National Herald Case: ಕೇಂದ್ರದಿಂದ ತನಿಖಾ ಸಂಸ್ಥೆಗಳ ದುರುಪಯೋಗ: ಮಾಜಿ ಸಚಿವ ರಮಾನಾಥ ರೈ ಆರೋಪ

By Kannadaprabha News  |  First Published Jul 23, 2022, 8:39 AM IST

ಕೇಂದ್ರದಿಂದ ತನಿಖಾ ಸಂಸ್ಥೆಗಳ ದುರುಪಯೋಗವಾಗುತ್ತಿದೆ ಎಂದು: ಮಾಜಿ ಸಚಿವ ರಮಾನಾಥ ರೈ ಆರೋಪಿಸಿದ್ದಾರೆ. ಸೋನಿಯಾ ವಿರುದ್ಧ ಇಡಿ ತನಿಖೆ ವಿರೋಧಿಸಿ ಮಂಗಳೂರಲ್ಲಿ ಕಾಂಗ್ರೆಸ್‌ ಪ್ರತಿಭಟನೆ.


ಮಂಗಳೂರು (ಜು.23}: ಕೇಂದ್ರ ಸರ್ಕಾರ ಜಾರಿ ನಿರ್ದೇಶನಾಲಯ(ಇಡಿ) ಹಾಗೂ ಸಿಬಿಐ ಮೊದಲಾದ ತನಿಖಾ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ. ಕಾಂಗ್ರೆಸ್‌ ನಾಯಕರ ಮೇಲೆ ಸುಳ್ಳು ಪ್ರಕರಣಗಳನ್ನು ದಾಖಲಿಸಿಕೊಂಡು ಕಿರುಕುಳ ನೀಡುತ್ತಿದೆ ಎಂದು ಮಾಜಿ ಸಚಿವ ರಮಾನಾಥ ರೈ ಆರೋಪಿಸಿದ್ದಾರೆ. ನ್ಯಾಷನಲ್‌ ಹೆರಾಲ್ಡ್‌ ಪ್ರಕರಣದಲ್ಲಿ ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾಗಾಂಧಿ ಅವರ ಇ.ಡಿ ವಿಚಾರಣೆಯನ್ನು ವಿರೋಧಿಸಿ ಶುಕ್ರವಾರ ಮಂಗಳೂರಿನ ಮಿನಿ ವಿಧಾನಸೌಧದ ಎದುರು ನಡೆದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.

ಗುತ್ತಿಗೆದಾರನ ಆತ್ಮಹತ್ಯೆ ಪ್ರಕರಣ(Suicide case)ದಲ್ಲಿ ಮಾಜಿ ಸಚಿವ ಕೆ.ಎಸ್‌. ಈಶ್ವರಪ್ಪ (K.S.Eshwarappa)ಅವರು ಆರೋಪಿಯಾಗಿದ್ದರು. ಆದರೆ ಪೊಲೀಸರು ಪ್ರಕರಣದ ಬಗ್ಗೆ ‘ಬಿ’ ರಿಪೋರ್ಚ್‌(B Report) ಸಲ್ಲಿಸಿದ್ದಾರೆ . ಇದು ತನಿಖಾ ಸಂಸ್ಥೆಗಳನ್ನು ಬಿಜೆಪಿ(BJP) ದುರುಪಯೋಗ ಪಡಿಸುತ್ತಿರುವುದಕ್ಕೆ ನಿದರ್ಶನ ಎಂದು ಅವರು ಹೇಳಿದರು.

Tap to resize

Latest Videos

National Herald Case: 25ರ ಬದಲು 26ಕ್ಕೆ ಸೋನಿಯಾ ಇ.ಡಿ. ವಿಚಾರಣೆ

ದ.ಕ ಜಿಲ್ಲಾ ಕಾಂಗ್ರೆಸ್‌ನ ಉಸ್ತುವಾರಿ, ಮಾಜಿ ಶಾಸಕ ಮಧು ಬಂಗಾರಪ್ಪ(Madu Bangarappa) ಅವರು ಮಾತನಾಡಿ, ಬಿಜೆಪಿ ಸರ್ಕಾರ ದೇಶವನ್ನು ಅಧೋಗತಿಯತ್ತ ಕೊಂಡೊಯ್ಯುತ್ತಿದೆ. ಅವರು ಮಾಡಿದ ತಪ್ಪುಗಳನ್ನು ಬೇರೆಯವರ ಮೇಲೆ ಹಾಕುತ್ತಿದ್ದಾರೆ. ವಿಚಾರಣೆ ನೆಪದಲ್ಲಿ ಕಾಂಗ್ರೆಸ್‌ ನಾಯಕರಿಗೆ ಕಿರುಕುಳ ನೀಡುತ್ತಿರುವುದು ಖಂಡನೀಯ. ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ರಾಜಕೀಯ ಮಾಡುತ್ತಿದೆ ಎಂದು ಹೇಳಿದರು.

