ಉಪ ಚುನಾವಣೆಗೆ ಮಿಷನ್‌-3 ಯಂತ್ರ ಸಿದ್ಧ

By Kannadaprabha NewsFirst Published Nov 23, 2019, 10:06 AM IST
Highlights

ಹುಣಸೂರು ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಮತದಾನ ಮಾಡುವ ಮಿಷನ್‌-3 ಎಂಬ 540 ಯಂತ್ರಗಳು ಸಿದ್ಧಗೊಂಡಿವೆ, ಮತದಾನ ನಡೆಸುವ ಅಧಿಕಾರಿಗಳಿಗೆ ಮತ್ತು ಮಾಡುವ ಮತದಾರರಿಗೂ ತರಬೇತಿ ಮೂಲಕ ಜಾಗೃತಿಗೊಳಿಸುವ ಸಿದ್ಧತೆಯನ್ನು ಚುನಾವಣಾ ಆಯೋಗ ತಯಾರಿ ನಡೆಸುತ್ತಿದೆ.

ಮೈಸೂರು(ನ.23): ಹುಣಸೂರು ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಮತದಾನ ಮಾಡುವ ಮಿಷನ್‌-3 ಎಂಬ 540 ಯಂತ್ರಗಳು ಸಿದ್ಧಗೊಂಡಿವೆ, ಮತದಾನ ನಡೆಸುವ ಅಧಿಕಾರಿಗಳಿಗೆ ಮತ್ತು ಮಾಡುವ ಮತದಾರರಿಗೂ ತರಬೇತಿ ಮೂಲಕ ಜಾಗೃತಿಗೊಳಿಸುವ ಸಿದ್ಧತೆಯನ್ನು ಚುನಾವಣಾ ಆಯೋಗ ತಯಾರಿ ನಡೆಸುತ್ತಿದೆ.

ಹುಣಸೂರು ಕ್ಷೇತ್ರದಲ್ಲಿ ಆರು ಜಿಪಂ ಕ್ಷೇತ್ರಗಳಿದ್ದು, ನಗರಸಭೆ, 41 ಗ್ರಾಪಂಗಳಿದ್ದು, ತಾಲೂಕಿನಲ್ಲಿ ಒಟ್ಟು 2,26,000 ಮತದಾರರಿದ್ದಾರೆ. 274 ಬೂತ್‌ಗಳಿದ್ದು, 270ಮಿಷನ್‌ಗಳ ಜೊತೆಗೆ ಹೆಚ್ಚುವರಿಯಾಗಿ 60ಮಿಷನ್‌ಗಳ ಅವಶ್ಯಕತೆ ಮಾಡಿಕೊಳ್ಳಬೇಕಿದೆ. ಆದರೆ, ಮತದಾನ ನಡೆಯುವಾಗ ಮಿಷನ್‌ ಕೈಕೊಡಹುದೆಂದು ತಾಲೂಕು ಆಡಳಿತವು 206 ಯಂತ್ರಗಳು ಹೆಚ್ಚುವರಿಯಾಗಿ ಸಿದ್ಧಗೊಂಡಿವೆ. ಎಚ್‌.ಡಿ. ಕೋಟೆ ಮತ್ತು ಪಿರಿಯಾಪಟ್ಟಣ, ಕೆ.ಆರ್‌.ನಗರ ತಾಲೂಕು ಕೇಂದ್ರಗಳಿಂದ 1,350 ಶಿಕ್ಷಕರು ಈಗಾಗಲೇ ನಿಯೋಜನೆಗೊಂಡು ನ.23 ಮತ್ತು 30ರಂದು ತರಬೇತಿ ಹಮ್ಮಿಕೊಳ್ಳಲಾಗಿದೆ.

ಮಿಷನ್‌-3 ಎಂದರೇನು:

ಕೈಯಲ್ಲಿ ಮುದ್ರೆ ಒತ್ತುವ ಮತದಾನ ಬಳಿಕ ಮಿಷನ್‌-1, ಮಿಷನ್‌-2, ಈಗ ಮಿಷನ್‌ 3 ಆಧುನಿಕವಾಗಿ ನಾವು ಹಾಕಿದ ಮತ ಯಾರಿಗೆ ಹಾಕಿದ್ದೇವೆ ಎಂದು ತೋರಿಸುವ ಮಿಷನ್‌-3 ಬಂದಿದೆ.

