Chikkaballapur Utsav: ಬರದ ನಾಡನ್ನು ಮಲೆನಾಡು ಮಾಡಿದ ಸುಧಾಕರ್‌: ಸಚಿವ ಸೋಮಣ್ಣ

By Govindaraj SFirst Published Jan 11, 2023, 11:59 PM IST
Highlights

ಸಚಿವ ಡಾ.ಕೆ.ಸುಧಾಕರ್‌ ಭವಿಷ್ಯ ನಾಯಕರಾಗಿದ್ದು ಯಾವ ಜಿಲ್ಲೆಯಲ್ಲಿ ಸರ್‌ಎಂವಿ, ಸಿ.ಎನ್‌.ಆರ್‌. ಡಾ.ಎಚ್‌.ನರಸಿಂಹಯ್ಯ ಹುಟ್ಟಿಇತಿಹಾಸ ಪುಟಗಳಲ್ಲಿ ಸೇರಿದ್ದಾರೆ ಅದೇ ಜಿಲ್ಲೆಯಲ್ಲಿ ಹುಟ್ಟಿರುವ ಅವರು ಮುಂದೊಂದು ದಿನ ಇತಿಹಾಸ ಪುಟಗಳಲ್ಲಿ ಉಳಿಯಲಿದ್ದಾರೆಂದು ವಸತಿ ಸಚಿವ ವಿ.ಸೋಮಣ್ಣ ಹೇಳಿದರು. 

ಚಿಕ್ಕಬಳ್ಳಾಪುರ (ಜ.11): ಸಚಿವ ಡಾ.ಕೆ.ಸುಧಾಕರ್‌ ಭವಿಷ್ಯ ನಾಯಕರಾಗಿದ್ದು ಯಾವ ಜಿಲ್ಲೆಯಲ್ಲಿ ಸರ್‌ಎಂವಿ, ಸಿ.ಎನ್‌.ಆರ್‌. ಡಾ.ಎಚ್‌.ನರಸಿಂಹಯ್ಯ ಹುಟ್ಟಿಇತಿಹಾಸ ಪುಟಗಳಲ್ಲಿ ಸೇರಿದ್ದಾರೆ ಅದೇ ಜಿಲ್ಲೆಯಲ್ಲಿ ಹುಟ್ಟಿರುವ ಅವರು ಮುಂದೊಂದು ದಿನ ಇತಿಹಾಸ ಪುಟಗಳಲ್ಲಿ ಉಳಿಯಲಿದ್ದಾರೆಂದು ವಸತಿ ಸಚಿವ ವಿ.ಸೋಮಣ್ಣ ಹೇಳಿದರು. ನಗರದ ಸರ್‌ಎಂವಿ ಜಿಲ್ಲಾ ಕ್ರೀಡಾಂಗಣದ ಮುಖ್ಯ ವೇದಿಕೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಬರಡು ನಾಡು ಎಂಬ ಖ್ಯಾತಿಗೆ ಪಾತ್ರವಾಗಿದ್ದ ಚಿಕ್ಕಬಳ್ಳಾಪುರವನ್ನು ಮಲೆನಾಡಿಗೆ ಸಮನಾಗಿ ಮಾಡಿದ ಕೀರ್ತಿ ಸುಧಾಕರ್‌ ಅವರಿಗೆ ಸಲ್ಲುತ್ತದೆ. ಇಂತಹ ನಾಯಕನನ್ನು ಪಡೆದ ಚಿಕ್ಕಬಳ್ಳಾಪುರ ಜಿಲ್ಲೆಯ ಪುಣ್ಯ ಎಂದರು.

ರಾಜ್ಯದ ಅಭಿವೃದ್ಧಿಗೆ ಶ್ರಮಿಸಿದ್ದಾರೆ: ಜಿಲ್ಲೆ, ಕ್ಷೇತ್ರ ಮಾತ್ರವಲ್ಲದೇ ರಾಜ್ಯದ ಸರ್ವಾಂಗೀಣ ಅಭಿವೃದ್ದಿಗೆ ಅವರು ಶ್ರಮಿಸಿದ್ದಾರೆ. ರಾಜ್ಯದ 32 ಜಿಲ್ಲೆಗಳಲ್ಲಿ ಕೋವಿಡ್‌ ನಿವಾರವಣೆಗೆ ಶ್ರಮಿಸಿದ್ದಾರೆ. ಅವರ ಅನುಭವ ಚಿಕ್ಕ ವಯಸ್ಸಿಗೆ ದೊಡ್ಡ ಅಲೋಚನೆ ಮಾಡುವ ನಾಯಕ. ಚಿಕ್ಕಬಳ್ಳಾಪುರ ಸೇರಿದಂತೆ ಹತ್ತಾರು ಕಡೆ ಸುಧಾಕರ್‌ ಹೆಸರು ಶಾಶ್ವತವಾಗಿ ಉಳಿಯಲಿದೆಂದರು. ಕೋಲಾರ ಜಿಲ್ಲೆಯ ಅವಿಭಾಜ್ಯ ಅಂಗವಾಗಿ ಚಿಕ್ಕಬಳ್ಳಾಪುರ ಜಿಲ್ಲೆಯಾಗಿ 15 ವರ್ಷಗಳಲ್ಲಿ ಸರ್ವಾಂಗೀಣ ಅಭಿವೃದ್ದಿಗೆ ಕಂಡಿದೆ. ಸುಧಾಕರ್‌, 10 ವರ್ಷದಲ್ಲಿ 50 ವರ್ಷದ ಅಭಿವೃದ್ದಿ ಮಾಡಿದ್ದಾರೆಂದರು. 

