ಜೋಗಕ್ಕೆ ಅಕ್ರಮ ಪ್ರವೇಶಕ್ಕೆ ಅವಕಾಶ : 7 ಸೆಕ್ಯೂರಿಟಿ ಗಾರ್ಡ್‌ಗಳ ವಿರುದ್ದ ಕೇಸ್

By Suvarna NewsFirst Published Aug 21, 2021, 10:42 AM IST
Highlights
  • ಜೋಗ ಜಲಪಾತ ವೀಕ್ಷಿಸಲು ಅಕ್ರಮವಾಗಿ ಪ್ರವಾಸಿಗರಿಗೆ ಅವಕಾಶ
  • ಸೆಕ್ಯುರಿಟಿ ಗಾರ್ಡ್ ಗಳ ಮೇಲೆ ಕ್ರಮ ಕೈಗೊಂಡು ಪ್ರಕರಣ
  • 19 ನಿಯಮಾವಳಿ ಉಲ್ಲಂಘನೆಯ ಪ್ರಕರಣ ದಾಖಲು ಮಾಡಲಾಗಿದೆ

ಶಿವಮೊಗ್ಗ (ಆ.21):   ಜೋಗ ಜಲಪಾತ ವೀಕ್ಷಿಸಲು ಅಕ್ರಮವಾಗಿ ಪ್ರವಾಸಿಗರಿಗೆ ಅವಕಾಶ ನೀಡುತ್ತಿದ್ದ ಸೆಕ್ಯೂರಿಟಿ ಗಾರ್ಡ್ ಗಳ ಮೇಲೆ ಕ್ರಮ ಕೈಗೊಂಡು ಪ್ರಕರಣ ದಾಖಲಿಸಲಾಗಿದೆ. 

ಡಿಸಿ ಸೂಚನೆ ಮೇರೆಗೆ ಜೋಗ ಜಲಪಾತ ಪೊಲೀಸ್ ಠಾಣೆಯ ಪಿಎಸ್‌ಐ ನಿರ್ಮಲ ಪ್ರಕರಣ ದಾಖಲು ಮಾಡಿದ್ದಾರೆ. 

ಇಲ್ಲಿನ ಸೆಕ್ಯೂರಿಟಿ ಗಾರ್ಡ್ಗಳಾದ ಚಂದ್ರಶೇಖರ,  ಮಂಜುನಾಥ,  ಕೃಷ್ಣಪ್ಪ,  ಮಂಜುನಾಥ, ರಾಕೇಶ್ , ಪ್ರಭುದಾಸ್ , ಸಂಜು ವಿರುದ್ಧ  ಕೋವಿಡ್ -19 ನಿಯಮಾವಳಿ ಉಲ್ಲಂಘನೆಯ ಪ್ರಕರಣ ದಾಖಲು ಮಾಡಲಾಗಿದೆ.

2 ಡೋಸ್‌ ಲಸಿಕೆ ಪಡೆದ 87 ಸಾವಿರ ಜನರಿಗೆ ಕೊರೋನಾ

ಜೋಗ ಜಲಪಾತ ವೀಕ್ಷಣೆಗೆ RTPCR ನೆಗೆಟಿವ್ ಅಥವಾ RAT ಅಥವ ಲಸಿಕೆ ಎರಡು ಡೋಸ್ ನ ವರದಿ ಈ ಮೂರರಲ್ಲಿ ಒಂದು ವರದಿ ನೀಡುವ ಪ್ರಯಾಣಿರಿಗೆ ಮಾತ್ರ ಜೋಗ ವೀಕ್ಷಣೆಗೆ ಅವಕಾಶವಿತ್ತು. 

 ಈ ಬಗ್ಗೆ ಜಿಲ್ಲಾಧಿಕಾರಿಗಳ ಆದೇಶವಿದ್ದರೂ ಅಲ್ಲಿನ ಸೆಕ್ಯೂರಿಟಿಗಳು ಹಣದ ಆಸೆಗೆ ಸಾರ್ವಜನಿಕರನ್ನ ವೀಕ್ಷಿಸಲು ಬಿಟ್ಟ ಪ್ರಕರಣ ಬೆಳಕಿಗೆ ಬಂದಿದೆ.  ಸೆಕ್ಯೂರಿಟಿ ಲಂಚದ ಆಸೆಗೆ ಪ್ರವಾಸಿಗರಿಗೆ ಜೋಗ ಜಲಪಾತ ವೀಕ್ಷಣೆಗೆ ಅವಕಾಶ ಕಲ್ಪಿಸುತ್ತಾರೆ ಎಂದು ಆರೋಪಿಸಿ ಡಿಸಿಗೆ ಸ್ಥಳೀಯರು ದೂರು ನೀಡಿದ್ದರು.

ಈ ಹಿನ್ನಲೆಯಲ್ಲಿ ಡಿಸಿ ಸ್ಕ್ವಾಡ್ ನಿನ್ನೆ ಜೋಗಕ್ಕೆ ಭೇಟಿ ನೀಡಿ ಏಳು ಜನರ ವಿರುದ್ಧ  ಪ್ರಕರಣ ದಾಖಲಿಸಲು ಸೂಚನೆ ನೀಡಿದ್ದರಿಂದ ಕ್ರಮ ಕೈಗೊಳ್ಳಲಾಗಿದೆ. 

click me!