಟ್‌ನಲ್ಲಿದೆ. ರ್ನಾಲ್ಕು ತಿಂಗಳಲ್ಲಿ ನ್ಯಾಯಾಲಯದ ಆದೇಶ ಬರಬಹುದು. ಜಿಲ್ಲೆಯಲ್ಲಿ ಮರಳುಗಾರಿಕೆ ಸದ್ಯಕ್ಕೆ ನಿಷೇಧ ಮಾಡಲಾಗಿದೆ. ಇಂತಹ ಸಂದರ್ಭದಲ್ಲಿ ಜಿಲ್ಲೆಯಲ್ಲಿ ಮರಳು ಸಾಗಾಟ ಕಂಡು ಬಂದ್ರೆ ದಂಡ ವಿಧಿಸುವುದು ನಿಯಮ ಎಂದ ಶಾಸಕ ಭೀಮಣ್ಣ ನಾಯ್ಕ್‌ ಅವರಿಗೆ ತಿರುಗೇಟು ಕೊಟ್ಟ ಅಧಿಕಾರಿ ಆಶಾ 

ಕಾರವಾರ(ಅ.02):  ಅಕ್ರಮ ಮರಳು ಸಾಗಾಟ ಮಾಡುವವರಿಗೆ ದಂಡ ಹಾಕಿದ ಅಧಿಕಾರಿಗೆ ಶಾಸಕರು ಕ್ಲಾಸ್ ತೆಗೆದುಕೊಂಡ ಘಟನೆ ಕಾರವಾರದಲ್ಲಿ ನಡೆದಿದೆ. ಆದರೆ, ಶಾಸಕರ ಮಾತಿಗೆ ತುಂಬಿದ ಸಭೆಯಲ್ಲಿ ಮಹಿಳಾ ಅಧಿಕಾರಿ ತಿರುಗೇಟು ಕೊಟ್ಟಿದ್ದಾರೆ.  

ಕಾರವಾರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಿನ್ನೆ(ಮಂಗಳವಾರ) ಕೆಡಿಪಿ ಸಭೆಯಲ್ಲಿ ಘಟನೆ ನಡೆದಿದೆ. ಸಭೆಯಲ್ಲಿ ಶಿರಸಿ ಶಾಸಕ ಭೀಮಣ್ಣ ನಾಯ್ಕ್ ಮತ್ತು ಕಾರವಾರ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಡಿಡಿ ಆಶಾ ನಡುವೆ ಮಾತಿನ ಚಕಮಕಿ ನಡೆದಿದೆ.  ಅಕ್ರಮ ಮರಳು ಸಾಗಾಟ ಮಾಡುವವರು ನಮ್ಮ ಕ್ಷೇತ್ರದಲ್ಲಿ ಮಾತ್ರ ಸಿಗ್ತಾರಾ ನಿಮಗೆ? ಎಂದು ಶಾಸಕ ಭೀಮಣ್ಣ ಪ್ರಶ್ನಿಸಿದ್ದರು. ಯಾಕೆ ಪದೇ ಪದೇ ಅಮಾಯಕರ ಮೇಲೆ ಕೇಸ್ ಹಾಕಿ ಮನೆ ಕಟ್ಟುವವರಿಗೆ ತೊಂದ್ರೆ ಕೊಡ್ತೀರಾ?. ಜಿಲ್ಲೆಯಲ್ಲಿ ಬೇರೆ ಎಲ್ಲೂ ಆಕ್ರಮ ಮರಳು ಸಾಗಾಟ ನಡೆಯುವುದೇ ಇಲ್ವಾ?. ನನ್ನ ಕ್ಷೇತ್ರದಲ್ಲೇ ಹೆಚ್ಚು ಕೇಸ್ ದಾಖಲು ಮಾಡಿ ದಂಡ ವಿಧಿಸುವುದು ಯಾಕೆ? ಎಂದ ಶಾಸಕರು ಪ್ರಶ್ನಿಸಿದ್ದರು. 

