ಮುಖ್ಯಮಂತ್ರಿಗಳ ಬಳಿ ಮಾತನಾಡಿದ್ದೇನೆ : ಸಚಿವ ಸ್ಥಾನ ಸಿಗುವ ಭರವವೆಯಲ್ಲಿ ಶಾಸಕ

By Kannadaprabha News  |  First Published Sep 4, 2021, 12:21 PM IST
  • ನಾನು ಮುಖ್ಯಮಂತ್ರಿಗಳ ಬಳಿ ಮಾತನಾಡಿದ್ದೇನೆ. ನಾನು ಏನು ಎಂಬುವುದು ಮುಖ್ಯಮಂತ್ರಿಗಳಿಗೂ ಗೊತ್ತಿದೆ. 
  • ಮುಂಬರುವ ದಿನಗಳಲ್ಲಿ ಸಂಪುಟ ವಿಸ್ತರಣೆಯಲ್ಲಿ ಅವಕಾಶ ಸಿಗುವ ಭರವಸೆ ಇದೆ ಎಂದ ಶಾಸಕ

 ತಾಳಿಕೋಟೆ (ಸೆ.04): ನಾನು ಮುಖ್ಯಮಂತ್ರಿಗಳ ಬಳಿ ಮಾತನಾಡಿದ್ದೇನೆ. ನಾನು ಏನು ಎಂಬುವುದು ಮುಖ್ಯಮಂತ್ರಿಗಳಿಗೂ ಗೊತ್ತಿದೆ. ಮುಂಬರುವ ದಿನಗಳಲ್ಲಿ ಸಂಪುಟ ವಿಸ್ತರಣೆಯಲ್ಲಿ ಅವಕಾಶ ಸಿಗುವ ಭರವಸೆ ಇದೆ. ನೋಡೋಣ ಕೊಡುತ್ತಾರೆ ಎಂಬ ವಿಶ್ವಾಸವಿದೆ ಎಂದು ಆಹಾರ ಪೂರೈಕೆ ನಿಗಮದ ಅಧ್ಯಕ್ಷ, ಶಾಸಕ ಎ.ಎಸ್‌.ಪಾಟೀಲ್‌ ನಡಹಳ್ಳಿ ವಿಶ್ವಾಸ ವ್ಯಕ್ತಪಡಿಸಿದರು.

ತಾಲೂಕಿನ ಬಳಗಾನೂರ ಗ್ರಾಮದಲ್ಲಿ ಶುಕ್ರವಾರ ಕೆರೆಯ ವೀಕ್ಷಣೆಯ ಬಳಿಕ ತಮ್ಮನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನಗೊಂದು ಅವಕಾಶ ಕೊಟ್ಟರೆ ಜಿಲ್ಲೆಯಾದ್ಯಂತ ಸುತ್ತಾಡಿ ಕೆಲಸ ಮಾಡುತ್ತೇನೆ. ಉತ್ತರ ಕರ್ನಾಟಕದ ಜನರ ಜ್ವಲಂತ ಸಮಸ್ಯೆಗಳನ್ನು ದಾಖಲೆಗಳ ಸಮೇತ ವಿಧಾನಸೌಧದಲ್ಲಿ ಸರ್ಕಾರದ ಎದುರಿಗೆ ಕಳೆದ ಹತ್ತು ವರ್ಷದಿಂದ ಮಂಡನೆ ಮಾಡಿದ್ದೇನೆ. ಅದನ್ನೆಲ್ಲ ಗುರುತಿಸಿ ಜಿಲ್ಲೆಗೆ ಸಚಿವ ಸ್ಥಾನ ಕೊಡುತ್ತಾರೆಂಬ ನಿರೀಕ್ಷೆ ಇಟ್ಟುಕೊಂಡಿರುವೆ. ಅದರಲ್ಲಿ ನನ್ನನ್ನು ಪರಿಗಣಿಸುವ ಅಚಲ ವಿಶ್ವಾಸ ಹೊಂದಿದ್ದೇನೆ ಎಂದರು.

Latest Videos

undefined

ಬಿಜೆಪಿ ವರಿಷ್ಠರು ಯಾರಿಗೆ ಮಣೆ ಹಾಕ್ತಾರೆ. ಎರಡು ಸ್ಥಾನ ಯಾರಿಗೆ ಸಿಗಲಿವೆ?

ತಾಳಿಕೋಟೆ ತಾಲೂಕಿನ ವ್ಯಾಪ್ತಿಯಲ್ಲಿ ಬರುವ ಬಳಗಾನೂರ,ಪಡೇಕನೂರ,ತಮದಡ್ಡಿ ಕೆರೆಗಳು ವಿಶೇಷವಾಗಿ ದೊಡ್ಡ ಕೆರೆಗಳಾಗಿವೆ. ಇವುಗಳನ್ನು ಕೆನಾಲ್‌ ಮೂಲಕ ತುಂಬಿಸಲಾಗಿದೆ. ಕೆರೆಯ ಸುತ್ತಮುತ್ತಲಿನ ರೈತರಿಗೆ ಅಂತರ್ಜಲ ಮಟ್ಟಹೆಚ್ಚಾಗಿ ಸಾವಿರಾರು ಕರೆ ಜಮೀನಿನಲ್ಲಿ ನೀರಾವರಿ ಬೆಳೆ ಬೆಳೆಯಲು ಅನುಕೂಲವಾಗಿದೆ. ಈ ಭಾಗದಲ್ಲಿ ವನಹಳ್ಳಿ ಮಡಿಕೇಶ್ವರ ಭಾಗದಲ್ಲಿ 110 ಕೆ.ವಿ ವಿದ್ಯುತ್‌ ಸ್ಟೇಶನ್‌ ಮಂಜೂರಿ ಮಾಡಿಸಿದ್ದೇನೆ. 40-45 ವರ್ಷಗಳಷ್ಟುಹಳೆಯದಾದ ವಿದ್ಯುತ್‌ ತಂತಿ,ಕಂಬಗಳನ್ನು ಬದಲಾಯಿಸಲಾಗುತ್ತಿದೆ ಎಂದು ಹೇಳಿದರು.

ಪ್ರಧಾನಮಂತ್ರಿ ಗ್ರಾಮ ಸಡಕ್‌ ಯೋಜನೆಯಡಿ 18 ಕೋಟಿ ರು.ಗಳನ್ನು ಮಡಿಕೇಶ್ವರ,ವನಹಳ್ಳಿ,ಲಿಂಗದಳ್ಳಿ ಹಾಗೂ ಬಳಗಾನೂರ ಭಾಗದಲ್ಲಿ ಅಭಿವೃದ್ಧಿಗಾಗಿ ನೀಡಲಾಗಿದೆ.ಕೆರೆಗಳನ್ನು ತುಂಬಿದ ಬಳಿಕ ಮೀನುಗಾರಿಕೆ ಮಾಡಲು ಮತ್ಸ್ಯಸಂಪದ ಯೋಜನೆಯಡಿ ಒತ್ತು ನೀಡಲಾಗುತ್ತದೆ ಎಂದು ಹೇಳಿದರು.

click me!