ಭಾರತ್ ಬಂದ್: ಜಿಲ್ಲೆಗಳಲ್ಲಿ ಪ್ರತಿಭಟನೆಗೆ ನೀರಸ ಪ್ರತಿಕ್ರಿಯೆ

By Suvarna NewsFirst Published Jan 8, 2020, 9:06 AM IST
Highlights

ಕಾರ್ಮಿಕ ಸಂಘಟನೆಗಳು ಕರೆ ನೀಡಿರುವ ಭಾರತ್ ಬಂದ್‌ಗೆ ಜಿಲ್ಲೆಗಳಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಅಷ್ಟಾಗಿ ಬಂದ್ ಬಿಸಿ ತಟ್ಟಿಲ್ಲ ಎನ್ನಬಹುದು. ಎಂದಿನಂತೆ ಬಸ್, ವಾಹನಗಳು ಸಂಚರಿಸುತ್ತಿದ್ದು ಶಾಲೆಗಳಿಗೂ ರಜೆ ನೀಡಲಾಗಿಲ್ಲ.

ಕೋಲಾರ(ಜ.08): ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಕಾರ್ಮಿಕ ಸಂಘಟನೆಗಳು ಭಾರತ್ ಬಂದ್ ಕರೆ ನೀಡಿದ್ದು, ಕೋಲಾರದಲ್ಲಿ‌ ಬಂದ್‌ಗೆ ಬೆಂಬಲ ವ್ಯಕ್ತವಾಗಿದೆ. ಮುಂಜಾನೆ 6 ಗಂಟೆಯಿಂದ‌ ಬೀದಿಗಿಳಿದಿರುವ ಸಂಘಟನೆ ಕಾರ್ಯಕರ್ತರು ಮತ್ತು ಮುಖಂಡರು ಪ್ರತಿಭಟನೆ ನಡೆಸಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ಜಿಲ್ಲೆಯಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ.

"

ಬಳ್ಳಾರಿಯ ರಾಯಲ್ ವೃತ್ತದಲ್ಲಿ ಪ್ರತಿಭಟನೆಗೆ ಅವಕಾಶ ನಿರಾಕರಿಸಲಾಗಿದೆ. ಬುಡಾ ಪಾರ್ಕ್ ನಲ್ಲಿ ಪ್ರತಿಭಟನೆಗೆ ಅವಕಾಶ ನೀಡಿದ್ದು, ಮೆರವಣಿಗೆ ಮಾಡಲು ಕೂಡ ಅವಕಾಶ ನಿರಾಕರಿಸಲಾಗಿದೆ. ಎಂದಿನಂತೆ ಸಾರಿಗೆ ಬಸ್  ಆಟೋ ಸಂಚಾರ ಇರಲಿದೆ. ಆಟೋ ಪ್ರಚಾರದ ಮೂಲಕ ಬಂದ್ ಮಾಡುವಂತೆ ಮನವಿ ಮಾಡಿಕೊಳ್ಳಲಾಗುತ್ತಿದೆ.

ಬಲವಂತ ಬಂದ್‌ ಮಾಡಿಸಿದರೆ ಕ್ರಮ: ಭಾಸ್ಕರ್ ರಾವ್ ಎಚ್ಚರಿಕೆ

ಮೈಸೂರಿನಲ್ಲಿ ಬಂದ್‌ನ ಯಾವುದೇ ವಾತಾವರಣ ಇಲ್ಲ. ಜನಜೀವನ ಸಹಜ‌ ಸ್ಥಿತಿಯಲ್ಲಿದೆ. ಪುರಭವನದ ಮುಂಭಾಗ 11.30 ರಿಂದ ಪ್ರತಿಭಟನೆ ನಡೆಯಲಿದೆ. ಬಸ್ ಸೇರಿದಂತೆ ಎಲ್ಲಾ ಬಗೆಯ ಸಾರಿಗೆ ಸಂಚಾರ ಆರಂಭವಾಗಿದೆ. ವಿಕ್ರಾಂತ್ ಟೈರ್ಸ್ ಎಂಪ್ಲಾಯ್ಸ್ ಯೂನಿಯನ್, ಎಸ್ ಎಫ್ ಐ, ಎಐಎಸ್ಎಫ್, ಡಿವೈಎಫ್ ಐ, ಎಐಡಿ, ಎಐಎಮೆಸ್ ಎಸ್ , ಎಐಡಬ್ಲ್ಯೂ ಎ, ಎಐವೈಎಫ್ ಸಂಘಟನೆಗಳು (ಎಡಪಕ್ಷಗಳು), ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ, ಜಿಲ್ಲಾ ಕಾರ್ಮಿಕ ಸಂಘಟನೆಗಳು ಬಂದ್‌ಗೆ ಬೆಂಬಲ ಸೂಚಿಸಿವೆ.

