ನಾಪತ್ತೆಯಾಗಿದ್ದ ಸೇನಾಧಿಕಾರಿ 1 ತಿಂಗಳ ಬಳಿಕ ಬೆಳಗಾವಿ ರೈಲು ನಿಲ್ದಾಣದಲ್ಲಿ ಪತ್ತೆ!

Published : Jul 10, 2022, 01:55 PM IST
ನಾಪತ್ತೆಯಾಗಿದ್ದ ಸೇನಾಧಿಕಾರಿ 1 ತಿಂಗಳ ಬಳಿಕ ಬೆಳಗಾವಿ ರೈಲು ನಿಲ್ದಾಣದಲ್ಲಿ ಪತ್ತೆ!

ಸಾರಾಂಶ

ಮರಾಠಾ ಲಘು ಪದಾತಿ ದಳದ ಕಮಾಂಡೋ ವಿಂಗ್‌ನ ತರಬೇತುದಾರರೊಬ್ಬರು ನಾಪತ್ತೆಯಾದ ಒಂದು ತಿಂಗಳ ಬಳಿಕ ಅಸ್ವಸ್ಥ ಸ್ಥಿತಿಯಲ್ಲಿ ಶನಿವಾರ ಬೆಳಗಾಗಿ ನಗರದ ರೈಲ್ವೆ ನಿಲ್ದಾಣದಲ್ಲಿ ಪತ್ತೆಯಾಗಿದ್ದಾರೆ.  

ಬೆಳಗಾವಿ (ಜು.10): ಇಲ್ಲಿನ ಮರಾಠಾ ಲಘು ಪದಾಥಿ ದಳ (ಎಂಎಲ್‌ಐಆರ್‌ಸಿ) ದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಕಮಾಂಡೋ ವಿಂಗ್‌ನ ತರಬೇತುದಾರ ನಾಪತ್ತೆಯಾಗಿ ಒಂದು ತಿಂಗಳ ಬಳಿಕ ಅಸ್ವಸ್ಥ ಸ್ಥಿತಿಯಲ್ಲಿ ಶನಿವಾರ ನಗರದ ರೈಲ್ವೆ ನಿಲ್ದಾಣದಲ್ಲಿ ಪತ್ತೆಯಾಗಿದ್ದಾರೆ.

ಪಂಜಾಬ್‌ ರಾಜ್ಯದ ಗುರುದಾಸಪುರ ಜಿಲ್ಲೆಯ ದಿನಾನಗರ ತಾಲೂಕಿನ ಕುದೈನವಾಲಿಯ ಸುರ್ಜಿತ್‌ಸಿಂಗ್‌ (45) ನಾಪತ್ತೆಯಾಗಿ, ಒಂದು ತಿಂಗಳ ನಂತರ ಪತ್ತೆಯಾಗಿದ್ದಾರೆ. ಜೂ.12ರಂದು ಸಂಜೆ 6 ಗಂಟೆ ಸುಮಾರಿಗೆ ಕ್ಯಾಂಪ್‌ನಲ್ಲಿದ್ದ ಅಧಿಕಾರಿಗಳಿಗೆ ಅಥವಾ ಅಲ್ಲಿನ ಸಿಬ್ಬಂದಿಗಾಗಲಿ ಹೇಳದೆ ನಾಪತ್ತೆಯಾಗಿದ್ದ ಸುಬೇದಾರ ಮೇಜರ್‌ ಸುರ್ಜಿತ್‌ಸಿಂಗ್‌ ಕಳೆದ 10 ವರ್ಷಗಳಿಂದ ಇಲ್ಲಿನ ಮರಾಠಾ ಲಘು ಪದಾಥಿದಳದಲ್ಲಿ ಕಮಾಂಡೋ ವಿಂಗ್‌ ತರಬೇತುದಾರರಾಗಿ ಕಾರ್ಯನಿರ್ವಹಿಸುತ್ತಿದ್ದರು. ಕಮಾಂಡೋ ವಿಂಗ್‌ ಕ್ಯಾಂಪ್‌ನಲ್ಲಿ ವಾಸವಿದ್ದ ಸುರ್ಜಿತ್‌ ಸಿಂಗ್‌ (Subhedar Major Surjit Singh) ಎಟಿಎಂನಿಂದ ಹಣ ಪಡೆಯಲು ಹೋದವರು ಮರಳಿ ಬಂದಿರಲಿಲ್ಲ.

India@75: ಸ್ವಾತಂತ್ರ್ಯ, ಸ್ವಾಭಿಮಾನದ ಸಾಕ್ಷಿ ಕಿತ್ತೂರು ಕೋಟೆ

ಮೊಬೈಲ್  ಟ್ರೇಸ್‌ ಮಾಡಿದರೂ ಸಿಕ್ಕಿರಲಿಲ್ಲ. ಸೇನಾಧಿಕಾರಿಯನ್ನು ಯಾರಾದರೂ ಅಪಹರಣ ಮಾಡಿದ್ದಾರೆಯೇ ಎಂಬ ಅನುಮಾನ ಕೂಡ ಮೂಡಿತ್ತು. ಅಲ್ಲದೆ, ಸೇನಾ ವಲಯದಲ್ಲಿ ಆತಂಕಕ್ಕೆ ಕಾರಣವಾಗಿತ್ತು.

