ದಾವಣಗೆರೆ : ಕೊರೋನಾ ಭಯದಲ್ಲಿ ರೈಲಿಗೆ ತಲೆಕೊಟ್ಟು ಪತ್ರಕರ್ತ ಆತ್ಮಹತ್ಯೆ

By Suvarna News  |  First Published May 5, 2021, 2:22 PM IST

ಕೆಲ ದಿನಗಳಿಂದ ಶೀತ ಜ್ವರದಿಂದ ಬಳಲುತ್ತಿದ್ದ ದಾವಣಗೆರೆಯ ಪತ್ರಕರ್ತರೋರ್ವರು ಇಂದು ರೈಲಿಗೆ  ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 


 ದಾವಣಗೆರೆ (ಮೇ.05): ಜಿಲ್ಲೆಯ ಪತ್ರಕರ್ತರೋರ್ವರು ಕೊರೋನಾ ಭಯದಿಂದ ರೈಲಿಗೆ ತಲೆಕೊಟ್ಟು ಆತ್ಮಹತ್ಯೆಗೆ ಶರಣಾಗಿದ್ದಾರೆ. 

ದಾವಣಗೆರೆ ತಾಲೂಕಿನ ಕುಂದೂರು ಗ್ರಾಮದ ಪತ್ರಕರ್ತ ಪರಮೇಶ್ ಕುಂದೂರು  (51)ಅಮರಾವತಿ ಬಳಿ ಮಂಗಳವಾರ ರಾತ್ರಿ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 
 
ಪರಮೇಶ್ ಕೆಲ ದಿನಗಳಿಂದ ಶೀತ, ಜ್ವರ, ಕೆಮ್ಮಿನಿಂದ ಬಳಲುತ್ತಿದ್ದು, ಕೊರೊನಾ ಭಯದಿಂದ ನಲುಗುತ್ತಿದ್ದರೆನ್ನಲಾಗಿದೆ.  ಟೆಸ್ಟ್ ಮಾಡಿಸಿ ಪಾಸಿಟಿವ್ ಬಂದರೆ ಎಲ್ಲಿ ಇರುವುದು. ಬೆಡ್, ವೆಂಟಿಲೇಟರ್, ಆಕ್ಸಿಜನ್ ಸಿಗುತ್ತಿಲ್ಲ. ಮುಂದೆ ಏನು ಎಂಬ ಚಿಂತೆಯಲ್ಲಿದ್ದು, ಖಿನ್ನತೆಗೆ  ಒಳಗಾಗಿ ಪರಮೇಶ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.  

Tap to resize

Latest Videos

ಐದು ಸಚಿವರಿಗೆ ಕೋವಿಡ್ ಹೊಣೆ, ಉಸ್ತುವಾರಿ ಸಚಿವರು ತಕ್ಷಣ ತಮ್ಮ ಜಿಲ್ಲೆಗೆ ತೆರಳಲು ಸೂಚನೆ .

ನಿನ್ನೆಯಷ್ಟೇ ಪರಮೇಶ್ ಪತ್ನಿ ತಂದೆ ಮರಣ ಹೊಂದಿದ್ದು, ಅವರ ಅಂತ್ಯಕ್ರಿಯೆ ಮುಗಿಸಿ ಬಂದಿದ್ದರು. ಶೀತ ಕೆಮ್ಮು ಹೆಚ್ಚಾಗಿದ್ದು, ರಾತ್ರಿ ವಾಕ್ ಮಾಡುತ್ತೇನೆ ಎಂದು ತೆರಳಿ ರೈಲಿಗೆ ತಲೆಕೊಟ್ಟಿದ್ದಾರೆ ಎಂದು ಅವರ ಆಪ್ತರು ಹೇಳಿದ್ದಾರೆ. ಪತ್ರಕರ್ತ ಪರಮೇಶ್ ಅವರು ಪತ್ನಿ ಹಾಗೂ ಇಬ್ಬರು ಗಂಡು ಮಕ್ಕಳನ್ನು ಅಗಲಿದ್ದಾರೆ. 

ಪತ್ರಕರ್ತರೂ ಕೋವಿಡ್‌ ವಾರಿಯರ್ಸ್‌: ಉಚಿತವಾಗಿ ಲಸಿಕೆ ವಿತರಿಸಲು ನಿರ್ಧಾರ!

 ಸುಮಾರು 10ರಿಂದ 15 ವರ್ಷಗಳ ಕಾಲ ಪತ್ರಿಕೋದ್ಯಮದಲ್ಲಿ ಕೆಲಸ ಮಾಡಿದ್ದು, ಸರ್ಕಾರಿ ಶಾಲೆಗಳಲ್ಲಿನ ಲೋಪ,  ಉದ್ಯೋಗ ಖಾತರಿಯಲ್ಲಿ ಭ್ರಷ್ಟಾಚಾರ ಸೇರಿದಂತೆ ಇನ್ನಿತರ ಕಡೆ ನಡೆಯುತ್ತಿದ್ದ ಅಕ್ರಮಗಳನ್ನು ತಡೆಗಟ್ಟುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಸರ್ಕಾರಿ ಶಾಲೆಗಳ ಮೇಲೆ ಅವರಿಗೆ ಅಪಾರವಾದ ಪ್ರೀತಿ ಇತ್ತು. ಎಷ್ಟೋ ಸಮಸ್ಯೆಗಳ ಬಗ್ಗೆ ಬರೆದು ಭ್ರಷ್ಟರನ್ನು ಕುಟುಕಿದ್ದರು. ಹಲವು ಕನ್ನಡದ ದಿನಪತ್ರಿಕೆಗಳಲ್ಲಿ ಪರಮೇಶ್ ಕುಂದೂರು ಕೆಲಸ ಮಾಡಿದ್ದು,  ವೈರಸ್ ಭಯಕ್ಕೆ ಪ್ರಾಣವನ್ನೇ ಬಿಟ್ಟಿದ್ದಾರೆ.

ಈ ಸಂಬಂಧ ದಾವಣಗೆರೆ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona

click me!