ಪರಿಸ್ಥಿತಿ ನೋಡಿಕೊಂಡು ಜನತಾ ಕರ್ಫ್ಯೂ ಮುಂದುವರಿಕೆ| ಲಾಕ್‌ಡೌನ್ ಇರೋದಿಲ್ಲ. ಈ ಬಗ್ಗೆ ಈಗಾಗಲೇ ಕ್ಯಾಬಿನೆಟ್‌ನಲ್ಲಿ ನಿರ್ಧಾರ| ಜನರಿಗೆ ತಿಳುವಳಿಕೆ ಬರಬೇಕು, ಜನರು ಧೈರ್ಯದಿಂದ ಇರಬೇಕು, ಧೈರ್ಯ ತುಂಬುವ ಕೆಲಸ ಸರ್ಕಾರ ಮಾಡುತ್ತೆ| ಶಾಸಕರು, ಸಚಿವರು ಎಲ್ಲರೂ ಜನರೊಂದಿಗೆ ಇರುತ್ತೇವೆ. ಜನರೂ ಕೂಡ ಸಹಕರಿಸಬೇಕು ಎಂದು ಮನವಿ ಮಾಡಿದ ಕತ್ತಿ|
ಬಾಗಲಕೋಟೆ(ಮೇ.05):ವಿರೋಧ ಪಕ್ಷದವರಿಗೆ ಮಾಡೋಕೆ ಬೇರೆ ಯಾವುದೇ ಕೆಲಸ ಇಲ್ಲ. ಅವರು ಏನೇನೋ ಮಾತನಾಡುತ್ತಾರೆ. ಈ ಬಗ್ಗೆ ತಲೆ ಕೆಡೆಸಿಕೊಳ್ಳುವ ಅಗತ್ಯವಲ್ಲ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಉಮೇಶ್ ಕತ್ತಿ ತಿಳಿಸಿದ್ದಾರೆ.
ಜಿಲ್ಲಾ ಉಸ್ತುವಾರಿ ಸಚಿವರಾದ ಮೇಲೆ ಉಮೇಶ್ ಕತ್ತಿ ಅವರು ಮೊದಲ ಬಾರಿಗೆ ಇಂದು(ಬುಧವಾರ) ಬಾಗಲಕೋಟೆಗೆ ಆಗಮಿಸಿದ್ದಾರೆ. ಈ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಲಾಕ್‌ಡೌನ್ ಮಾಡುವ ವಿಚಾರದ ಬಗ್ಗೆ ಮಾತನಾಡಿದ ಅವರು, ಪರಿಸ್ಥಿತಿ ನೋಡಿಕೊಂಡು ಜನತಾ ಕರ್ಫ್ಯೂ ಮುಂದುವರೆಸುತ್ತಾರೆ. ಆದರೆ, ಯಾವುದೇ ಲಾಕ್‌ಡೌನ್ ಇರೋದಿಲ್ಲ. ಈ ಬಗ್ಗೆ ಈಗಾಗಲೇ ಕ್ಯಾಬಿನೆಟ್‌ನಲ್ಲಿ ನಿರ್ಧಾರವನ್ನ ತೆಗೆದುಕೊಂಡಿದ್ದೇವೆ ಎಂದು ಹೇಳಿದ್ದಾರೆ.
