ಪಕ್ಷ ದ್ರೋಹ ಮಾಡಿದವರಿಗೆ ಮತ ಬೇಡ: ಪ್ರಜ್ವಲ್ ರೇವಣ್ಣ

By Kannadaprabha NewsFirst Published Nov 23, 2019, 8:44 AM IST
Highlights

ಈ ಬಾರಿ ನಡೆಯುವ ಉಪ ಚುನಾವಣೆ ಸ್ವಾಭಿಮಾನದ ಚುನಾವಣೆಯಾಗಿದ್ದು, ಪಕ್ಷಕ್ಕೆ ದ್ರೋಹ ಬಗೆದವರಿಗೆ ಮತ ಹಾಕ ಬೇಡಿ ಪ್ರಾಮಾಣಿಕ ಕಾರ್ಯಕರ್ತ ನಮ್ಮ ಪಕ್ಷದ ಅಭ್ಯಿರ್ಥಿ ಸೋಮಶೇಖರ್‌ ಅವರಿಗೆ ಮತ ಹಾಕಿ ಎಂದು ಸಂಸದ ಪ್ರಜ್ವಲ್‌ ರೇವಣ್ಣ ಹೇಳಿದ್ದಾರೆ.

ಮೈಸೂರು(ನ.23): ಈ ಬಾರಿ ನಡೆಯುವ ಉಪ ಚುನಾವಣೆ ಸ್ವಾಭಿಮಾನದ ಚುನಾವಣೆಯಾಗಿದ್ದು, ಪಕ್ಷಕ್ಕೆ ದ್ರೋಹ ಬಗೆದವರಿಗೆ ಮತ ಹಾಕ ಬೇಡಿ ಪ್ರಾಮಾಣಿಕ ಕಾರ್ಯಕರ್ತ ನಮ್ಮ ಪಕ್ಷದ ಅಭ್ಯಿರ್ಥಿ ಸೋಮಶೇಖರ್‌ ಅವರಿಗೆ ಮತ ಹಾಕಿ ಎಂದು ಸಂಸದ ಪ್ರಜ್ವಲ್‌ ರೇವಣ್ಣ ಹೇಳಿದ್ದಾರೆ.

ಹುಣಸೂರು ಪಟ್ಟಣದ ಜೆಡಿಎಸ್‌ ಕಚೇರಿ ಎದುರು ಚುನಾವಣಾ ಪ್ರಚಾರ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿ, ಈ ಉಪ ಚುನಾವಣೆ ಮುಗಿಯುವವರೆಗೂ ನಾನು ಹಾಗೂ ಸಾ.ರಾ. ಮಹೇಶ್‌, ಪಿರಿಯಾಪಟ್ಟಣ ಮಹದೇವು, ಅಶ್ವಿನ್‌ಕುಮಾರ್‌ ಸೇರಿದಂತೆ ಆನೇಕರು ಹುಣಸೂರಿನಲ್ಲಿ ವಾಸ್ತವ್ಯ ವೂಡಿ, ಜೆಡಿಎಸ್‌ ಅಭ್ಯರ್ಥಿ ಗೆಲುವಿಗೆ ಶ್ರಮಿಸುವುದಾಗಿ ನಾನು ಕಳೆದ ವಿಧಾನಸಭೆ ಚುನಾವಣೆಯಲ್ಲಿ ಈ ಕ್ಷೇತ್ರದ ಸಾವಿರಾರು ಮನೆಗಳ ಕಾರ್ಯಕರ್ತರನ್ನು ಭೇಟಿ ಮಾಡಿ ಅವರ ವಿಶ್ವಾಸಕ್ಕೆ ಪಾತ್ರನಾಗಿದ್ದೇನೆ, ಅವರ ಋುಣ ನನ್ನ ಮೇಲೆ ಇದೆ ನಮ್ಮ ತಂದೆ, ತಾತ ಹಾಗೂ ನಮ್ಮ ಕುಟುಂಬ ಕಾರ್ಯಕರ್ತರ ಸೇವೆಗಾಗಿ ಸದಾ ಬದ್ದವಾಗಿದ್ದೇವೆ ಎಂದಿದ್ದಾರೆ.

ಪುತ್ರನಿಗೆ ‘ಟಿಕೆಟ್‌’ ಕೊಡಿಸಲಾಗದೆ ‘ಕೈ’ಚೆಲ್ಲಿದ ಜಿಟಿಡಿಗೆ ‘ತ್ರಿಪಕ್ಷೀಯ’ ಬೇಡಿಕೆ!

ಈ ಪ್ರಜ್ವಲ್‌ ರೇವಣ್ಣನನ್ನು ಗುರುತಿಸಿ ರಾಜಕರಣ ಮಾಡಲು ಅವಕಾಶ ನೀಡಿದ್ದು, ಹುಣಸೂರು ಜನತೆ, ಈ ಹುಣಸೂರನ್ನು ನಾನು ಎಂದಿಗೂ ಮರೆಯಲಾರೆ ಎಂದರು. ಈ ಉಪಚುನಾವಣೆ ಪ್ರತಿಷ್ಠೆಯಾಗಿದ್ದು, ಕಾರ್ಯಕರ್ತರು ಕಿಚ್ಚಿನ ಹೋರಾಟ ಮಾಡಿ ಎಂದಿದ್ದಾರೆ.

ಸಭೆಯಲ್ಲಿ ಶಾಸಕ ಅಶ್ವಿನ್‌ಕುಮಾರ್‌, ಅಭ್ಯರ್ಥಿ ಸೋಮಶೇಖರ್‌, ಜಿಪಂ ಸದಸ್ಯ ಎಂ.ಬಿ. ಸುರೇಂದ್ರ, ತಾಪಂ ಮಾಜಿ ಸದಸ್ಯ ಲಾರಿಸೋಮೇಗೌಡ, ಮುಖಂಡರಾದ ವೆಂಕಟೇಶ್‌, ಕುಮಾರ್‌, ಮೋನಿಕ ಮಂಜುನಾಥ್‌, ಯೋಗೇಶ್‌, ಸತೀಶ್‌ಪಾಪಣ್ಣ, ಕೃಷ್ಣೇಗೌಡ, ಜಯಣ್ಣ, ರವಿ, ಕಾರ್ಯಕರ್ತರು ಭಾಗವಹಿಸಿದ್ದರು.

ತನ್ವೀರ್‌ ಹತ್ಯೆ ಯತ್ನಕ್ಕೂ ಮುನ್ನ ನಾಯಿ ರುಂಡ ಕತ್ತರಿಸಿ ರಿಹರ್ಸಲ್‌!

click me!