ಕೇಂದ್ರ ಸರ್ಕಾರÜದ ವಿರುದ್ಧ ಘೋಷಣೆಗಳನ್ನು ಕೂಗಿದ ಅನಂತರ ಜಿಲ್ಲಾಧಿಕಾರಿ ಕಚೇರಿ ಕಡೆಗೆ ತೆರಳಲು ಮುಂದಾದ ಪ್ರತಿಭಟನಾಕಾರರನ್ನು ಪೊಲೀಸರು ಬ್ಯಾರಿಕೇಡ್‌ ಹಾಕಿ ತಡೆದರು. ಕೆಲವು ಮಂದಿ ಪ್ರತಿಭಟನಾಕಾರರು ಬ್ಯಾರಿಕೇಡ್‌ ಹತ್ತಿದರು. ಈ ಸಂದರ್ಭ ಪೊಲೀಸರೊಂದಿಗೆ ತಳ್ಳಾಟ ನಡೆಯಿತು. ಅನಂತರ ಪೊಲೀಸರು ಪ್ರತಿಭಟನಾಕಾರರನ್ನು ವಶಕ್ಕೆ ಪಡೆದುಕೊಂಡರು.

ಮಾಜಿ ಶಾಸಕರಾದ ಜೆ.ಆರ್‌.ಲೋಬೋ, ಶಕುಂತಳಾ ಶೆಟ್ಟಿ, ಮೊೖದಿನ್‌ ಬಾವಾ, ಐವನ್‌ ಡಿ’ಸೋಜಾ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಿಥುನ್‌ ರೈ ಮೊದಲಾದವರು ಪಾಲ್ಗೊಂಡಿದ್ದರು.

ಮೋದಿ VS ಸೋನಿಯಾ ವಿಚಾರಣೆ: ವಿಚಾರಣೆಗೆ ಮೋದಿ ಸ್ಪಂದಿಸಿದ್ದು ಹೇಗೆ! ಕೈ ಪಾಳಯದ ಪ್ರತಿರೋಧವೇಕೆ?

ಬೇರೆ ದೇಶ​ದ​ಲ್ಲಿ​ದ್ದಿದ್ರೆ ಸೋನಿ​ಯಾಗೆ ನೊಬೆಲ್‌ ಸಿಗ್ತಿ​ತ್ತು: ಖಾದ​ರ್‌:

ದೇಶದಲ್ಲಿ ಗಾಂಧಿ ಕುಟುಂಬ ಇರುವ ತನಕ ನಮ್ಮ ಸಂವಿಧಾನಕ್ಕೆ ರಕ್ಷಣೆ ಇದೆ. ಆದರೆ ಬಿಜೆಪಿ ಸರ್ಕಾರ ಗಾಂಧಿ ಕುಟುಂಬದ ಶಕ್ತಿ ಕುಗ್ಗಿಸಿ, ಸಂವಿಧಾನವನ್ನು ದುರ್ಬಲಗೊಳಿಸಿ, ತಮಗೆ ಬೇಕಾದಂತೆ ಬದಲಾಯಿಸಲು ಯತ್ನಿಸುತ್ತಿದೆ ಎಂದು ಮಾಜಿ ಸಚಿವ ಯು.ಟಿ.ಖಾದರ್‌(U.T.Khadar) ಆರೋಪಿಸಿದ್ದಾರೆ. ನ್ಯಾಷನಲ್‌ ಹೆರಾಲ್ಡ… ಹಗರಣ(National Herald case)ದಲ್ಲಿ ಸೋನಿಯಾ ಗಾಂಧಿ ಅವರನ್ನು ಇ.ಡಿ. ವಿಚಾರಣೆ ನಡೆಸುತ್ತಿರುವುದರ ವಿರುದ್ಧ ಉಡುಪಿ ಜಿಲ್ಲಾ ಕಾಂಗ್ರೆಸ್‌ ಬ್ರಹ್ಮಾವರದ(Brahmavar) ರಾ.ಹೆ.ಯಲ್ಲಿ ನಡೆಸಿದ ರಾಸ್ತಾ ರೋಕೋ ಪ್ರತಿಭಟನೆಯಲ್ಲಿ ಅವರು ಮಾತನಾಡಿದ​ರು.

