ಲಿಂಗಾಯತ ಅಭಿವೃದ್ಧಿ ಪ್ರಾಧಿಕಾರದ ಬದಲಾಗಿ ಮೀಸಲಾತಿ ಕಲ್ಪಿಸಿ: ಬಸವರಾಜ ಹೊರಟ್ಟಿ

By Suvarna NewsFirst Published Nov 19, 2020, 3:18 PM IST
Highlights

ಸರ್ಕಾರ ಈಗ ಲಿಂಗಾಯತ ನಿಗಮ ಮಾಡಿ ಜೇನು ಗುಡಿಗೆ ಕೈ ಹಾಕಿದೆ, ಸರ್ಕಾರ ತಜ್ಞರ ಸಮಿತಿ ಮಾಡಿ ಸಾಧಕ ಬಾದಕಗಳನ್ನ ನೋಡಿ ಒಂದು ನಿರ್ಧಾರಕ್ಕೆ ಬರಬೇಕು. ಮತ್ತು ಬಸವೇಶ್ವರ ನಿಗಮ ಎಂದು ಮಾಡಬೇಕು ಎಂದು ತಿಳಿಸಿದ ಹೊರಟ್ಟಿ 

ಹುಬ್ಬಳ್ಳಿ(ನ.19):  ಲಿಂಗಾಯತ ನಿಗಮ ಮಾಡುವದರಿಂದ ಏನೂ ಉಪ ಯೋಗವಿಲ್ಲ, ಕೇವಲ ಸಣ್ಣ ಸಣ್ಣ ಸಮುದಾಯದ ಜನಗಳಿಗೆ ಇದು ಉಪಯೋಗವಾಗುತ್ತದೆ. ಈಗ ಲಿಂಗಾಯತ ‌ನಿಗಮ ಮಾಡಿ, ಅದಕ್ಕೆ ‌ನೈಯಾ ಪೈಸೆ ಹಣವನ್ನ ನಿಗದಿ ಮಾಡಿಲ್ಲ. ಕರ್ನಾಟಕದಲ್ಲಿ 1 ಕೋಟಿ 18 ಲಕ್ಷ ಲಿಂಗಾಯತರಿದ್ದಾರೆ‌. ಈ ನಿಗಮಗಳಿಗೆ ಅಧ್ಯಕ್ಷರನ್ನಾ ಮಾಡಿ, ಗೂಟದ ಕಾರು ನೀಡ್ತಾರೆ. ಇದರಿಂದ ಏನೂ ಪ್ರಯೋಜನವಿಲ್ಲ ಎಂದು ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಹೇಳಿದ್ದಾರೆ. 

ಇಂದು(ಗುರುವಾರ) ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನ ಪತ್ರದಿಂದ ಈಗ ನಿಗಮ ಮಾಡಿದ್ದಾರೆ, ಇದರಿಂದ ನಮ್ಮ ಬೇಡಿಕೆಗಳು ಪೂರೈಕೆ ಆಗಿಲ್ಲಾ. ಓಬಿಸಿನಲ್ಲಿ ಲಿಂಗಾಯತವನ್ನ ಸೇರಿಸಬೇಕೆಂದು ನಮ್ಮ‌ ಮನವಿ ಈಗಾಗಲೇ ಕೇಂದ್ರ ಸರ್ಕಾರದ ಮುಂದೆ ಇದೆ. ಸರ್ಕಾರ ಈಗ ಲಿಂಗಾಯತ ನಿಗಮ ಮಾಡಿ ಜೇನು ಗುಡಿಗೆ ಕೈ ಹಾಕಿದೆ. ಸರ್ಕಾರ ತಜ್ಞರ ಸಮಿತಿ ಮಾಡಿ ಸಾಧಕ ಬಾದಕಗಳನ್ನ ನೋಡಿ ಒಂದು ನಿರ್ಧಾರಕ್ಕೆ ಬರಬೇಕು. ಮತ್ತು ಬಸವೇಶ್ವರ ನಿಗಮ ಎಂದು ಮಾಡಬೇಕು ಎಂದು ತಿಳಿಸಿದ್ದಾರೆ. 

ಯಡಿಯೂರಪ್ಪಗೆ ತಿರುಗುಬಾಣವಾದ ವೀರಶೈವ ಲಿಂಗಾಯತ ನಿಗಮ ರಚನೆ...!

ಈ ನಿಗಮಕ್ಕೆ ಬಾಲವು ಇಲ್ಲಾ ತಲೆಯು ಇಲ್ಲಾ. ಒಂದು ಸಾವಿರ ಹಣ ನಿಗಮದಲ್ಲಿಟ್ಟರೇ 25%. ಜನರಿಗೆ ಅನಕೂಲವಾಗುತ್ತದೆ. ನಮಗೆ 16 % ಮೀಸಲಾತಿ ಸಿಕ್ಕರೆ ಎಲ್ಲಾ ಸೌಲಭ್ಯಗಳು ಸಿಗುತ್ತವೆ. ನಮ್ಮ ಪ್ರಮುಖ ಹೋರಾಟ 16% ರಿಂದ 18% ರವರೆಗೆ ಮೀಸಲಾತಿ ಸಿಗಬೇಕು. ಮತ್ತು ಓಬಿಸಿಯಲ್ಲಿ ಸೇರಿಸಬೇಕೆಂದು ಮನಿವಿ ಮಾಡಿದರು. ನಾವು ನಿಗಮವನ್ನ ಸ್ವಾಗತ ಮಾಡುವುದಿಲ್ಲ, ವಿರೋಧವನ್ನು ಸಹ ಮಾಡುವುದಿಲ್ಲ. ಎಂದರು.
 

click me!