ಕೋವಿಡ್ ನಿಯಮ ಉಲ್ಲಂಘಿಸಿದ ಸಚಿವ ಸೋಮಶೇಖರ್ : ಜನಪ್ರತಿನಿಧಿಗಳಿಗೊಂದು ನ್ಯಾಯವೇ..?

Sujatha NR   | Asianet News
Published : Aug 21, 2021, 11:15 AM IST
ಕೋವಿಡ್ ನಿಯಮ ಉಲ್ಲಂಘಿಸಿದ ಸಚಿವ ಸೋಮಶೇಖರ್ : ಜನಪ್ರತಿನಿಧಿಗಳಿಗೊಂದು ನ್ಯಾಯವೇ..?

ಸಾರಾಂಶ

ಜನಪ್ರತಿನಿಧಿಗಳಿಂದಲೇ ಪದೇಪದೇ ಕೋವಿಡ್ ಮಾರ್ಗಸೂಚಿ ಉಲ್ಲಂಘನೆಯಾಗುತ್ತಿದೆ ಅನೇಕ ರಾಜಕೀಯ ಮುಖಂಡರುಗಳೂ ಕೊವಿಡ್ ನಿಯಮಗಳನ್ನು ಮುರಿಯುತ್ತಿರುವುದು ಬೆಳಕಿಗೆ ಸಹಕಾರ ಸಚಿವ ಸೋಮಶೇಖರ್ ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ಭೇಟಿ ನೀಡಿದ್ದು ಕೋವಿಡ್ ರೂಲ್ಸ್ ಬ್ರೇಕ್ 

 ಚಾಮರಾಜನಗರ (ಆ.21):  ಜನಪ್ರತಿನಿಧಿಗಳಿಂದಲೇ ಪದೇಪದೇ ಕೋವಿಡ್ ಮಾರ್ಗಸೂಚಿ ಉಲ್ಲಂಘನೆಯಾಗುತ್ತಿದೆ.  ಅನೇಕ ರಾಜಕೀಯ ಮುಖಂಡರುಗಳೂ ಕೊವಿಡ್ ನಿಯಮಗಳನ್ನು ಮುರಿಯುತ್ತಿರುವುದು ಬೆಳಕಿಗೆ ಬಂದಿದೆ. 

ವೀಕೆಂಡ್ ನಲ್ಲಿ ದೇವಸ್ಥಾನ ಗಳಿಗೆ ಪ್ರವೇಶ ನಿಷಿದ್ಧವಾದರು  ಸಹಕಾರ ಸಚಿವ ಸೋಮಶೇಖರ್ ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ಭೇಟಿ ನೀಡಿದ್ದು ಕೋವಿಡ್ ರೂಲ್ಸ್ ಬ್ರೇಕ್ ಮಾಡಿದ್ದಾರೆ.

2 ಡೋಸ್‌ ಲಸಿಕೆ ಪಡೆದ 87 ಸಾವಿರ ಜನರಿಗೆ ಕೊರೋನಾ

ಚಾಮರಾಜನಗರ ಉಸ್ತುವಾರಿ ಸಚಿವರಾದ ಸೋಮಶೇಖರ್ ಇಂದು ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ತೆರಳಿದ್ದು ಜನಾಕ್ರೋಶಕ್ಕೆ ಕಾರಣವಾಗಿದೆ. ಇವರ ನಡೆಯು ಜನಪ್ರತಿನಿಧಿಗಳಿಗೊಂದು ಕಾನೂನು,  ಜನಸಾಮಾನ್ಯರಿಗೊಂದು ಕಾನೂನು ಎನ್ನುವಂತಾಗಿದೆ.

ಇಂದು ಚಾಮರಾಜನಗರ ಜಿಲ್ಲೆಗೆ ಭೇಟಿ ನೀಡಿರುವ ಸಚಿವರು ಜಿಲ್ಲಾ ಪ್ರವಾಸ ಆರಂಭಿಸುವ ಮೊದಲೇ ಗೋಪಲಾಸ್ವಾಮಿ ಬೆಟ್ಟಕ್ಕೆ ತೆರಳಿದ್ದರು. ಜಿಲ್ಲೆಯ ಕೋವಿಡ್ ನಿರ್ವಹಣೆ ಉಸ್ತುವಾರಿ ಹೊತ್ತಿರುವ ಸಚಿವರೇ ನಿಯಮ ಮುರಿದಿದ್ದಾರೆ.   

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona 

PREV
click me!

Recommended Stories

ಕಂದನ ಸ್ನಾನ ಮಾಡಿಸಲು ಹೋದಾಗ ದುರ್ಘಟನೆ, ಗೀಸರ್ ಸೋರಿಕೆಯಿಂದ ತಾಯಿ-ಮಗು ಸಾವು
'ಕುಡುಕರ ಲಿವರ್‌ಗೆ ಸರ್ಕಾರದ ಗ್ಯಾರಂಟಿ ಕೊಡಿ..' ಅಬಕಾರಿ ಆದಾಯ ಹೆಚ್ಚಿಸಲು ಖತರ್ನಾಕ್‌ ಐಡಿಯಾ ಕೊಟ್ಟ ಬಿಜೆಪಿ MLC