ಬ್ರಿಟಿಷರ ವಿರುದ್ಧ ಹೋರಾಡಿದ ಪತ್ರಿಕೆ ನ್ಯಾಶನಲ್‌ ಹೆರಾಲ್ಡ…, ಅದನ್ನು ಮುಚ್ಚುವುದಕ್ಕೆ ಬ್ರಿಟಿಷರೇ ಪ್ರಯತ್ನಿಸಿದ್ದರೂ ಆಗಿರಲಿಲ್ಲ, ಅಂತಹ ಬ್ರಿಟಿಷರನ್ನೇ ಜನರು ಬಿಡಲಿಲ್ಲ, ಇನ್ನು ಬಿಜೆಪಿಯವರನ್ನು ಈ ದೇಶದ ಜನರು ಬಿಡುತ್ತಾರಾ ಎಂದು ಪ್ರಶ್ನಿ​ಸಿ​ದ​ರು. ರಾಹುಲ್‌ ಗಾಂಧಿ ಅವರು ಕಾಶ್ಮೀರ- ಕನ್ಯಾಕುಮಾರಿವರೆಗೆ ಜೋಡೋ ಭಾರತ್‌ ಪಾದಯಾತ್ರೆ ಹಮ್ಮಿಕೊಂಡಿದ್ದಾರೆ, ಇದರ ಯಶಸ್ಸಿನ ಭಯದಿಂದ ಬಿದೆಪಿ ಸರ್ಕಾರ ಅವರಿಗೆ ಮಾನಸಿಕ ಕಿರುಕುಳ ಕೊಡುತ್ತಿದೆ ಎಂದರು.

ಹಠಾತ್‌ ರಾಸ್ತಾರೋಕೋ:

ಪ್ರತಿಭಟನೆಗೆ ಮೊದಲು ಬ್ರಹ್ಮಾವರ ಹೋಲಿ ಫ್ಯಾಮಿಲಿ ಚಚ್‌ರ್‍ ಮುಂಭಾಗದಿಂದ ಬಸ್‌ ನಿಲ್ದಾಣ ದವರೆಗೆ ಮೆರವಣಿಗೆ ನಡೆಸಲಾಯಿತು. ಅಲ್ಲಿ ಪೂರ್ವಾನುಮತಿ ಇಲ್ಲದೆ ಹಠಾತ್ತನೇ ಹೆದ್ದಾರಿಯಲ್ಲಿ ತಡೆ ಮಾಡಿ, ಕಾರ್ಯಕರ್ತರು, ನಾಯಕರು ಹೆದ್ದಾರಿಯಲ್ಲಿ ಕುಳಿತು ಪ್ರತಿಭಟಿಸಿದರು, ಅವರನ್ನು ತೆರವುಗೊಳಿಸಲು ಪೊಲೀಸರು ಹರಸಾಹಸಪಟ್ಟರು. ಅಷ್ಟರಲ್ಲಿ ಮಳೆ ಆರಂಭವಾಗಿ ಕಾರ್ಯಕರ್ತರು ಹೆದ್ದಾರಿಯಿಂದ ಚದುರಿದರು.

ಸೋನಿಯಾ ವಿಚಾರಣೆಗೆ ಕಾಂಗ್ರೆಸಿಗರು ಕೆಂಡ: ರಾಜಭವನ ಮುತ್ತಿಗೆ ಯತ್ನ

ಪ್ರತಿಭಟನೆಯಲ್ಲಿ ಉಡುಪಿ ಜಿಲ್ಲಾ ಉಸ್ತುವಾರಿ ಅಭಯಚಂದ್ರ ಜೈನ್‌, ಮಾಜಿ ಸಚಿವ ವಿನಯಕುಮಾರ್‌ ಸೊರಕೆ, ಕೆಪಿ​ಸಿಸಿ ಮಾಜಿ ಕಾರ್ಯದರ್ಶಿ ಎಂ.ಎ.ಗಫäರ್‌, ನಾಯಕರಾದ ಕೃಷ್ಣಮೂರ್ತಿ ಆಚಾರ್ಯ, ಕಿಶನ್‌ ಹೆಗ್ಡೆ ಕೊಳ್ಕೆಬೈಲು, ಇಸ್ಮಾಯಿಲ್‌ ಆತ್ರಾಡಿ, ಹರೀಶ್‌ ಕಿಣಿ, ಡಾ.ಸುನಿತಾ ಶೆಟ್ಟಿ. ಪ್ರಖ್ಯಾತ್‌ ಶೆಟ್ಟಿಮತ್ತಿ​ತ​ರರು ಭಾಗ​ವ​ಹಿ​ಸಿ​ದ್ದ​ರು.

click me!