ಹಾವೇರಿ ಎತ್ತ ಸಾಗುತ್ತಿದೆ. ಮೊನ್ನೆ ಪುಲ್ವಾಮಾ ದಾಳಿಯನ್ನು ಸಂಭ್ರಮಿಸಿದ್ರು, ಇದಕ್ಕೂ ಮೊದಲು ಪಾಕ್ ಧ್ವಜ ಹಾರಿಸಿದ್ರು. ಇಷ್ಟೇ ಅಲ್ಲ ಗಣರಾಜ್ಯೋತ್ಸವ ಮೆರವಣಿಗೆಗೆ ಅಡ್ಡಿ ಪಡಿಸಿದ್ರು. ಈಗ ಯೊಧನ ಮೇಲೆ ಹಲ್ಲೆ ಮಾಡಿದ್ದಾರೆ.
ಹಾವೇರಿ, [ಫೆ. 23]: ಹಾವೇರಿಯಲ್ಲಿ ದಿನಕ್ಕೊಂದು ದೇಶದ್ರೋಹಿ ಚಟುವಟಿಕೆಗಳು ನಡೆಯುತ್ತಲೇ ಇವೆ. ಇದಕ್ಕೆ ಕಡಿವಾಣ ಹಾಕುವರು ಯಾರು ಇಲ್ಲವೇ..? ಜಿಲ್ಲಾ ಪೊಲಿಸ್ ಇಲಾಖೆ ಏನ್ ಮಾಡ್ತೀದೆ..?
ಮೊನ್ನೇ ಅಷ್ಟೇ ಪುಲ್ವಾಮಾ ದಾಳಿಯಲ್ಲಿ ಯೋಧರನ್ನು ಕಳೆದುಕೊಂಡು ಇಡೀ ದೇಶವೇ ಕಂಬನಿ ಮಿಡಿದಿದೆ.ಆದ್ರೆ ಹಾವೇರಿಯಲ್ಲಿ ಕೆಲ ಕಿಡಿಗೇಡಿಗಳು ಸಂಭ್ರಮಿಸಿ ಖುಷಿಪಟ್ಟರು. ಅಷ್ಟೇ ಅಲ್ಲದೇ ಈ ಹಿಂದೆ ಪಾಕ್ ಪರ ಘೋಷಣೆ ಕೂಗಿದ್ರು ಹಾಗೂ ಮೊನ್ನೇ ಗಣರಾಜ್ಯೋತ್ಸ ಮೆರವಣಿಗೆ ತಡೆದು ರಂಪಾಟ ಮಾಡಿದ್ದರು. ಈಗ ಯೋಧನ ಮೇಲೆ ಹಲ್ಲೆ.
ಹೌದು...ಇಂದು[ಶನಿವಾರ]ಹಾವೇರಿ ಬಸ್ ನಿಲ್ದಾಣದಲ್ಲಿ ಕ್ಷುಲ್ಲಕ ಕಾರಣಕ್ಕೆ ಯೋಧ ಹಾಗೂ ಅತನ ಪತ್ನಿ ಮೇಲೆ ದುಷ್ಕರ್ಮಿಗಳು ಹಲ್ಲೆ ಮಾಡಿದ್ದಾರೆ.
ಯೋಧರಿಗೆ ನಮನ ಸಲ್ಲಿಸುವಾಗಲೆ ಹಾವೇರಿಯಲ್ಲಿ ಪಾಕ್ ಪರ ಘೋಷಣೆ!
ಬಸ್ ನಲ್ಲಿ ಕುಳಿತುಕೊಳ್ಳಲು ಸೀಟ್ ನೀಡುವ ವಿಚಾರದಲ್ಲಿ ಗಲಾಟೆ ನಡೆದಿದೆ. ಈ ವೇಳೆ ಕಿಡಿಗೇಡಿಗಳ ಗುಂಪೊಂದು ಯೋಧ ಪರಮೇಶ್ ಫಕ್ಕೀರಪ್ಪ ಹಾಗೂ ಅತನ ಪತ್ನಿಯ ಮೇಲೆ ಹಲ್ಲೆ ನಡೆಸಿದ್ದಾರೆ.
ಇನ್ನು ಯೋಧನ ಮೇಲೆ ನಡೆದ ಹಲ್ಲೆಯನ್ನ ಖಂಡಿಸಿ ನೂರಾರು ಯುವಕರು ಬಸ್ ತಡೆದು ಪ್ರತಿಭಟನೆ ನಡೆಸುತ್ತಿದ್ದು, ಕೂಡಲೇ ದುಷ್ಕರ್ಮಿಗಳನ್ನ ಬಂಧಿಸುವಂತೆ ಪ್ರತಿಭಟನಕಾರರು ಆಗ್ರಹಿದ್ದಾರೆ.
ಪ್ರತಿಭಟನೆ ತೀವ್ರ ಸ್ವರೂಪ ಪಡೆದಿದ್ದು, ಪ್ರತಿಭಟನಾಕಾರರು ಶಹರಾ ಪೊಲೀಸ್ ಠಾಣೆಯ ಮುಂದೆ ಟೈರ್ ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹಾವೇರಿ ಜಿಲ್ಲೆಯಲ್ಲಿ ಇಂತಹ ಘಟನೆ ನಡೆದಿರುವುದು ಇದೇನು ಮೊದಲಲ್ಲ. ಈ ಹಿಂದೆಯೂ ಸಹ ದೇಶದ್ರೋಹ ಘಟನೆಗಳಿಗೆ ಹಾವೇರಿ ಸಾಕ್ಷಿಯಾಗಿದೆ. ಇದಕ್ಕೆ ಬ್ರೇಕ್ ಬೀಳೋದು ಯಾವಾಗ..?