ಉಡುಪಿಯಲ್ಲಿ ಬಂದ್ ಬಿಸಿ ಕಂಡು ಬಂದಿಲ್ಲ. ಎಂದಿನಂತೆ ಬಸ್ ಸಂಚಾರ ನಡೆಯುತ್ತಿದೆ. ಎಡಪಕ್ಷಗಳ ವಿವಿಧ ಕಾರ್ಮಿಕ ಸಂಘಟನೆಗಳಿಂದ ಮುಷ್ಕರಕ್ಕೆ ಬೆಂಬಲ ವ್ಯಕ್ತಪಡಿಸಿವೆ. ವಿಜಯಪುರದಲ್ಲಿ ಬಂದ್ ನಡೆಯುತ್ತಿಲ್ಲ. ಎಂದಿನಂತೆ ಬಸ್ ಸಂಚಾರ ಆರಂಭವಾಗಿದ್ದು, ಆಟೋ ಸಂಚಾರ ಎಂದಿನಂತೆ ಇರಲಿದೆ.

"

ಭಾರತ್ ಬಂದ್: ಸ್ಕೂಲ್, ಕಾಲೇಜಿಗೆ ರಜೆ ಇಲ್ಲ, ಬಸ್ ಓಡಾಟ ನಿಲ್ಲೋದಿಲ್ಲ..!

ಬಾಗಲಕೋಟೆಯಲ್ಲಿ ಬಂದ್ ಎಫೆಕ್ಟ್ ಕಂಡುಬಂದಿಲ್ಲ. ಪ್ರತಿನಿತ್ಯದಂತೆ KSRTC ಬಸ್ ಸಂಚಾರ ಆರಂಭಿಸಿದೆ.  ಬೆಳಗಾವಿ ಜಿಲ್ಲೆಯಾದ್ಯಂತ ಎಲ್ಲೂ ಬಂದ್ ಎಫೆಕ್ಟ್ ಇಲ್ಲ. ಬೆಳಗಾವಿ ಬಸ್ ನಿಲ್ದಾಣದಲ್ಲಿ ಎಂದಿನಂತೆ ಸರ್ಕಾರಿ ಬಸ್‌ಗಳು ಸಂಚಾರ ಆರಂಭಿಸಿವೆ.

ಮಂಡ್ಯ ಜಿಲ್ಲೆಯಲ್ಲಿ ಶಾಲಾ ಕಾಲೇಜುಗಳಿಗೆ ರಜೆ ನೀಡಲಾಗಿಲ್ಲ. ಶಾಲಾ ಕಾಲೇಜುಗಳು ಎಂದಿನಂತೆ ಇರಲಿವೆ. ಸರ್ಕಾರಿ ಸಾರಿಗೆ ವ್ಯವಸ್ಥೆಯಲ್ಲೂ ಯಾವುದೇ ಬದಲಾವಣೆ ಇಲ್ಲ. ಮುಂಜಾನೆಯಿಂದ ಬಸ್ ಹಾಗೂ ಇತರೆ ನಾಗರೀಕ ಸೇವೆಗಳು ಲಭ್ಯವಿರಲಿದೆ.

ಭಾರತ್ ಬಂದ್: ಕೋಲಾರದಲ್ಲಿ ಪ್ರತಿಭಟನಾಕಾರರ ಬಂಧನ

ದ.ಕ ಜಿಲ್ಲೆಯಾದ್ಯಂತ ಖಾಸಗಿ, ಸರ್ಕಾರಿ ಬಸ್ ಸಂಚಾರ ಯಥಾಸ್ಥಿತಿಯಲ್ಲಿದೆ. ಆಟೋ ರಿಕ್ಷಾ ಸೇರಿದಂತೆ ವಾಹನ ಸಂಚಾರದಲ್ಲಿ ವ್ಯತ್ಯಯ ಕಂಡುಬಂದಿಲ್ಲ. ಕೆಲ ಎಡಪಂಥೀಯ ಸಂಘಟನೆಗಳು ಬಂದ್‌ಗೆ ಬೆಂಬಲ ಸೂಚಿಸಿವೆ.

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಬಂದ್ ಎಫೆಕ್ಟ್ ಇಲ್ಲ. ಎಂದಿನಂತೆ ಬಸ್ ಸಂಚಾರ ನಡೆಯುತ್ತಿದೆ. ನಗರದಲ್ಲಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ. ಧಾರವಾಡದಲ್ಲಿ ಬಂದ್‌ ಎಫೆಕ್ಟ್ ಕಂಡು ಬಂದಿಲ್ಲ. 10 ಗಂಟೆಗೆ ಕಡಪಾ ಮೈದಾನದಿಂದ ಡಿಸಿ ಕಚೇರಿಯವರೆಗೆ ಮೆರವಣಿಗೆಗೆ ಸಿದ್ಧತೆ ಮಾಡಲಾಗಿದೆ.

click me!