ಸಂಪು​ಟ​ದಲ್ಲಿ ಹಿಂದು​ಳಿ​ದ​ವ​ರಿಗೆ ಆದ್ಯ​ತೆ ನೀಡಿದ ಪ್ರಧಾನಿ ಮೋದಿ: ಉದಾಸಿ

By Kannadaprabha News  |  First Published Aug 21, 2021, 11:09 AM IST

*  ಜಲಜೀವನ್ ಯೋಜ​ನೆಗೆ ಚಾಲನೆ ನೀಡಿದ ಸಂಸದ ಶಿವಕುಮಾರ ಉದಾಸಿ
*  ಕೊರೋನಾ ಆತಂಕದ ನಡುವೆಯೂ ಸರ್ವಾಂಗೀಣ ಅಭಿವೃದ್ಧಿ
*  ಎಲ್ಲ ಜನಾಂಗಗಳ ಅಭಿವೃದ್ಧಿಗೆ ದೊಡ್ಡ ಅವಕಾಶ ಸಿಕ್ಕಿದೆ 


ಹಾನಗಲ್ಲ(ಆ.21): ದೇಶದಲ್ಲಿ ಅತೀ ಹಿಂದುಳಿದ, ಪರಿಶಿಷ್ಟಜಾತಿ, ಪರಿಶಿಷ್ಟ ಪಂಗಡ, ಅಲ್ಪಸಂಖ್ಯಾತ ಜನಾಂಗಕ್ಕೆ ಮಂತ್ರಿಮಂಡಲದಲ್ಲಿ ರಾಜಕೀಯ ಸ್ಥಾನಮಾನ ನೀಡಿ ಶಕ್ತಿ ತುಂಬಿ ಅಮೂಲಾಗ್ರ ಬದಲಾವಣೆ ತಂದವರು ಪ್ರಧಾನಮಂತ್ರಿ ನರೇಂದ್ರ ಮೋದಿ ಎಂದು ಸಂಸದ ಶಿವಕುಮಾರ ಉದಾಸಿ ಹೇಳಿದ್ದಾರೆ. 

ತಾಲೂಕಿನ ಜಾನಗುಂಡಿಕೊಪ್ಪ ಗ್ರಾಮದಲ್ಲಿ 40 ಲಕ್ಷ ರು. ವೆಚ್ಚದಲ್ಲಿ ಆದರ್ಶಗ್ರಾಮ ಯೋಜನೆ, 6 ಲಕ್ಷ ರು. ವೆಚ್ಚದಲ್ಲಿ ಅಲ್ಪಸಂಖ್ಯಾತರ ಕಾಲನಿಯಲ್ಲಿ ಸಿಸಿ ರಸ್ತೆ ಕಾಮಗಾರಿ, ರತ್ನಾಪುರದಲ್ಲಿ 40 ಲಕ್ಷ ರು. ವೆಚ್ಚದಲ್ಲಿ ಆದರ್ಶ ಗ್ರಾಮ ಯೋಜನೆ ಕರಗುದರಿ ಗ್ರಾಮದಲ್ಲಿ 55 ಲಕ್ಷ ರು. ವೆಚ್ಚದಲ್ಲಿ ಜಲಜೀವನ್‌ ಮಿಶನ್‌ ಯೋಜನೆಗೆ ಚಾಲನೆ ನೀಡಿ, ಯಳವಟ್ಟಿಗ್ರಾಮದಲ್ಲಿ 11 ಲಕ್ಷ ರು. ವೆಚ್ಚದಲ್ಲಿ ನಿರ್ಮಾಣಗೊಂಡ ಪ್ರಾಥಮಿಕ ಶಾಲಾ ಕೊಠಡಿ, 16 ಲಕ್ಷ ರು. ವೆಚ್ಚದಲ್ಲಿ ಅಂಗನವಾಡಿ ಕೇಂದ್ರ, ನಿಟಗಿನಕೊಪ್ಪ ಗಾಮದಲ್ಲಿ 22 ಲಕ್ಷ ರು. ವೆಚ್ಚದಲ್ಲಿ 2 ಪ್ರಾಥಮಿಕ ಶಾಲಾ ಕೊಠಡಿ, 16 ಲಕ್ಷ ರು. ವೆಚ್ಚದಲ್ಲಿ ಅಂಗನವಾಡಿ ಕೇಂದ್ರ, ಕರಗುದರಿ ಗ್ರಾಮದಲ್ಲಿ 11 ಲಕ್ಷ ರು. ವೆಚ್ಚದಲ್ಲಿ ಪ್ರಾಥಮಿಕ ಶಾಲಾ ಕೊಠಡಿಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು.

