ಮಡಿಕೇರಿ: ಹಸುವಿಗೆ ಗುಂಡಿಟ್ಟು ಕೊಂದ ದುರುಳರು, ಕಗ್ಗೋಡ್ಲು ಉದ್ವಿಗ್ನ

By Kannadaprabha NewsFirst Published Jun 23, 2021, 10:54 AM IST
Highlights

* ಮಡಿಕೇರಿ ತಾಲೂಕಿನ ಕಗ್ಗೋಡ್ಲು ಗ್ರಾಮದಲ್ಲಿ ನಡೆದ ಘಟನೆ
*  ಘಟನಾ ಸ್ಥಳಕ್ಕೆ ಮಡಿಕೇರಿ ಗ್ರಾಮಾಂತರ ಪೋಲೀಸರ ಆಗಮನ
* ಹಿಂದು ಜಾಗರಣ ವೇದಿಕೆ ತುರ್ತು ಸಭೆ 

ಮಡಿಕೇರಿ(ಜೂ.23): ತಾಲೂಕಿನ ಕಗ್ಗೋಡ್ಲು ಗ್ರಾಮದಲ್ಲಿ ಹಸುವಿಗೆ ಗುಂಡಿಕ್ಕಿ ಕೊಂದಿರುವ ಘಟನೆ ನಡೆದಿದೆ. ಮಂಗಳವಾರ ಸಂಜೆ 7 ಗಂಟೆಗೆ ಪ್ರಕರಣ ನಡೆದಿದ್ದು, ವಿಷಯ ತಿಳಿದು ಸ್ಥಳಕ್ಕೆ 50ಕ್ಕೂ ಹೆಚ್ಚು ಹಿಂದು ಜಾಗರಣ ವೇದಿಕೆಯ ಕಾರ್ಯಕರ್ತರು ಸೇರಿದ್ದರು. ನಾಲ್ಕು ದಿಕ್ಕುಗಳಿಂದ ಕಾರ್ಯಕರ್ತರು ಸುತ್ತುವರಿದರು. ಈ ವೇಳೆ ಮುಂಚೂಣಿ

ತಂಡದ ಕಾರ್ಯಕರ್ತನ ಎದೆಗೆ ಕೋವಿಯಿಟ್ಟು ಬೆದರಿಸಿ ದುಷ್ಕರ್ಮಿಗಳು ಕತ್ತಲಲ್ಲಿ ಪರಾರಿಯಾಗಿದ್ದಾರೆ ಎನ್ನಲಾಗಿದೆ. ಸ್ಥಳಕ್ಕೆ ಮಡಿಕೇರಿ ಗ್ರಾಮಾಂತರ ಪೋಲೀಸರ ಆಗಮಿಸಿದ್ದು, ಸ್ಥಳದಲ್ಲಿದ್ದ ಗೋಮಾಂಸ ಮತ್ತು ಚಾಕು ವಶಪಡಿಸಿಕೊಂಡಿದ್ದಾರೆ. ಪ್ರಕರಣ ಹಿನ್ನೆಲೆ ಕಗ್ಗೋಡ್ಲು ಗ್ರಾಮದಲ್ಲಿ ಉದ್ವಿಘ್ನ ಪರಿಸ್ಥಿತಿ ನಿರ್ಮಾಣವಾಗಿತ್ತು.  ಆರೋಪಿಗಳನ್ನು ಶೀಘ್ರವೇ ಬಂಧಿಸುವುದಾಗಿ ಪೋಲೀಸರು ಭರವಸೆ ನೀಡಿದ್ದಾರೆ.

ಮಧ್ಯ ರಾತ್ರಿ ರಶ್ಮಿಕಾ ಮನೆ ಹುಡುಕಿಕೊಂಡು ಬಂದವ ಕಂಬಿ ಹಿಂದೆ!

ಇಂದು ಹಿಂಜಾವೇ ಸಭೆ

ಬುಧವಾರ ಹಿಂದು ಜಾಗರಣ ವೇದಿಕೆ ತುರ್ತು ಸಭೆ ನಡೆಯಲಿದೆ. ಕೊಡಗಿನಲ್ಲಿ ದಿನನಿತ್ಯವು ನಡೆಯುತ್ತಿದೆ. ಗೋಹತ್ಯೆ ತಡೆಗಟ್ಟುವಲ್ಲಿ ಪೊಲೀಸ್‌ ಇಲಾಖೆ ಸಂಪೂರ್ಣ ವಿಫಲ ಎಂದು ಹಿಂದು ಜಾಗರಣ ವೇದಿಕೆ ಪ್ರಮುಖರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಳೆದ ವಾರ ಕಗ್ಗೋಡ್ಲುವಿನಲ್ಲಿ ದುಷ್ಕರ್ಮಿಗಳು ಗೋವಿಗೆ ಗುಂಡಿಕ್ಕಿ ಮಾಂಸ ಮಾಡಿ ಕೊಂಡೊಯ್ದಿದ್ದರು. ಮತ್ತೆ ಅದೇ ಘಟನೆ ಮರುಕಳಿಸಿದ್ದು, ಆಕ್ರೋಶ ವ್ಯಕ್ತವಾಗಿದೆ.
 

click me!