ತಮ್ಮ ಅನಾರೋಗ್ಯ ಸಮಸ್ಯೆ ಬಗ್ಗೆ ತಿಳಿಸಿದ ಅನಿತಾ ಕುಮಾರಸ್ವಾಮಿ : ವೈದ್ಯರ ಸೂಚನೆ ಇತ್ತೆಂದ ಶಾಸಕಿ

By Kannadaprabha NewsFirst Published Nov 19, 2020, 3:52 PM IST
Highlights

ತಮ್ಮ ಕ್ಷೇತ್ರಕ್ಕೆ ಅಷ್ಟು ಪ್ರಮಾಣದಲ್ಲಿ ಭೇಟಿ ನೀಡದ ಶಾಸಕಿ ಅನಿತಾ ಕುಮಾರಸ್ವಾಮಿ ಇದೀಗ ತಮ್ಮ ಅನಾರೋಗ್ಯ ಸಮಸ್ಯೆ ಬಗ್ಗೆ ಹೇಳಿಕೊಂಡಿದ್ದಾರೆ

ರಾಮ​ನ​ಗರ (ನ.19):  ಕೊರೋನಾ ಲಾಕ್‌ಡೌನ್‌ ನಂತರ ಕಳೆದ ಆರೇ​ಳು ತಿಂಗಳ ಕಾಲ ರಾಮನಗರ ಕ್ಷೇತ್ರದತ್ತ ಮುಖಮಾಡದ ಶಾಸಕಿ ಅನಿತಾ ಕುಮಾರಸ್ವಾಮಿ ಅವರು, ಬುಧವಾರ ಕ್ಷೇತ್ರಕ್ಕೆ ಆಗಮಿಸಿ ವಿವಿಧ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿದರು.

ಶಾಸಕರು ಆಗ​ಮಿ​ಸದ ಕಾರಣ ಕಚೇರಿಗಳಲ್ಲಿ ಅಧಿಕಾರಿಗಳ್ಳದೇ ದರ್ಬಾರ್‌ ನಡೆ​ದಿತ್ತು. ಕ್ಷೇತ್ರ​ದ​ಲ್ಲಿ ಯಾವುದೇ ಅಭಿವೃದ್ಧಿ ಕೆಲಸಗಳಾಗುತ್ತಿಲ್ಲ ಎಂದು ಮತದಾರರು ತಮ್ಮ ಆಕ್ರೋಶವನ್ನ ಹೊರಹಾಕಿದ್ದರು. ಮತ್ತೊಂದೆಡೆ ತಮ್ಮದೇ ಪಕ್ಷದ ಕಾರ್ಯಕರ್ತರ ಸಮಸ್ಯೆಗಳನ್ನು ಆಲಿಸುತ್ತಿಲ್ಲ ಎಂದು ಕಾರ್ಯಕರ್ತರಲ್ಲೇ ಅಸಮಾಧಾನವೂ ಉಂಟಾಗಿತ್ತು. ಇದೆಲ್ಲವನ್ನು ಪ್ರಶ್ನೆ ಮಾಡಿದರೆ ಅರೋಗ್ಯದ ಸಮಸ್ಯೆ ನೆಪ ನೀಡಿ ಶಾಸಕಿ ಅನಿತಾ ಕುಮಾ​ರ​ಸ್ವಾಮಿ ಜಾರಿ​ಕೊಂಡರು.

ಕ್ಷೇತ್ರಕ್ಕೆ ತಿಂಗಳುಗಟ್ಟಲೆ ಬರ​ಲಿಲ್ಲ ಎಂದು ನಾಗ​ರೀ​ಕರು ಆಕ್ರೋ​ಶ​ಗೊಂಡಿ​ದ್ದಾರೆ ಎಂದು ಸುದ್ದಿ​ಗಾ​ರರು ಗಮನ ಸೆಳೆ​ದಾಗ ಪ್ರತಿ​ಕ್ರಿ​ಯಿ​ಸಿದ ಅನಿತಾ, ತಮಗೆ ಸೈನಸ್‌ ಸಮಸ್ಯೆ ಇದ್ದಿ​ದ್ದ​ರಿಂದ ವೈದ್ಯರು ಮೂರು ತಿಂಗ​ಳು​ಗಳ ಕಾಲ ವಿಶ್ರಾಂತಿ ಪಡೆ​ಯು​ವಂತೆ ಸೂಚಿ​ಸಿ​ದ್ದ​ರಿಂದ ಕ್ಷೇತ್ರಕ್ಕೆ ಬರ​ಲಾ​ಗ​ಲಿಲ್ಲ. ಆದರೆ, ಕ್ಷೇತ್ರದ ಅವ​ಶ್ಯ​ಕ​ತೆ​ಗಳ ಬಗ್ಗೆ ತಾವು ಅಧಿ​ಕಾ​ರಿ​ಗ​ಳೊಂದಿಗೆ ಸಂಪ​ರ್ಕ​ದಲ್ಲಿ ಇದ್ದ​ದ್ದಾಗಿ ತಿಳಿ​ಸಿ​ದರು. ಜೆಡಿ​ಎಸ್‌ ಮುಖಂಡ​ರಾದ ರಾಜ​ಶೇ​ಖರ್‌, ಬಿ.ಉ​ಮೇಶ್‌, ಅಜಯ್‌ ದೇವೇ​ಗೌ​ಡ, ಪಿ.ಅ​ಶ್ವಥ್‌, ಜಯ​ಕು​ಮಾರ್‌ , ರಾಜ​ಶೇ​ಖರ್‌ , ಕುಮಾರ್‌ ಗೌಡ ಮತ್ತಿತ​ರರು ಹಾಜ​ರಿ​ದ್ದರು.