undefined
ರಾಜ್ಯದಲ್ಲಿ ಕಡಿಮೆಯಾದ ಬ್ಲಡ್ ಡೊನೆಟ್: 'ಕೋವಿಡ್ ಲಸಿಕೆಗೂ ಮುನ್ನ ರಕ್ತದಾನ ಮಾಡಿ ಜೀವ ಉಳಿಸಿ'
ಜನತಾ ಕರ್ಫ್ಯೂ ಮಧ್ಯೆ ಜನರು ಹೆಚ್ಚೆಚ್ಚು ಸೇರುತ್ತಿರುವ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ಸಚಿವ ಉಮೇಶ್ ಕತ್ತಿ ಅವರು, ಈ ಬಗ್ಗೆ ಜನರೂ ಸಹ ಅರ್ಥ ಮಾಡಿಕೊಳ್ಳಬೇಕು. ಜನರಿಗೆ ತಿಳುವಳಿಕೆ ಬರಬೇಕು. ಜನರು ಧೈರ್ಯದಿಂದ ಇರಬೇಕು. ಧೈರ್ಯ ತುಂಬುವ ಕೆಲಸವನ್ನ ಸರ್ಕಾರ ಮಾಡುತ್ತದೆ. ಶಾಸಕರು, ಸಚಿವರು ಎಲ್ಲರೂ ಜನರೊಂದಿಗೆ ಇರುತ್ತೇವೆ. ಜನರೂ ಕೂಡ ಸಹಕರಿಸಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ.
ಬಾಗಲಕೋಟೆ ಜಿಲ್ಲೆಯಲ್ಲಿ ಆಕ್ಸಿಜನ್ ಕೊರತೆ ವಿಚಾರದ ಬಗ್ಗೆ ಮಾತನಾಡಿದ ಸಚಿವರು, ಜಿಲ್ಲೆಯಲ್ಲಿ ದಿನೇ ದಿನೆ ಕೊರೋನಾ ಸೋಂಕಿನಿಂದ ಪೊಸಿಟಿವ್ ರೇಟ್ 11ರಿಂದ 20 ಕ್ಕೆ ಬಂದಿದೆ. ಈಗ 9 ಕಿಲೋ ಲೀಟರ್ ಆಕ್ಸಿಜನ್ ಬೇಕಿದೆ. ಆದ್ರೆ ಇದೇ ಪರಿಸ್ಥಿತಿ ಹೀಗೆ ಮುಂದುವರೆದರೆ ಪ್ರತಿದಿನ 18 ಕಿಲೋ ಲೀಟರ್ ಆಕ್ಸಿಜನ್ ಬೇಕಾಗುತ್ತದೆ. ಅಂತಹ ಪರಿಸ್ಥಿತಿ ಬಂದರೆ ಹೆಚ್ಚುವರಿ ಆಕ್ಸಿಜನ್ ಪಡೆಯುತ್ತೇವೆ ಎಂದು ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಕೊರೋನಾ ರೋಗಿಗಳಿಗೆ ಬೆಡ್‌ಗಳ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಬಾಗಲಕೋಟೆ ಜಿಲ್ಲೆಯಲ್ಲಿ ಆಕ್ಸಿಜನ್ ಬೆಡ್ ಫುಲ್ ಆಗಿವೆ. ಯಾವುದು ಖಾಲಿ ಇಲ್ಲ. ಆಕ್ಸಿಜನ್ ಬೆಡ್‌ಗಳು ಬೇಕೆಂದು ಬಂದಾಗ ವೈದ್ಯರಿಗೆ ಹೇಳಿ ಒದಗಿಸುತ್ತೇವೆ. ಈಗ ಖಾಲಿ ಇರೋ 530 ಬೆಡ್ ತುಂಬುತ್ತೇವೆ. ಆಕ್ಸಿಜನ್ ಬೇಕೆಂದಾಗ ಅವುಗಳನ್ನು ಕನ್ವರ್ಟ್ ಮಾಡುತ್ತೇವೆ ಎಂದು ತಿಳಿಸಿದ್ದಾರೆ. ಈ ವೇಳೆ ಉಸ್ತುವಾರಿ ಸಚಿವರಿಗೆ ಸ್ಥಳೀಯ ಶಾಸಕರಾದ ವೀರಣ್ಣ ಚರಂತಿಮಠ, ಸಿದ್ದು ಸವದಿ, ಮಾಜಿ ಶಾಸಕ ರಾಜಶೇಖರ ಶೀಲವಂತ ಸಾಥ್ ಕೊಟ್ಟಿದ್ದರು.