ಕೆಆರ್‌ಎಸ್‌ ಬಾಗಿನ ಕಾರ್ಯಕ್ರಮ ಖಾಸಗಿಗೆ ಗುತ್ತಿಗೆ : 13 ಲಕ್ಷ ವೆಚ್ಚ

By Kannadaprabha NewsFirst Published Aug 24, 2020, 9:42 AM IST
Highlights

ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಕೆಆರ್‌ಎಸ್‌ಗೆ ಬಾಗೀನ ಅರ್ಪಿಸಿದ್ದು, ಆದ ಖರ್ಚು ವೆಚ್ಚ ಲಕ್ಷ ಲಕ್ಷದಷ್ಟಾಗಿದೆ ಎಂದು ಶಾಸಕರೋರ್ವರು ಆರೋಪ ಮಾಡಿದ್ದಾರೆ.

ಮಂಡ್ಯ (ಆ.24): ಕೆಆರ್‌ಎಸ್‌ ಬಾಗಿನ ಕಾರ್ಯಕ್ರಮ ಆಯೋಜನೆಯನ್ನು ಖಾಸಗಿಯವರಿಗೆ ಗುತ್ತಿಗೆ ನೀಡಿದ್ದು ನಾಚಿಕೆಗೇಡಿನ ವಿಚಾರ, 2 ಲಕ್ಷ ರು. ವೆಚ್ಚದಲ್ಲಿ ಮುಗಿಯಬೇಕಾದ ಕಾರ್ಯಕ್ರಮಕ್ಕೆ 13 ಲಕ್ಷ ರು. ಖರ್ಚು ಮಾಡಲಾಗಿದೆ ಎಂದು ಶಾಸಕ ರವೀಂದ್ರ ಶ್ರೀಕಂಠಯ್ಯ ಟೀಕಿಸಿದ್ದಾರೆ. 

"

ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಾಳೆಕಂದು, ಮಾವಿನಸೊಪ್ಪು, ಶಾಮಿಯಾನ, ವಿಡಿಯೋ, ಫೋಟೋಗೆ ಅಷ್ಟೊಂದು ಹಣ ಖರ್ಚಾಗುವುದೇ? ದುಂದುವೆಚ್ಚಕ್ಕೆ ಜಿಲ್ಲಾಡಳಿತವೇ ಹೊಣೆ ಎಂದು ಆರೋಪಿಸಿದರು.

ಮಂಡ್ಯ: ಗೌರಿ ಹಬ್ಬದಂದೇ ಕಾವೇರಿ ಮಾತೆಗೆ ಸಿಎಂ ಬಾಗಿನ ಅರ್ಪಣೆ...

ಬಾಗಿನ ಕಾರ್ಯಕ್ರಮ ಆಯೋಜನೆಗೆ ಸ್ಥಳೀಯ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ. ಕ್ಷೇತ್ರದ ಶಾಸಕರ ಮಾತಿಗೆ ಬೆಲೆ ಇಲ್ಲವಾಗಿದೆ. ಜಿಲ್ಲಾಧಿಕಾರಿಗಳು, ಪೊಲೀಸ್‌ ಅಧೀಕ್ಷಕರು ಮತ್ತು ಅಧಿಕಾರಿಗಳು ಕೂಡ ಒಂದು ಪಕ್ಷದ ಏಜೆಂಟರಂತೆ ವರ್ತಿಸುತ್ತಿದ್ದಾರೆ. ಉಸ್ತುವಾರಿ ಸಚಿವರಿಗಂತೂ ಯಾರ ಬಗ್ಗೆಯೂ ಕಾಳಜಿ ಇಲ್ಲ ಎಂದು ದೂರಿದರು.

click me!