ಶಾಲೆಗಳ ಪುನಾರಂಭ ಬಗ್ಗೆ ಸಚಿವ ಸುರೇಶ್ ಕುಮಾರ್ ಚಿಂತನೆ

By Kannadaprabha News  |  First Published Jun 2, 2020, 4:12 PM IST

ಶಾಲೆಗಳ ಪುನಾರಂಭ ಮಾಡುವ ಬಗ್ಗೆ ಸಚಿವ ಸುರೇಶ್ ಕುಮಾರ್ ಚಿಂತಿಸಿದ್ದು, ಕೇಂದ್ರ ಸರ್ಕಾರ ಬಿಡುಗಡೆ ಮಾಡಿರುವ ಗೈಡ್ ‌ಲೈನ್ಸ್ ಪ್ರಕಾರ ಈಗಾಗಲೇ ಅಧಿಕಾರಿಗಳ ಜೊತೆ ಚರ್ಚೆ ಮಾಡಲಾಗಿದೆ ಎಂದು ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಸುರೇಶ್ ಕುಮಾರ್ ಮಾಹಿತಿ ನೀಡಿದ್ದಾರೆ.


ಬೆಂಗಳೂರು(ಜೂ. 02): ಶಾಲೆಗಳ ಪುನಾರಂಭ ಮಾಡುವ ಬಗ್ಗೆ ಸಚಿವ ಸುರೇಶ್ ಕುಮಾರ್ ಚಿಂತಿಸಿದ್ದು, ಕೇಂದ್ರ ಸರ್ಕಾರ ಬಿಡುಗಡೆ ಮಾಡಿರುವ ಗೈಡ್ ‌ಲೈನ್ಸ್ ಪ್ರಕಾರ ಈಗಾಗಲೇ ಅಧಿಕಾರಿಗಳ ಜೊತೆ ಚರ್ಚೆ ಮಾಡಲಾಗಿದೆ.

ಸರ್ಕಾರಿ ಹಾಗೂ ಅನುದಾನಿತ ಶಾಲೆಗಳ ಪುನಾರಂಭ ಮಾಡುವ ಕುರಿತು ವರದಿ ನೀಡಲು ಮುಖ್ಯೋಪಾಧ್ಯಾಯರಿಗೆ ಸೂಚನೆ ನೀಡಲಾಗಿದ್ದು, ಶಾಲೆ ಪುನಾರಂಭ ಕುರಿತು SDMC ಸದ್ಯದರು ಹಾಗೂ ಪೋಷಕರು ಅಭಿಪ್ರಾಯ ಸಂಗ್ರಹಿಸಲು ಸೂಚನೆ ನೀಡಲಾಗಿದೆ.

Latest Videos

undefined

SSLC ಪರೀಕ್ಷೆ: ಹೈಕೋರ್ಟ್ ಸೂಚನೆ ಬೆನ್ನಲ್ಲೇ ಸಚಿವ ಸುರೇಶ್ ಕುಮಾರ್ ಪತ್ರ..!

ಜೂನ್ 12 ರ ಒಳಗೆ ಅಭಿಪ್ರಾಯ ಸಂಗ್ರಹಿಸಿ ಇಲಾಖೆಗೆ ವರದಿ ಸಲ್ಲಿಸಲು ಸೂಚನೆ ನೀಡಲಾಗಿದ್ದು, ಶಾಲೆಗಳನ್ನ ಪುನಾರಂಭ ಮಾಡಬಹುದಾದ ದಿನಾಂಕ ಕುರಿತು, ಶಾಲೆಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ವಿಧಾನದ ಬಗ್ಗೆ, ಶಾಲೆಗಳಲ್ಲಿ ಕೈಗೊಳ್ಳಬೇಕಾದ ಸುರಕ್ಷತಾ ಕ್ರಮಗಳ ಬಗ್ಗೆ Sdmc ಸದಸ್ಯರು ಹಾಗೂ ಪೋಷಕರಿಂದ ಅಭಿಪ್ರಾಯ ಸಂಗ್ರಹಿಸಲು ಸೂಚನೆ ನೀಡಲಾಗಿದೆ.

ಎಸ್ಸೆಸ್ಸೆಲ್ಸಿ ಪರೀಕ್ಷೆ: ಗೃಹ ಇಲಾಖೆಯೊಂದಿಗಿನ ಮಹತ್ವದ ಸಭೆಯಲ್ಲಿ ಏನೇನಾಯ್ತು..?