Chikkaballapur Utsav: ರಾಜ್ಯದ ಯಾವುದೇ ಶಾಸಕರು ಮಾಡದ ಸಾಹಸ ಸುಧಾಕರ್ ಮಾಡಿದ್ದಾರೆ: ಸಚಿವ ಸೋಮಶೇಖರ್

ಸುಧಾಕರ್‌ ಇಬ್ಬ ವ್ಯಕ್ತಿಯಲ್ಲಿ ದೊಡ್ಡ ಶಕ್ತಿ, ಸಾವಿರಾರು ಜನ ಜಾತ್ರೆ ರೀತಿ ಉತ್ಸವದಲ್ಲಿ ಭಾಗವಹಿಸಿದ್ದಾರೆ. ಇದು ಚಿಕ್ಕಬಳ್ಳಾಪುರ ಉತ್ಸವ ಅಲ್ಲ. ದೊಡ್ಡ ಜಾತ್ರೆ ಎಂದರು. ನಾನು 45 ವರ್ಷಗಳಿಂದ ರಾಜಕಾರಣ ಮಾಡುತ್ತಾ ಬಂದಿದ್ದೇನೆ. ಆನೇಕ ಮುಖ್ಯಮಂತ್ರಿಗಳ ಬಳಿ, ಪ್ರಧಾನಿಗಳನ್ನು ಹತ್ತಿರದಿಂದ ನೋಡಿದ್ದೇನೆ. ಹತ್ತು ಹಲವು ಕಾರ್ಯಕ್ರಮ ಮಾಡಿದ್ದೇನೆ. ಮೈಸೂರು ದಸರಾ ಮುಂದೆ ನಿಂತು ಮಾಡಿದ್ದೇನೆ. ಲಕ್ಷಾಂತರ ಜನರಿಗೆ ಭಾಷಣ ಮಾಡಿದ್ದೇನೆ. ಆದರೆ ಸುಧಾಕರ್‌ ಕಾರ್ಯವೈಖರಿ, ಅನುಭವ, ದೂರದೃಷ್ಠಿ ಚಿಂತನೆ ದೊಡ್ಡದು ಎಂದರು.

ಕೆಲಸಗಾರರಿಗೆ ಪಕ್ಷ, ಜಾತಿ ಇರಬಾರದು: ಡಾ. ಸುಧಾಕರ್‌ಗೆ ಐದಾರು ಜಿಲ್ಲೆ ಹೊಣೆ ನೀಡಿದರೂ ನಿಭಾಯಿಸುತ್ತಾರೆ. ಕೆಲಸಗಾರರಿಗೆ ಪಕ್ಷ, ಜಾತಿ ಇರಬಾರದು, ಇವರಿಗೆ ಐದಾರು ಜಿಲ್ಲೆ ನೀಡಿದರೂ ನಿಭಾಯಿಸುವ ಶಕ್ತಿ ಇದೆ. ಊಹೆಗೂ ನಿಲುಕದ ವಿಚಾರಗಳನ್ನು ಸಾಮಾನ್ಯರಿಗೆ ಅರ್ಥೈಸುವ ಕೆಲಸ ಮಾಡಿದ್ದಾರೆ. ಅವರ ದೂರದೃಷ್ಟಿಯ ಚಿಂತನೆಗೆ ಅಭಿನಂದನೆ. ಡಬಲ್‌ ಇಂಜಿನ್‌ ಸರ್ಕಾರ ಏನು ಮಾಡಿದೆ ಎಂದು ಕೇಳುವವರಿಗೆ ಉತ್ತರ ಚಿಕ್ಕಬಳ್ಳಾಪುರ ಉತ್ಸವದಲ್ಲಿ ದೊರೆಯಲಿದೆ ಎಂದು ಹೇಳಿದರು. ಬಡವರಿಗೆ ಮನೆ, ನಿವೇಶನಗಳು, ವೈದ್ಯಕೀಯ, ಕಾಲೇಜುಗಳ ಅಭಿವೃದ್ಧಿ, ಬಡವನಲ್ಲಿಯೂ ಶಕ್ತಿ ಇದೆ ಎಂಬುದನ್ನು ಅವರು ತೋರಿಸಿಕೊಟ್ಟಿದ್ದಾರೆ. ಅಧಿಕಾರ ಸಾಮಾನ್ಯರಿಗೆ ಎಂಬುದನ್ನು ತೋರಿಸಿದ ಕೀರ್ತಿ ಸುಧಾಕರ್‌ ಅವರಿಗೆ ಸಲ್ಲುತ್ತದೆ. ಅವರಿಗೆ ಅಭಾರಿಯಾಗಿರಬೇಕು ಎಂದರು.