Latest Videos

ಬಿಜೆಪಿ ನಾಯಕರ ಮಾತಿಗೆ ನೊಂದು ಸಿಎಂ ಪತ್ನಿ 14 ಸೈಟ್ ಹಿಂದಿರುಗಿಸಿದ್ದಾರೆ: ಸಚಿವ ಮಂಕಾಳು ವೈದ್ಯ

ನಿಯಮದ ಪ್ರಕಾರ ನಾನು ಕೆಲಸ ಮಾಡುತ್ತಿದ್ದೇನೆ ಎಂದು ಮಹಿಳಾ ಅಧಿಕಾರಿ ಆಶಾ ಅವರು ಶಾಸಕರಿಗೆ ತಿರುಗೇಟು ಕೊಟ್ಟಿದ್ದಾರೆ. ಜಿಲ್ಲೆಯ ಮರಳುಗಾರಿಕೆ ಪ್ರಕರಣ ಸದ್ಯಕ್ಕೆ ಕೋರ್ಟ್‌ನಲ್ಲಿದೆ. ರ್ನಾಲ್ಕು ತಿಂಗಳಲ್ಲಿ ನ್ಯಾಯಾಲಯದ ಆದೇಶ ಬರಬಹುದು. ಜಿಲ್ಲೆಯಲ್ಲಿ ಮರಳುಗಾರಿಕೆ ಸದ್ಯಕ್ಕೆ ನಿಷೇಧ ಮಾಡಲಾಗಿದೆ. ಇಂತಹ ಸಂದರ್ಭದಲ್ಲಿ ಜಿಲ್ಲೆಯಲ್ಲಿ ಮರಳು ಸಾಗಾಟ ಕಂಡು ಬಂದ್ರೆ ದಂಡ ವಿಧಿಸುವುದು ನಿಯಮ ಎಂದ ಅಧಿಕಾರಿ ಆಶಾ ತಿರುಗೇಟು ನೀಡಿದ್ದರು. 
ನಿಯಮದ ಪ್ರಕಾರ ದಂಡ ತೆಗೆದುಕೊಳ್ಳುವಂತೆ ನಮ್ಮ ಸಿಬ್ಬಂದಿಗೆ ಸೂಚಿಸಿದ್ದೇನೆ. ನಾನು ಒಬ್ಳೇ ಮಾಡುತ್ತಿಲ್ಲ, ಪೊಲೀಸ್ ಇಲಾಖೆ ಕೂಡಾ ಮಾಡ್ತಾ ಇದಾರೆ. ಅವರಿಗೂ ಬೇಕಾದ್ರೆ ಕರೆದು ಕೇಳಿ, ನಾನು ನಿಯಮದ ಪ್ರಕಾರ ಕೆಲಸ ಮಾಡುತ್ತಿದ್ದೇನೆ ಎಂದು ಕೆಡಿಪಿ ಸಭೆಯಲ್ಲಿ ಗಣಿ ಅಧಿಕಾರಿ ಆಶಾ ಶಾಸಕರಿಗೆ ತಿರುಗೇಟು ಕೊಟ್ಟಿದ್ದಾರೆ. 

ಅಧಿಕಾರಿ ಆಶಾ ಮಾತಿಗೆ ಶಾಸಕ ಭೀಮಣ್ಣಾ ನಾಯ್ಕ್ ಕುಪಿತರಾಗಿ, ಆಯ್ತು ನಿಯಮದ ಪ್ರಕಾರ ಎಷ್ಟು ದಿನ ಜಿಲ್ಲೆಯಲ್ಲಿ ಕೆಲಸ ಮಾಡ್ತೀಯಾ ನೋಡ್ತೇನೆ ಎಂದಿದ್ದರು. ಈ ವೇಳೆ ಮಧ್ಯಪ್ರವೇಶಿಸಿದ ಸಚಿವ ಮಂಕಾಳು ವೈದ್ಯ ಅವರು ಶಾಸಕ ಹಾಗೂ ಅಧಿಕಾರಿ ಮಾತುಕತೆಗೆ ತಡೆ ನೀಡಿ ಆಮೇಲೆ ಕೂತು ಮಾತಾಡೋಣ ಸದ್ಯಕ್ಕೆ ಇಲ್ಲಿಗೆ ನಿಲ್ಲಿಸಿ ಎಂದ ಇಬ್ಬರಿಗೂ ಸಮಾಧಾನ ಪಡಿಸಿದ್ದಾರೆ. 

click me!