ವರದಿ ಬಂದ ನಂತರ ಶಾಲಾ ಪುನಾರಂಭದ ಬಗ್ಗೆ ದಿನಾಂಕ ಹಾಗೂ ಇತರ ವಿಚಾರ ಸಂಬಂಧಿಸಿ ಸ್ಪಷ್ಟನೆ ಸಿಗಲಿದೆ ಎಂದು ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಸುರೇಶ್ ಕುಮಾರ್ ಮಾಹಿತಿ ನೀಡಿದ್ದಾರೆ.

ಆನ್‌ಲೈನ್‌ನಲ್ಲಿ ಪೋ‍‍ಷಕರ ಸಹಿ ಸಂಗ್ರಹ

ಜುಲೈನಲ್ಲಿ ಶಾಲೆ ಆರಂಭಕ್ಕೆ ಪೋಷಕರ ತೀವ್ರ ವಿರೋಧ ಎದುರಾಗಿದ್ದು, ಆನ್ ಲೈನ್ ಅರ್ಜಿಗೆ ಲಕ್ಷಾಂತರ ಪೋಷಕರ ಸಹಿ ಸಂಗ್ರಹಿಸಲಾಗಿದೆ. 72 ಗಂಟೆಯಲ್ಲಿ ಮೂರೂವರೆ ಲಕ್ಷಕ್ಕೂ ಅಧಿಕ ಅಭಿಪ್ರಾಯ ಸಂಗ್ರಹವಾಗಿದ್ದು, change.org ಎಂಬ ಆನ್ ಲೈನ್ ವೇದಿಕೆ ಮೂಲಕ ಸಹಿ ಸಂಗ್ರಹಿಸಲಾಗುತ್ತಿದೆ.

"

ಮಂಗಳೂರು ಸೇರಿ ರಾಜ್ಯದ ಹಲವಾರು ಪೋಷಕರಿಂದ ಅಭಿಯಾನಕ್ಕೆ ಬೆಂಬಲ ವ್ಯಕ್ತವಾಗಿದ್ದು, ಪೇರೆಂಟ್ಸ್ ಅಸೋಸಿಯೇಷನ್ ಎಂಬ ಹೆಸರಿನಲ್ಲಿ ಸಹಿ ಸಂಗ್ರಹ ಅಭಿಯಾನ ನಡೆಸಲಾಗುತ್ತಿದೆ.

ಕೋವಿಡ್ ಆತಂಕದ ಮಧ್ಯೆ ಜುಲೈನಲ್ಲಿ ಶಾಲೆ ಆರಂಭಕ್ಕೆ ವಿರೋಧ ವ್ಯಕ್ತವಾಗಿದ್ದು, ಮೂರೇ ದಿನಗಳಲ್ಲಿ ‌ಕರ್ನಾಟಕ ಹೊರತುಪಡಿಸಿ ಅಭಿಯಾನ ದೇಶಾದ್ಯಂತ ನಡೆಯುತ್ತಿದೆ. ಪ್ರತೀ ನಿಮಿಷಕ್ಕೂ ಹಲವರಿಂದ ಶಾಲೆ ಆರಂಭ ವಿರೋಧಿಸಿ ಸಹಿ ದಾಖಲಾಗುತ್ತಿದೆ.

ಈಗಾಗಲೇ ಪೋಷಕರ ಸಹಿ ಸಂಗ್ರಹಕ್ಕೆ ಆಯಾ ರಾಜ್ಯಗಳಿಗೆ ಸೂಚಿಸಿರುವ ಕೇಂದ್ರ ಇದಕ್ಕೂ ಮೊದಲೇ ಆನ್ ಲೈನ್ ವೇದಿಕೆಗಳಲ್ಲಿ ಸಹಿ ಸಂಗ್ರಹಿಸಲಾಗುತ್ತಿದೆ.
ಶಿಕ್ಷಣ ಇಲಾಖೆಯಿಂದಲೂ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳ ಪುನಾರಂಭದ ಬಗ್ಗೆ ವರದಿ ನೀಡಲು ಸೂಚನೆ ನೀಡಲಾಗಿದೆ. ಮುಖ್ಯೋಪಾಧ್ಯಾಯರಿಗೆ ಸ್ಥಳಿಯ sdmc ಸದಸ್ಯರು ಹಾಗೂ ಪೋಷಕರಿಂದ ಅಭಿಪ್ರಾಯ ಸಂಗ್ರಹಕ್ಕೆ ಸೂಚನೆ ನೀಡಲಾಗಿದ್ದು, ಅಭಿಪ್ರಾಯ ಸಂಗ್ರಹಿಸಿ ಶಾಲೆಗಳ ಪುನಾರಂಭದ ಬಗ್ಗೆ ನಿರ್ಧಾರ ಮಾಡಲಾಗುತ್ತದೆ.

click me!