ರಾಜ್ಯದ ಗಡಿ ಮುಚ್ಚಿರುವುದರಿಂದ ಗಡಿ ಪ್ರದೇಶದಲ್ಲಿ ದಿನನಿತ್ಯ ನೆರೆ ರಾಜ್ಯಕ್ಕೆ ಓಡಾಡುತ್ತಿದ್ದ ಜನರಿಗೆ ತೊಂದರೆಯಾಗಿದೆ. ಶಿಕ್ಷಣ, ಉದ್ಯೋಗಗಳಿಗಾಗಿ ನೆರೆ ರಾಜ್ಯವನ್ನೇ ಅವಲಂಬಿಸಿರುವವರಿಗಾಗಿ ಪಾಸ್ ನೀಡುವ ಬಗ್ಗೆ ಚಿಂತಿಸಲಾಗಿದೆ.
ಮಂಗಳೂರು(ಜೂ. 02): ರಾಜ್ಯದ ಗಡಿ ಮುಚ್ಚಿರುವುದರಿಂದ ಗಡಿ ಪ್ರದೇಶದಲ್ಲಿ ದಿನನಿತ್ಯ ನೆರೆ ರಾಜ್ಯಕ್ಕೆ ಓಡಾಡುತ್ತಿದ್ದ ಜನರಿಗೆ ತೊಂದರೆಯಾಗಿದೆ. ಶಿಕ್ಷಣ, ಉದ್ಯೋಗಗಳಿಗಾಗಿ ನೆರೆ ರಾಜ್ಯವನ್ನೇ ಅವಲಂಬಿಸಿರುವವರಿಗಾಗಿ ಪಾಸ್ ನೀಡುವ ಬಗ್ಗೆ ಚಿಂತಿಸಲಾಗಿದೆ.
ಕಾಸರಗೋಡು ಕನ್ನಡಿಗರು ಮಂಗಳೂರು ಗಡಿ ಪ್ರವೇಶಕ್ಕೆ ಅನುಮತಿ ವಿಚಾರವಾಗಿ ಕಾಂಗ್ರೆಸ್ ನಿಯೋಗದ ಮನವಿ ಬಳಿಕ ದ.ಕ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಹೇಳಿಕೆ ನೀಡಿದ್ದಾರೆ. ಮಾಜಿ ಸಚಿವ ಯು. ಟಿ. ಖಾದರ್ ಅವರು ಉಸ್ತುವಾರಿ ಸಚಿವರನ್ನು ಭೇಟಿಯಾಗಿ ಮನವಿ ಸಲ್ಲಿಸಿದ್ದರು.
undefined
ಡಿಸಿಗಳ ಈಗೋ ಸಮಸ್ಯೆಯಿಂದ ಕನ್ನಡಿಗರ ಬದುಕು ಅತಂತ್ರ: ಯುಟಿ ಖಾದರ್
ಕಾಸರಗೋಡು ಮತ್ತು ಮಂಗಳೂರು ಭಾವನಾತ್ಮಕ, ವ್ಯವಹಾರಿಕ ಸಂಬಂಧ ಹೊಂದಿರೋ ಪ್ರದೇಶ. ಅಲ್ಲಿನ ವಿದ್ಯಾರ್ಥಿಗಳು, ಸರ್ಕಾರಿ ನೌಕರರು, ಕಾರ್ಮಿಕರು ಇಲ್ಲಿ ಬರೋದು, ಅಲ್ಲಿ ಹೋಗೋದು ರೂಢಿ. ಹೀಗಾಗಿ ಲಾಕ್ ಡೌನ್ ಹಿನ್ನೆಲೆ ಎರಡೂ ಕಡೆ ಸಮಸ್ಯೆ ಆಗಿದೆ ಎಂದು ಸಚಿವ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.
ಈ ಬಗ್ಗೆ ರಾಜ್ಯದ ಮುಖ್ಯ ಕಾರ್ಯದರ್ಶಿ ವಿಜಯ ಭಾಸ್ಕರ್ ಜೊತೆ ಮಾತನಾಡಿದ್ದೇನೆ. ಎರಡೂ ಜಿಲ್ಲೆಯ ಜಿಲ್ಲಾಧಿಕಾರಿಗಳ ಜೊತೆ ಚರ್ಚೆ ಮಾಡಿ ಅಂದಿದ್ದೇನೆ. ಕಾಸರಗೋಡಿನಿಂದ ಇಲ್ಲಿಗೆ ಬರೋರಿಗೆ, ಇಲ್ಲಿಂದ ಅಲ್ಲಿಗೆ ಹೋಗೋರಿಗೆ ಪಾಸ್ ಬಗ್ಗೆ ಚರ್ಚಿಸಿದ್ದೇನೆ. ಅವರ ಉದ್ಯೋಗ ಪಾಸ್ ಗಳ ಮಾನ್ಯತೆ ಅಥವಾ ಹೊಸ ಪಾಸ್ ಕೊಡೋ ಬಗ್ಗೆ ಗಮನ ಹರಿಸಬೇಕು ಸಲಹೆಗೆ ಒಪ್ಪಿಕೊಂಡು ಎರಡೂ ಡಿಸಿಗಳ ಜೊತೆ ಮಾತುಕತೆ ನಡೆಸೋದಾಗಿ ಹೇಳಿದ್ದಾರೆ. ಇವತ್ತು ಸಂಜೆಯೊಳಗೆ ಈ ಸಮಸ್ಯೆ ಪರಿಹರಿಸುವ ಭರವಸೆ ನೀಡಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಕಾಡಿನಿಂದ ಕೆಟ್ಟ ವಾಸನೆ, ನೋಡಲು ಹೋದವರಿಗೆ ಕಂಡಿದ್ದು 110 ಆನೆಗಳ ಕೊಳೆತ ಶವ!
ಸಾವಿರಾರು ಜನ ನಿತ್ಯಬ ಕಾಸರಗೋಡು, ಮಂಗಳೂರಿಗೆ ಸಂಚರಿಸುತ್ತಿದ್ದು, ಶಿಕ್ಷಣಕ್ಕಾಗಿಯೂ, ಉದ್ಯೋಗಕ್ಕಾಗಿ ಪರಸ್ಪರ ಎರಡೂ ಗಡಿ ಜಿಲ್ಲೆಯಲ್ಲಿ ಜನರು ಓಡಾಡುತ್ತಲೇ ಇರುತ್ತಾರೆ.