ಕರ್ನಾಟಕದಲ್ಲಿ ಒಂದೇ ದಿನ ಇಪ್ಪತ್ತೊಂದು ಸಾವಿರ ಕೇಸ್.. ಬೆಂಗಳೂರು ಘನಘೋರ

Published : Apr 20, 2021, 10:19 PM ISTUpdated : Apr 20, 2021, 10:31 PM IST
ಕರ್ನಾಟಕದಲ್ಲಿ ಒಂದೇ ದಿನ ಇಪ್ಪತ್ತೊಂದು ಸಾವಿರ ಕೇಸ್.. ಬೆಂಗಳೂರು ಘನಘೋರ

ಸಾರಾಂಶ

ಕರ್ನಾಟಕದಲ್ಲಿ ಕೊರೋನಾ ಎರಡನೇ ಅಲೆ ಅಬ್ಬರ/ ಹಿಂದಿನ ಎಲ್ಲ ದಾಖಲೆಗಳನ್ನು ಮುರಿದ ಮಹಾಮಾರಿ/ ಒಂದೇ ದಿನ ಇಪ್ಪತ್ತು ಸಾವಿರ ಪ್ರಕರಣ/ ಬೆಂಗಳೂರಿನಲ್ಲಿ 13782 ಪ್ರಕರಣ

ಬೆಂಗಳೂರು(ಏ.  20) ಕರ್ನಾಟಕದಲ್ಲಿ ಕೊರೋನಾ ಹಿಂದಿನ ಎಲ್ಲ ದಾಖಲೆಗಳನ್ನು ಮುರಿದು ಹಾಕಿದೆ.  ಮಂಗಳವಾರ ಬರೋಬ್ಬರಿ  ಒಂದೇ ದಿನ ಇಪ್ಪತ್ತು ಸಾವಿರ ಕೇಸ್ ಗಳು ದಾಖಲಾಗಿವೆ. 

21794 ಕೊರೋನಾ ಪಾಸಿಟಿವ್ ಕೇಸ್‌ಗಳು ಪತ್ತೆಯಾಗಿದ್ದು, 149 ಸೋಂಕಿತರು ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ. ಇದರಿಂದಾಗಿ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 11,98644 ಕ್ಕೆ ಏರಿಕೆಯಾಗಿದ್ರೆ, ಒಟ್ಟು ಮೃತರ ಸಂಖ್ಯೆ 13,646 ಕ್ಕೇರಿದೆ ಎಂದು ರಾಜ್ಯ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

ಅರ್ಧ ಕರ್ನಾಟಕ ಬಂದ್; ಹೊಸ ಮಾರ್ಗಸೂಚಿ ಏನಿದೆ?

ಇನ್ನು ಕಳೆದ 24 ಗಂಟೆಗಳಲ್ಲಿ 4571 ಜನರು ಸೇರಿದಂತೆ ಇದುವರೆಗೆ 10,25821  ಸೋಂಕಿತರು ಸಂಪೂರ್ಣವಾಗಿ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಹೀಗಾಗಿ ರಾಜ್ಯದಲ್ಲಿ 159158 ಸಕ್ರಿಯ ಪ್ರಕರಣಗಳಿವೆ.

ಬೆಂಗಳೂರಿನಲ್ಲಿ 13782 ಪ್ರಕರಣ ದಾಖಲಾಗುವ ಮೂಲಕ ಸೋಂಕಿತರ ಸಂಖ್ಯೆ 570035 ಕ್ಕೆ ಏರಿಕೆಯಾಗಿದೆ. ಇನ್ನು ನಗರದಲ್ಲಿ ಕಿಲ್ಲರ್ ಕೊರೋನಾಗೆ 92 ಮಂದಿ ಬಲಿಯಾಗಿದ್ದು, ಸಾವಿನ ಸಂಖ್ಯೆ 5312 ಕ್ಕೆ ಏರಿಕೆಯಾಗಿದೆ.

 

 

 

PREV
click me!

Recommended Stories

ನಾಳೆ ಬೆಂಗಳೂರಿನಲ್ಲಿ ವಿದ್ಯುತ್ ಕಡಿತ: ನಿಮ್ಮ ಏರಿಯಾ ಇದೆಯಾ ಚೆಕ್ ಮಾಡಿ?
ಮಕ್ಕಳಿಗಾಗಿ ಕೊನೆಗೂ ಒಂದಾದ್ರು ಲೀಲಾ-ಮಂಜು; ಚಿನ್ನೀ, ಬಂಗಾರಿ ಫ್ಲೇವರ್ ಬಿಟ್ಟುಕೊಟ್ಟ ಸಂತೋಷ್!