ಹಳ್ಳಿಯಲ್ಲಿ ಅನಾಗರಿಕರು ಮತ್ತು ಮಿಷನ್‌ನಿಂದ ಆಡಳಿತ ಯಂತ್ರದಲ್ಲಿ ಲೋಪವಿಲ್ಲ ಎಂಬ ಆತಂಕವನ್ನು ದೂರ ಮಾಡಲು ಈ ಮಿಷನ್‌ ಪ್ರಾಮುಖ್ಯತೆ ಹಾಗೂ ಮತದಾನ ಮಾಡುವ ಮತ್ತು ಫಲಿತಾಂಶದ ವಿವರಣೆ ತೋರಿಸಲು ಚುನಾವಣಾ ಅಯೋಗ ತಯಾರಿ ನಡೆಸುತ್ತಿದೆ.

ಉಪಚುನಾವಣೆ: ಬೀಗರ ಔತಣದ ನೆಪದಲ್ಲಿ 6 ಸಾವಿರ ಜನಕ್ಕೆ ಬಾಡೂಟ

ಮತದಾರರಿಗೆ ಮತದಾನ ಮತ್ತು ಫಲಿತಾಂಶದ ಬಗ್ಗೆ ಮಿಷನ್‌-3ರ ಮೂಲಕ ಸಾರ್ವಜನಿಕರ ಸ್ಥಳ ಮತ್ತು ಸಂತೆ ಹಾಗೂ ಜಾತ್ರೆಯ ಮಾಳದಲ್ಲಿ ಹಾಗೂ ಶಾಲಾ ಮಕ್ಕಳು ಮತ್ತು ಪೋಷಕರು ಹಾಗೂ ಖಾಸಗಿ ಉದ್ಯಮಗಳ ಬಳಿ ತರಬೇತಿ ನೀಡುವ ಮೂಲಕ ಡಮ್ಮಿ ಪೇಪರ್‌ ಮೂಲಕ ಮತ ಹಾಕಿ, ಪ್ರಿಂಟ್‌ ತೆಗೆದು ತೋರಿಸುತ್ತಿದ್ದಾರೆ. ಚುನಾವಣಾ ಆಯೋಗ ಹೊಸ ಹೆಜ್ಜೆ ಹಾಕಿದೆ.

ಸಿದ್ದು ಗಡ್ಡ ಕೆರೆದುಕೊಂಡು ಒದ್ದಾಡ್ತಿದ್ದಾರೆ: ವಿ. ಸೋಮಣ್ಣ

ಈ ಉಪ ಚುನಾವಣೆಯಲ್ಲಿ ಶಾಂತಿ ಮತ್ತು ಪಾರದರ್ಶಕತೆಯಿಂದ ಮತದಾರರಿಗೆ ಗೊಂದಲವಾಗದಂತೆ ಮಿಷನ್‌-3ನ ಅರಿವು ಮೂಡಿಸುವ ಕೆಲಸ ಮಾಡಲಾಗುತ್ತಿದೆ. ಪ್ರತಿಯೊಬ್ಬ ಮತದಾರನು ಸದ್ಬಳಕೆಮಾಡಿಕೊಳ್ಳಬೇಕು ಎಂದು ಸಹಾಯಕ ಚುನಾವಣಾಧಿಕಾರಿ ಐ.ಇ. ಬಸವರಾಜ್‌ ಹೇಳಿದ್ದಾರೆ.

ಮತದಾನ ನಡೆಯುವಾಗ ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗದಂತೆ ಮುಂಜಾಗ್ರತೆ ಕ್ರಮ ಕೈಗೊಳ್ಳಾಗುತ್ತದೆ. ಜಿಲ್ಲಾಧಿಕಾರಿ ಮತ್ತು ಎಸ್ಪಿ ಅವರ ಮಾರ್ಗದರ್ಶನಲ್ಲಿ ಶಾಂತಿಯು ಮತದಾನ ನಡೆಸಲಾಗುತ್ತದೆ ಎಂದು ಹುಣಸೂರು ಚುನಾವಣಾಧಿಕಾರಿ ಪೂವಿತಾ ಹೇಳಿದ್ದಾರೆ.

ವರ್ಷದ ಹಿಂದೆ ಅಪ್ರಾಪ್ತೆ ಜೊತೆ ಮದುವೆ, ಈಗ ಅಪ್ರಾಪ್ತೆ ಅಪಹರಣ..!

click me!