ಶಾಲೆಯೊಂದರ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದಾಗಿ ಹೇಳಿದ್ದ ಸುರೇಶ್ ಕುಮಾರ್ ಅಲ್ಲಿಗೆ ತೆರಳಲು ಸಾಧ್ಯವಾಗದಿದ್ದಕ್ಕೆ ಕ್ಷಮೆ ಕೋರಿದ್ದಾರೆ.
ಕಡೂರು [ಫೆ.28]: ಯಾವುದೇ ನಗರ ಪ್ರದೇಶದ ಮಕ್ಕಳಿಗೆ ಕಡಿಮೆ ಇಲ್ಲದಂತಹ ಸಾಧನೆಯನ್ನು ನಮ್ಮ ಗ್ರಾಮೀಣ ಪ್ರದೇಶದ ಮಕ್ಕಳು ಸಾಧನೆ ಮಾಡಿ ತೋರಿಸುತ್ತಿರುವುದು ಅಭಿನಂದನೀಯ ಎಂದು ಮಾಜಿ ಶಾಸಕ ವೈ.ಎಸ್.ವಿ. ದತ್ತ ಹೇಳಿದರು.
ತಾಲೂಕಿನ ಬಿ.ಬಸವನಹಳ್ಳಿಯಲ್ಲಿ ಗುರುವಾರ ಸರ್ಕಾರಿ ಪ್ರಾಥಮಿಕ ಶಾಲೆಗೆ 50 ವರ್ಷ ತುಂಬಿದ ಸುವರ್ಣ ಮಹೋತ್ಸವ ಮತ್ತು ಶಾಲಾ ವಾರ್ಷಿಕೋತ್ಸವ ಸಮಾರಂಭದಲ್ಲಿ ಮಾತನಾಡಿದ ಅವರು, ಬಿ.ಬಸವನಹಳ್ಳಿ ತಾಂಡ್ಯದ ಮತ್ತು ಯಾದವರ ಹಟ್ಟಿಗ್ರಾಮಗಳ ಜನರು ಸೇರಿ ಹಬ್ಬದ ರೀತಿ ಶಾಲಾ ಕಾರ್ಯಕ್ರಮ ಮಾಡುತ್ತಿರುವುದು ಮಾದರಿಯಾಗಿದೆ. ಅಷ್ಟಕ್ಕೂ 1969ರಲ್ಲಿ ಈ ಶಾಲೆಯನ್ನು ಸಿರಿಗೆರೆಯ ಹಿರಿಯ ಶ್ರೀಗಳು ಮತ್ತು ತಾಲೂಕು ಬೋರ್ಡ್ ಅಧ್ಯಕ್ಷರಾಗಿದ್ದ ತಂದೆ ವೈ.ವಿ. ಸೂರ್ಯನಾರಾಯಣ ಅವರು ಉದ್ಘಾಟಿಸಿದ್ದು ಎಂದು ತಿಳಿದು ಸಂತೋಷವಾಯಿತು ಎಂದರು.
undefined
1000 ಸರ್ಕಾರಿ ಶಾಲೆಗಳಿಗೆ ಇನ್ಫೋಸಿಸ್ ಕಂಪ್ಯೂಟರ್!
ಕ್ಷಮೆ ಕೋರಿದ ಸಚಿವರು
ಬಿ.ಬಸವನಹಳ್ಳಿ ಶಾಲಾ ಕಾರ್ಯಕ್ರಮಕ್ಕೆ ಬರಲು ಆಗದೇ ಇದ್ದುದಕ್ಕೆ ಶಿಕ್ಷಣ ಸಚಿವ ಸುರೇಶ್‌ಕುಮಾರ್ ವಿಡಿಯೋ ಸಂದೇಶದ ಮೂಲಕ ಜನರ ಕ್ಷಮೆ ಕೋರಿದರು. ಫೆ.27ರಂದು ಕಡೂರು ತಾಲೂಕಿನ ಬಿ.ಬಸವನಹಳ್ಳಿ ಸರ್ಕಾರಿ ಶಾಲೆಯ ಸುವರ್ಣ ಮಹೋತ್ಸವ ಕಾರ್ಯಕ್ರಮಕ್ಕೆ ಆಗಮಿಸುವುದಾಗಿ ಹೇಳಿದ್ದರು. ಆದರೆ ತಾವು ಯಡಿಯೂರಪ್ಪ ಅವರ ಹುಟ್ಟುಹಬ್ಬ$ಕಾರ್ಯಕ್ರಮ ಹಾಗೂ ಬೆಂಗಳೂರಿಗೆ ರಕ್ಷಣಾ ಸಚಿವರು ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ತಾವು ಅನಿವಾರ್ಯವಾಗಿ ಭಾಗವಹಿಸಲು ಆಗುತ್ತಿಲ್ಲವಾದ ಕಾರಣ ಗ್ರಾಮದ ಜನರು ಕ್ಷಮಿಸಬೇಕು ಎಂದು ಕೋರಿದರು.