ಶಾಸಕಿ ಅನಿತಾ ಕುಮಾರಸ್ವಾಮಿ ಚುನಾವಣೆಯಲ್ಲಿ ಗೆದ್ದ ಬಳಿಕ ಕ್ಷೇತ್ರದತ್ತ ಮುಖ ಮಾಡಿದ್ದು ಸ್ವಲ್ಪ ಕಡಿಮೆ. ಅದರಲ್ಲೂ ಪ್ರಮುಖವಾಗಿ ಸರ್ಕಾರದ ಕೆಲಸ ಹಾಗೂ ಕಾಮಗಾರಿಗಳ ಶಂಕುಸ್ಥಾಪನೆಗೆ ಮಾತ್ರ ಶಾಸಕರು ಸೀಮಿತ ಎಂಬ ಚರ್ಚೆಗಳು ಕ್ಷೇತ್ರದಲ್ಲಿ ನಡೆ​ದಿ​ದ್ದವು. ಪ್ರಮುಖವಾಗಿ ಕೋವಿಡ್‌ ಶುರುವಾದಗಿನಿಂದ ಶಾಸಕಿ ಅನಿತಾ ಕುಮಾರಸ್ವಾಮಿ ಕ್ಷೇತ್ರದತ್ತ ಬರಲೇ ಇಲ್ಲ. ಇನ್ನು ಕ್ಷೇತ್ರದಲ್ಲಿ ಯಾವುದೇ ಕೆಲಸ ಕಾರ್ಯಗಳು ನಡೆಯುತ್ತಿಲ್ಲ. ಸಮಸ್ಯೆಗಳನ್ನು ಹೇಳಿಕೊಳ್ಳಲು ಶಾಸಕರು ಸಂಪರ್ಕಕ್ಕೆ ಸಿಗುತ್ತಿಲ್ಲ ಎಂಬ ಆರೋಪಗಳು ಕೇಳಿ ಬಂದಿ​ದ್ದವು.

'ನಿಖಿಲ್ ಕುಮಾರಸ್ವಾಮಿ ವಿರುದ್ಧ ಗರಂ : ಅನಿತಾ ವಿರುದ್ಧವೂ ಅಸಮಾಧಾನ' .

ಕ್ಷೇತ್ರವನ್ನು ಪುತ್ರ ನಿಖಿಲ್ಗೆ ಬಿಟ್ಟು ಕೊಡಲು ಎಲ್ಲ ರೀತಿಯ ಸಿದ್ಧತೆಗಳನ್ನು ಒಳಗೊಳಗೆ ಜೆಡಿಎಸ್‌ ಪಕ್ಷ ಮಾಡಿಕೊಳ್ಳುತ್ತಿದೆ. ಅದಕ್ಕೆ ಪುಷ್ಠಿ ನೀಡುವಂತೆ ರಾಮನಗರಲ್ಲಿ ನಿಖಿಲ್ ಕುಮಾರಸ್ವಾಮಿ ತಮ್ಮ ಕಾರ್ಯ ಚಟುವಟಿಕೆಗಳನ್ನು ಶುರು ಮಾಡಿಕೊಂಡಿದ್ದಾರೆ. ಈಗಾಗಲೇ ಸಿದ್ಧತೆಯಲ್ಲಿ ತೊಡ​ಗಿ​ರುವ ಅವರು ಜನರನ್ನು ಭೇಟಿ ಮಾಡಿ ಸಮಸ್ಯೆಗಳನ್ನು ಕುಮಾರಣ್ಣನ ಜತೆ ಮಾತನಾಡಿ ಬಗೆಹರಿಸಿಕೊಡುತ್ತೇನೆ ಎಂಬ ಭರವಸೆ ಕೊಡುತ್ತಿದ್ದಾರೆ.

ಕುಟುಂಬ ರಾಜಕಾರಣಕ್ಕೆ ಪುಷ್ಠಿ ನೀಡುವಂತೆ ಮಾಜಿ ಪ್ರಧಾನಿ ದೇವೇಗೌಡರ ಕಾಲದಿಂದಲೂ ರಾಮನಗರ ಕ್ಷೇತ್ರದಲ್ಲಿ ಜೆಡಿ​ಎಸ್‌ ನಿಂದ ಸ್ಥಳೀ​ಯ​ರು ಚುನಾವಣೆ ಎದುರಿಸಲು ಅವ​ಕಾಶ ನೀಡಿಲ್ಲ. ಈಗ ಪುತ್ರ ನಿಖಿಲ್ ಕುಮಾರಸ್ವಾಮಿಗೆ ಕ್ಷೇತ್ರ ಬಿಟ್ಟುಕೊಟ್ಟು ಗೆಲುವು ಸಾಧಿಸಲು ಜೆಡಿಎಸ್‌ ಮಾಸ್ಟರ್‌ ಪ್ಲಾನ್‌ ಮಾಡಿಕೊಂಡಿದೆ.

click me!