ಸುಧಾಕರ್‌ ಭವಿಷ್ಯ ನಾಯಕ: 2023ರ ನಂತರ ಸುಧಾಕರ್‌ ಅವರು ಭವಿಷ್ಯದ ನಾಯಕರಾಗಿ ಹೊರಹೊಮ್ಮಲಿದ್ದಾರೆ, ರಾಜ್ಯದ 32 ಜಿಲ್ಲೆಗಳಲ್ಲಿ ತನ್ನದೇ ದೃಷ್ಟಿಕೋನದ ಮೂಲಕ ಕೋವಿಡ್‌ ಸಂದರ್ಭದಲ್ಲಿ ಸಮರ್ಪಕವಾಗಿ ನಿಭಾಯಿಸಿದ್ದಾರೆ. ಅವರಿಗೆ ಇನ್ನೂ ಹೆಚ್ಚಿನ ಶಕ್ತಿ ನೀಡಿ, ಅವರು ರಾಜ್ಯದಲ್ಲಿಯೇ ಶಾಶ್ವತವಾಗಿ ಉಳಿಯುವ ಅಭಿವೃದ್ಧಿ ಮಾಡಲಿದ್ದಾರೆ. ಸುಧಾಕರ್‌ ವ್ಯಕ್ತಿಯಲ್ಲ ಅವರೊಂದು ಶಕ್ತಿ.ಇಂತಹವರು ಹತ್ತಾರು ವರ್ಷಗಳ ಕಾಲ ರಾಜಕೀಯದಲ್ಲಿರಬೇಕು. ಚಿಕ್ಕಬಳ್ಳಾಪುರದಲ್ಲಿ ನಡೆಯುತ್ತಿರುವುದು ಉತ್ಸವ ಅಲ್ಲ, ಬೃಹತ್‌ ಜಾತ್ರೆ. ರಾಜ್ಯದ 224 ಕ್ಷೇತ್ರಗಳಲ್ಲಿಯೂ ಸುಧಾಕರ್‌ ಬಂದು ತಮ್ಮದೇ ಆದ ಅಭಿವೃದ್ಧಿ ಬೀರಲಿದ್ದಾರೆ ಎಂದು ಭವಿಷ್ಯ ನುಡಿದರು. ಎಂದು ಹೇಳಿದರು.

Chikkaballapur Utsav: ಡಾ.ಸುಧಾಕರ್‌ ದೂರದೃಷ್ಟಿ ನಾಯಕ: ಸಚಿವ ಮುನಿರತ್ನ

ಜಿಲ್ಲೆಗೆ ಮೆಡಿಕಲ್‌ ಕಾಲೇಜ್‌ ತರುವ ಮೂಲಕ ಅಧಿಕಾರ ಸ್ವಂತಕ್ಕಲ್ಲ. ಸಾಮಾನ್ಯ ಜನರಿಗೆ ಎಂಬುದನ್ನು ಸಚಿವ ಸುಧಾಕರ್‌ ತೋರಿಸಿದ್ದಾರೆ. ಇತಂಹವರು ಹತ್ತಾರು ವರ್ಷ ರಾಜಕಾರಣದಲ್ಲಿ ಇರಬೇಕು, ಜನರ ಜೀವನ ಮಟ್ಟವನ್ನು ಸುಧಾರಣೆ ತರುವ ಕೆಲಸವನ್ನು ಸುಧಾಕರ್‌ ಈ ಭಾಗಕ್ಕೆ ಕೆರೆಗಳಿಗೆ ನೀರು ತುಂಬಿಸುವ ಮೂಲಕ ಮಾಡಿದ್ದಾರೆ.
-ವಿ.ಸೋಮಣ್ಣ, ವಸತಿ ಸಚಿವ

click me!