Latest Videos

undefined

ಕೇಂದ್ರ ಸಂಪುಟದಲ್ಲಿ 12 ಎಸ್‌ಸಿ, 8 ಎಸ್‌ಟಿ, 12 ಮಹಿಳೆಯರಿಗೆ ಸಂಪುಟದಲ್ಲಿ ಸ್ಥಾನಮಾನ ನೀಡಿ ಸಾರ್ವಕಾಲಿಕ ದಾಖಲೆ ನಿರ್ಮಿಸಿದ್ದಾರೆ. ಪರಿಶಿಷ್ಟಜಾತಿ ಜನಾಂಗ ಶೇ. 50ಕ್ಕಿಂತ ಅಧಿಕ ಇರುವ ಗ್ರಾಮಗಳ ಸರ್ವಾಂಗೀಣ ಅಭಿವೃದ್ಧಿಗೆ ಪ್ರಧಾನಮಂತ್ರಿ ಆದರ್ಶ ಗ್ರಾಮ ಯೋಜನೆ ಜಾರಿಗೊಳಿಸಿ 40 ಲಕ್ಷ ರು. ವೆಚ್ಚದಲ್ಲಿ ಸಿಸಿ ರಸ್ತೆ, ಡ್ರೈನೇಜ್‌, ಅಂಗನವಾಡಿ, ಹೈಮಾಸ್ಕ್‌ ದೀಪ, ಸೋಲಾರ ದೀಪ ಮುಂತಾದ ಮೂಲಭೂತ ಸೌಲಭ್ಯಗಳನ್ನು ಒದಗಿಸಿ ಆದರ್ಶ ಗ್ರಾಮವನ್ನಾಗಿಸುವ ಕನಸು ಹೊಂದಿದ್ದಾರೆ. ಸ​ರ್ಕಾ​ರದ ಯೋಜನೆಗಳನ್ನು ಲಂಬಾಣಿ ಜನಾಂಗ ಸದ್ಬಳಕೆ ಮಾಡಿಕೊಂಡು ಸಾಮಾಜಿಕವಾಗಿ, ಆರ್ಥಿಕವಾಗಿ, ಶೈಕ್ಷಣಿಕವಾಗಿ ಮುಖ್ಯವಾಹಿನಿಗೆ ಬರುವ ಮೂಲಕ ಯೋಜನೆಗಳ ಯಶಸ್ಸಿಗೆ ಕಾರಣರಾಗಿದ್ದಾರೆ ಎಂದ ಶಿವಕುಮಾರ ಉದಾಸಿ, ಗುಂಡೂರು ಬಾದಾಮಗಟ್ಟಿರಸ್ತೆ ಹದಗೆಟ್ಟಿದ್ದು, 1.30 ಕೋಟಿ ರು. ವೆಚ್ಚದಲ್ಲಿ ಸುಧಾರಣೆ ಕಾಮಗಾರಿ ನಡೆಸಲಾಗುವುದು. ಇಡಿ ಜಿಲ್ಲೆಯಲ್ಲಿ ಕೊರೋನಾ ಆತಂಕದ ನಡುವೆಯೂ ಸರ್ವಾಂಗೀಣ ಅಭಿವೃದ್ಧಿ ಆಗುತ್ತಿದೆ ಎಂದರು.

CM ಉದಾಸಿ ಜೊತೆಗಿನ ಆ ದಿನಗಳನ್ನ ಮೆಲುಕು ಹಾಕಿದ ಗೃಹ ಸಚಿವ

ಮಾಜಿ ತಾಪಂ ಅಧ್ಯಕ್ಷ ಚಂದ್ರಪ್ಪ ಹರಿಜನ ಮಾತನಾಡಿ, ಮಾಜಿ ಸಚಿವ, ದಿ. ಸಿ.ಎಂ. ಉದಾಸಿ ಅವರು ಹಾನಗಲ್ಲ ತಾಲೂಕಿನ ಸರ್ವತೋಮುಖ ಅಭಿವೃದ್ಧಿಯಲ್ಲಿ ಹಗಲಿರುಳು ಕಾಳಜಿವಹಿಸಿ ಕೆಲಸ ಮಾಡಿದ್ದರಿಂದ ಎಲ್ಲ ಜನಾಂಗಗಳ ಅಭಿವೃದ್ಧಿಗೆ ದೊಡ್ಡ ಅವಕಾಶ ಸಿಕ್ಕಿದೆ. ಅದರಲ್ಲೂ ಹಿಂದುಳಿದ ವರ್ಗಗಳ ಅಭಿವೃದ್ಧಿ, ವಿಶೇಷವಾಗಿ ತಾಂಡಾ ಜನಾಂಗಗಳ ಶೈಕ್ಷಣಿಕ, ಆರ್ಥಿಕ, ಸಾಮಾಜಿಕ ಅಭಿವೃದ್ಧಿಗೆ ಅವರ ಕೊಡುಗೆ ಸ್ಮರಣೀಯವಾದುದು. ಈ ಕಾರಣದಿಂದ ಈ ಸಮುದಾಯಗಳಲ್ಲಿ ಯುವಕರು ಉನ್ನತ ಶಿಕ್ಷಣ ಪಡೆದು ಅತ್ಯುನ್ನತ ಹುದ್ದೆಗಳಲ್ಲಿ ಸೇವೆ ಸಲ್ಲಿಸುವಂತಾಗಿರುವುದು ಉದಾಸಿಯವರ ಸ್ಮರಣೀಯ ಸಂಗತಿ ಎಂದರು.

ಈ ಸಂದರ್ಭದಲ್ಲಿ ಪದ್ಮನಾಭ ಕುಂದಾಪೂರ, ಚಂದ್ರಪ್ಪ ಹರಿಜನ, ಪ್ರಶಾಂತ ಪೂಜಾರ, ಗಣೇಶ ಮೂಡ್ಲಿ, ರವಿ ಪೂಜಾರ, ಇಸೂಫಸಾಬ್‌ ಡೊಳ್ಳೇಶ್ವರ, ಚಂಪಾ ಲಮಾಣಿ, ಸಿದ್ದು ಪಾಟೀಲ, ಬಂಗಾರಪ್ಪ ಕಾಮನಹಳ್ಳಿ, ರಮೇಶ ಕಳಸೂರ, ಶಿವಲಿಂಗಪ್ಪ ತಲ್ಲೂರ, ಸಂತೋಷ ಟೀಕೋಜಿ, ಭಾಸ್ಕರ್‌ ಹುಲ್ಮನಿ, ಸಂತೋಷ ಭಜಂತ್ರಿ, ಪ್ರಶಾಂತ ಗೊಂದಿ ಮೊದಲಾದವರು ಇದ್ದರು.
 

click me!