ರೌಡಿಶೀಟರ್ ಯಲ್ಪಪ್ಪ ಬರ್ಬರ ಹತ್ಯೆ| ಬಳ್ಳಾರಿ ನಗರದ ದೇವಿನಗರ ಪ್ರದೇಶದಲ್ಲಿ ನಡೆದ ಕೊಲೆ| ಯಲ್ಪಪ್ಪನ ಮೇಲೆ ಹಲ್ಲೆ ನಡೆಸಿ ಪರಾರಿಯಾದ ದುಷ್ಕರ್ಮಿಗಳು| ಆಂಧ್ರಪ್ರದೇಶ ಮೂಲದ ಯಲ್ಲಪ್ಪನ ಮೇಲೆ ಹಲವು ಪ್ರಕರಣಗಳು ದಾಖಲು|
ಬಳ್ಳಾರಿ(ಫೆ.26): ಕಳೆದ ವರ್ಷ ನಗರದ ಹೊರ ವಲಯದಲ್ಲಿ ನಡೆದ ರೌಡಿಶೀಟರ್ ಬಂಡಿ ರಮೇಶ್ ಕೊಲೆ ಪ್ರಕರಣದ ಪ್ರಮುಖ ಆರೋಪಿ ನೆರೆಮಟ್ಲ ಯಲ್ಲಪ್ಪ (48) ಇಲ್ಲಿನ ದೇವಿನಗರ ಪ್ರದೇಶದಲ್ಲಿ ಮಂಗಳವಾರ ರಾತ್ರಿ ಹತ್ಯೆಯಾಗಿದ್ದಾರೆ.
ಆಟೋದಲ್ಲಿ ಬಂದಿಳಿದ ದುಷ್ಕರ್ಮಿಗಳು ದೇವಿನಗರದ ತಮ್ಮ ನಿವಾಸದ ಬಳಿ ಕುಳಿತಿದ್ದ ಯಲ್ಲಪ್ಪನ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ. ಕೂಡಲೇ ವಿಮ್ಸ್ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಕೆಲವೇ ಸಮಯದಲ್ಲಿ ಯಲ್ಲಪ್ಪ ಕೊನೆಯುಸಿರೆಳೆದಿದ್ದಾರೆ.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಆಂಧ್ರಪ್ರದೇಶ ಮೂಲದ ಯಲ್ಲಪ್ಪ ದೇವಿನಗರದಲ್ಲಿ ವಾಸವಾಗಿದ್ದರು. ಆಂಧ್ರದ ಉರವಕೊಂಡ ಠಾಣೆ ವ್ಯಾಪ್ತಿಯಲ್ಲಿ ಇವನ ಮೇಲೆ ಹಲವು ಪ್ರಕರಣಗಳು ಇದ್ದವು ಎಂದು ಹೇಳಲಾಗುತ್ತಿದ್ದು, ಕೊಲೆಗೆ ಕಾರಣಗಳು ತಿಳಿದುಬಂದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಎಸ್ಪಿ ಸಿ.ಕೆ. ಬಾಬಾ, ಎಎಸ್ಪಿ ಲಾವಣ್ಯ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.