ಕೊರೋನಾ ನಿಯಂತ್ರಣ ಪ್ರತಿಯೊಬ್ಬರ ಕರ್ತವ್ಯ: ಸಚಿವ ಸೋಮಣ್ಣ

By Kannadaprabha News  |  First Published Apr 21, 2021, 7:13 AM IST

ಸಾರ್ವಜನಿಕರು ಹೆದರುವ ಅಗತ್ಯವಿಲ್ಲ. ಇವೆಲ್ಲವೂ ಸಾಮಾಜಿಕ ವ್ಯವಸ್ಥೆಗಳಲ್ಲಿ ಆಗುವಂತಹ ತೊಂದರೆಯಾಗಿದೆ|   ನಿಭಾಯಿಸಲು ನುರಿತ ತಜ್ಞರ ವೈದ್ಯರ ತಂಡವಿದೆ| ಧೈರ್ಯದಿಂದ ಮಹಾಮಾರಿಯನ್ನು ಎದುರಿಸಬೇಕು| ಕೊರೋನಾ ನಿಯಂತ್ರಣಕ್ಕೆ ಪ್ರತಿಯೊಬ್ಬರು ನೆರವಾಗಬೇಕು|ಸಾಧ್ಯವಾದರೆ ಸಾರ್ವಜನಿಕರು ಅನಗತ್ಯವಾಗಿ ರಸ್ತೆಗೆ ಬರುವುದನ್ನು ನಿಲ್ಲಿಸಬೇಕು: ಸೋಮಣ್ಣ| 


ಬೆಂಗಳೂರು(ಏ. 21): ಕೊರೋನಾ ನಿಯಂತ್ರಣ ಪ್ರತಿಯೊಬ್ಬರ ಕರ್ತವ್ಯವಾಗಿದ್ದು, ಸಾರ್ವಜನಿಕರು ಮಾಸ್ಕ್‌ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಎಂದು ವಸತಿ ಸಚಿವ ವಿ.ಸೋಮಣ್ಣ ಮನವಿ ಮಾಡಿದ್ದಾರೆ.

ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಕೊರೋನಾಗೆ ಎರಡನೇ ಲಸಿಕೆ ಪಡೆದ ಬಳಿಕ ಮಾತನಾಡಿದ ಅವರು, ಸಾರ್ವಜನಿಕರು ಹೆದರುವ ಅಗತ್ಯವಿಲ್ಲ. ಇವೆಲ್ಲವೂ ಸಾಮಾಜಿಕ ವ್ಯವಸ್ಥೆಗಳಲ್ಲಿ ಆಗುವಂತಹ ತೊಂದರೆಯಾಗಿದೆ. ಇದನ್ನು ನಿಭಾಯಿಸಲು ನುರಿತ ತಜ್ಞರ ವೈದ್ಯರ ತಂಡವಿದೆ. ಧೈರ್ಯದಿಂದ ಮಹಾಮಾರಿಯನ್ನು ಎದುರಿಸಬೇಕು. ಕೊರೋನಾ ನಿಯಂತ್ರಣಕ್ಕೆ ಪ್ರತಿಯೊಬ್ಬರು ನೆರವಾಗಬೇಕು. ಸಾಧ್ಯವಾದರೆ ಸಾರ್ವಜನಿಕರು ಅನಗತ್ಯವಾಗಿ ರಸ್ತೆಗೆ ಬರುವುದನ್ನು ನಿಲ್ಲಿಸಬೇಕು ಎಂದು ಹೇಳಿದರು.

Latest Videos

undefined

ಕೊಳಚೆ ಪ್ರದೇಶದ ನಿವಾಸಿಗಳಿಗೆ ಸರ್ಕಾರದ ಸಿಹಿ ಸುದ್ದಿ: ಸಚಿವ ಸೋಮಣ್ಣ

40 ವರ್ಷಗಳಿಂದ ವಿಕ್ಟೋರಿಯಾ ಆಸ್ಪತ್ರೆಯನ್ನು ಬಲ್ಲವನಾಗಿದ್ದು, ಇಂತಹ ಬಿಕ್ಕಟ್ಟಿನ ಸಂದರ್ಭದಲ್ಲಿಯೂ ಯಾವುದೇ ಲೋಪವಾಗದಂತೆ ಆಸ್ಪತ್ರೆ ಸಿಬ್ಬಂದಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಈ ವೇಳೆ ಆಸ್ಪತ್ರೆ ಅಧೀಕ್ಷಕ ಡಾ.ರಮೇಶ್‌ ಕೃಷ್ಣ ಇದ್ದರು.
 

click me!