ಪೊಲೀಸರು ಮತ್ತು ಸೇನೆಯ ಅಧಿಕಾರಿಗಳು ಶ್ರಮವಹಿಸಿ ಸೇನಾಧಿಕಾರಿಯನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ಅಸ್ವಸ್ಥ ಸ್ಥಿತಿಯಲ್ಲಿ ಸೇನಾಧಿಕಾರಿ ಕಂಡುಬಂದಿದ್ದಾರೆ. ಖಿನ್ನತೆಗೆ ಒಳಗಾಗಿರುವ ಸುರ್ಜೀತಸಿಂಗ್‌ ಅವರಿಗೆ ಹಿಂದಿನದ್ದು ಏನೂ ನೆನಪಿಲ್ಲ. ಹೀಗಾಗಿ ಅಲ್ಲಿ, ಇಲ್ಲಿ ಅಲೆದಾಡಿದ್ದಾರೆ. ರೈಲ್ವೆ ನಿಲ್ದಾಣದಲ್ಲಿದ್ದಾಗ ಪೊಲೀಸರ ಕಣ್ಣಿಗೆ ಬಿದ್ದಿದ್ದು, ವಿಚಾರಣೆ ನಡೆಸಿದಾಗ ಅವರೆಂದು ಗೊತ್ತಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಶಾಲಾ ಶುಲ್ಕದ ‌ನಡುವೆ ಪೋಷಕರಿಗೆ ಮತ್ತೊಂದು ದರ ಏರಿಕೆ ಬಿಸಿ: ಖಾಸಗಿ ಶಾಲೆಗಳ ವಾಹನ ಶುಲ್ಕ ಹೆಚ್ಚಳ?

ಅಮರನಾಥ ಯಾತ್ರೆಯಲ್ಲಿ ಸಿಲುಕಿದ ಮಹಿಳೆ ಸುರಕ್ಷಿತ
ಬೆಳಗಾವಿ: ಜಮ್ಮು-ಕಾಶ್ಮೀರದ ಪವಿತ್ರ ಯಾತ್ರಾ ಸ್ಥಳ ಅಮರನಾಥ ದರ್ಶನಕ್ಕೆ ತೆರಳಿದ್ದ ಬೆಳಗಾವಿಯ ಮಹಿಳೆಯೊಬ್ಬರು ಸಿಲುಕಿಕೊಂಡಿದ್ದು, ಅವರ ಮೊಬೈಲ್‌ ಸ್ವಿಚ್‌್ಡ ಆಫ್‌ ಆಗಿದೆ. ಆದರೆ ಮಹಿಳೆ ಸುರಕ್ಷಿತವಾಗಿದ್ದಾಳೆ ಎಂದು ಆಕೆಯ ಕುಟುಂಬದವರು ಹೇಳಿದ್ದಾರೆ.

ಬೆಳಗಾವಿ ತಾಲೂಕಿನ ಬಸವನ ಕುಡಚಿ ಬಳಿಯ ದೇವರಾಜ ಅರಸ ಕಾಲೋನಿಯ ನಿವಾಸಿ ಸೀಮಾ ಬೆಳಗೂರು ಎಂಬುವರು ಬೆಂಗಳೂರಿನ ಹೈಕೋರ್ಚ್‌ ತಂಡದೊಂದಿಗೆ ಜು.5 ರಂದು ಅಮರನಾಥ ಯಾತ್ರೆಗೆ ತೆರಳಿದ್ದಾರೆ. ಮೇಘ ಸ್ಫೋಟ ಹಿನ್ನೆಲೆಯಲ್ಲಿ ಅವರ ಪತಿ ಸುಧಾಕರ ಸಿ.ಕೆ. ಅವರನ್ನು ಜಿಲ್ಲಾಡಳಿತ ಸಂಪರ್ಕಿಸಿದ್ದು, ಅವರು ಸುರಕ್ಷಿತವಾಗಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ ಎಂದು ಜಿಲ್ಲಾಧಿಕಾರಿ ನಿತೇಶ ಪಾಟೀಲ ಅವರು ಕನ್ನಡಪ್ರಭಕ್ಕೆ ತಿಳಿಸಿದ್ದಾರೆ.

ಸೀಮಾ ಅವರು ಬೆಂಗಳೂರಿನಲ್ಲಿ ಹೈಕೋರ್ಚ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಜು.5 ರಂದು ಹೈಕೋರ್ಚ್‌ ತಂಡದೊಂದಿಗೆ ಸೀಮಾ ಅವರು ಅಮರನಾಥ ಯಾತ್ರೆಗೆ ತೆರಳಿದ್ದರು. ಅವರ ಪತಿಯನ್ನು ಸಂಪರ್ಕಿಸಲಾಗಿದ್ದು, ಸೀಮಾ ಅವರನ್ನು ಸುರಕ್ಷಿತವಾಗಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ ಎಂದು ಅವರು ಹೇಳಿದರು.

PREV
Read more Articles on
click me!

Recommended Stories

4,808 ಕೋಟಿ ವೆಚ್ಚದಲ್ಲಿ ರಸ್ತೆಗಳ ಅಭಿವೃದ್ಧಿ
ಮಧುಗಿರಿ: ಕದ್ದ ಎಟಿಎಂ ಭಾರ ಇದೆ ಎಂದು ರಸ್ತೆಯಲ್ಲೇ ಬಿಟ್ಟು ಹೋದರು