ಮಂಗಳೂರು: ಮಸೀದಿ ಮೇಲೆ ಬಾಟಲಿ ಎಸೆದ ದುಷ್ಕರ್ಮಿಗಳು

Kannadaprabha News   | Asianet News
Published : Aug 24, 2020, 09:58 AM IST
ಮಂಗಳೂರು: ಮಸೀದಿ ಮೇಲೆ ಬಾಟಲಿ ಎಸೆದ ದುಷ್ಕರ್ಮಿಗಳು

ಸಾರಾಂಶ

ಮಸೀದಿಗೆ ಸೋಡಾ ಬಾಟಲಿ ಎಸೆದ ದುಷ್ಕರ್ಮಿಗಳು| ಮಂಗಳೂರು ನಗರದಲ್ಲಿ ನಡೆದ ಘಟನೆ| ಪಂಪ್‌ವೆಲ್‌ನ ‘ಮಸ್ಜಿದುತ್ತಖ್ವಾದ’ ಎಡಭಾಗದಿಂದ ಸೋಡಾ ಬಾಟಲಿ ಎಸೆದು ಪರಾರಿಯಾದ ದುಷ್ಕರ್ಮಿಗಳು| ಈ ಸಂಬಂಧ ಕಂಕನಾಡಿ ನಗರ ಠಾಣೆಯಲ್ಲಿ ಪ್ರಕರಣ ದಾಖಲು| 

ಮಂಗಳೂರು(ಆ.24): ರಾಷ್ಟ್ರೀಯ ಹೆದ್ದಾರಿ 66ರ ಸಮೀಪದ ಪಂಪ್ವೆಲ್‌ನ ಮಸೀದಿಗೆ ದುಷ್ಕರ್ಮಿಗಳು ಸೋಡಾ ಬಾಟಲಿ ಎಸೆದ ಘಟನೆ ಶನಿವಾರ ಬೆಳಕಿಗೆ ಬಂದಿದೆ. ಪಂಪ್‌ವೆಲ್‌ನ ‘ಮಸ್ಜಿದುತ್ತಖ್ವಾದ’ ಎಡಭಾಗದಿಂದ ದುಷ್ಕರ್ಮಿಗಳು ಮುಂಜಾನೆ ಸುಮಾರು 3:40ರ ವೇಳೆಗೆ ಸೋಡಾ ಬಾಟಲಿ ಎಸೆದು ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ.

ಘಟನೆಯಿಂದ ಮಸೀದಿಯ ಕಿಟಕಿಯ ಗಾಜಿಗೆ ಹಾನಿಯಾಗಿದೆ. ಮಸೀದಿಯ ಕಾವಲುಗಾರರ ಕಣ್ತಪ್ಪಿಸಿ ಈ ಕೃತ್ಯ ಎಸಗಲಾಗಿದೆ. ಕಾವಲುಗಾರರು ಬೆಳಗ್ಗೆ ಮಸೀದಿಯ ಮಹಡಿ ಹತ್ತಿದಾಗಲೇ ಕೃತ್ಯ ಬೆಳಕಿಗೆ ಬಂದಿದೆ. ತಕ್ಷಣ ಮಸೀದಿಯ ಪದಾಧಿಕಾರಿಗಳು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಸುಳ್ಯ: ಕೋಮಾ​ದ​ಲ್ಲಿದ್ದ ವೃದ್ಧೆ ದಿಢೀರ್‌ ಚೇತ​ರಿ​ಕೆ, ಅಂತ್ಯ​ಕ್ರಿ​ಯೆಗೆ ಸಿದ್ಧತೆ ನಡೆ​ಸಿದ್ದ ಕುಟುಂಬ​ಸ್ಥ​ರು..!

ಮಂಗಳೂರು ದಕ್ಷಿಣ ಉಪವಿಭಾಗದ ಎಸಿಪಿ ಕೋದಂಡರಾಮ ನೇತೃತ್ವದ ಪೊಲೀಸರು ಮಸೀದಿಗೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಈ ಕುರಿತು ಕಂಕನಾಡಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಗಳ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.

PREV
click me!

Recommended Stories

'ಮಾದೇಶ್ವರ ದಯಬಾರದೆ..' ಯೂಟ್ಯೂಬ್‌ನಲ್ಲಿ ಟ್ರೆಂಡ್‌ ಆದ ತೇಜಸ್ವಿ ಸೂರ್ಯ ಪತ್ನಿ ಶಿವಶ್ರೀ ಸ್ಕಂದಪ್ರಸಾದ್‌ ಹಾಡು!
ಸಣ್ಣ ಜೆರಾಕ್ಸ್ ಅಂಗಡಿ ಮಾಲೀಕನಿಂದ ₹1.6 ಲಕ್ಷ ವಸೂಲಿ; ಕಗ್ಗಲೀಪುರ PSI ಹರೀಶ್ ಸಸ್ಪೆಂಡ್