ಉತ್ತರಾಧಿಕಾರಿ ವಿಷಯ ಪ್ರಸ್ತಾಪವಿಲ್ಲ: ಸೋಮಣ್ಣ| ಪುತ್ರನನ್ನು ಮುನ್ನಲೆಗೆ ತರುವ ವಿಚಾರ ಪಕ್ಷದಲ್ಲಿಲ್ಲ| ಬಿಜೆಪಿಯ ಶಾಸಕರು ರಾಜೀನಾಮೆ ನೀಡುತ್ತಾರೆ ಎಂಬ ಮಾತುಗಳು ಸತ್ಯವಲ್ಲ|ಕಾಂಗ್ರೆಸ್ ಮುಖಂಡ ಸಿ.ಎಂ.ಇಬ್ರಾಹಿಂ ಸುಳ್ಳು ಹೇಳುತ್ತಿದ್ದಾರೆ|
ಬಳ್ಳಾರಿ(ಫೆ.26): ಬಿಜೆಪಿಯಲ್ಲಿ ಸೂಪರ್ ಸಿಎಂ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಇನ್ನು ಮೂರು ವರ್ಷ, ಮೂರು ತಿಂಗಳು ಬಿ.ಎಸ್. ಯಡಿಯೂರಪ್ಪ ಅವರೇ ಮುಖ್ಯಮಂತ್ರಿ ಆಗಿ ಇರುತ್ತಾರೆ. ಅವರು ನಮ್ಮೆಲ್ಲರ ಪ್ರಶ್ನಾತೀತ ನಾಯಕ ಎಂದು ವಸತಿ ಸಚಿವ ವಿ. ಸೋಮಣ್ಣ ತಿಳಿಸಿದ್ದಾರೆ.
ನಗರದ ಹೊರ ವಲಯದ ಮುಂಡರಗಿ ಪ್ರದೇಶದಲ್ಲಿ ವಸತಿ ಸಮುಚ್ಚಯ ವೀಕ್ಷಣೆ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಯಡಿಯೂರಪ್ಪ ಅವರ ಮಗನನ್ನು ಮುನ್ನೆಲೆಗೆ ತರುವ ಯಾವ ವಿಚಾರವೂ ಪಕ್ಷದಲ್ಲಿಲ್ಲ. ಯಡಿಯೂರಪ್ಪ ಅವರ ಉತ್ತರಾಧಿಕಾರಿ ವಿಷಯ ಪ್ರಸ್ತಾಪವಿಲ್ಲ ಎಂದರು.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಬಿಜೆಪಿಯ ಶಾಸಕರು ರಾಜೀನಾಮೆ ನೀಡುತ್ತಾರೆ ಎಂಬ ಮಾತುಗಳು ಸತ್ಯವಲ್ಲ. ಕಾಂಗ್ರೆಸ್ ಮುಖಂಡ ಸಿ.ಎಂ.ಇಬ್ರಾಹಿಂ ಸುಳ್ಳು ಹೇಳುತ್ತಿದ್ದಾರೆ. ನಸಿಪುಡಿ (ನೆಶ್ಯ) ಏರಿಸಿ, ನೆತ್ತಿಗೇರಿದಾಗ ಆ ರೀತಿ ಮಾತನಾಡಿರುತ್ತಾರೆ. ನನಗೆ ಸಿಕ್ಕಿರುವ ಖಾತೆಯ ಬಗ್ಗೆ ಅಸಮಾಧಾನವಿಲ್ಲ. ಬೇರೆ ಯಾವ ಖಾತೆಯನ್ನೂ ನಾನು ಕೇಳಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
News In 100 Seconds: ಈ ಕ್ಷಣದ ಪ್ರಮುಖ ಹೆಡ್‌ಲೈನ್ಸ್