‘ಉದ್ವೇಗದಲ್ಲಿ ಶಾಸಕರು ರಾಜೀನಾಮೆ ಹೇಳಿಕೆ ನೀಡಿದ್ದಾರೆ'

Kannadaprabha News   | Asianet News
Published : Jun 30, 2021, 08:17 AM ISTUpdated : Jun 30, 2021, 08:30 AM IST
‘ಉದ್ವೇಗದಲ್ಲಿ ಶಾಸಕರು ರಾಜೀನಾಮೆ ಹೇಳಿಕೆ ನೀಡಿದ್ದಾರೆ'

ಸಾರಾಂಶ

ಮಾಜಿ ಸಚಿವ ರಮೇಶ್‌ ಜಾರಕಿಹೊಳಿ ತಮ್ಮ ಶಾಸಕತ್ವಕ್ಕೆ ರಾಜೀನಾಮೆ ವಿಚಾರ ಶಾಸಕತ್ವಕ್ಕೆ ರಾಜೀನಾಮೆ ನೀಡುವಂತಹ ಪರಿಸ್ಥಿತಿ ಉದ್ಭವವಾಗಿಲ್ಲ ಯಾವುದೇ ಕಾರಣಕ್ಕೂ ಅವರು ರಾಜೀನಾಮೆ ನೀಡುವುದಿಲ್ಲ

ಶಿರಸಿ (ಜೂ.30): ಮಾಜಿ ಸಚಿವ ರಮೇಶ್‌ ಜಾರಕಿಹೊಳಿ ತಮ್ಮ ಶಾಸಕತ್ವಕ್ಕೆ ರಾಜೀನಾಮೆ ನೀಡುವಂತಹ ಪರಿಸ್ಥಿತಿ ಉದ್ಭವವಾಗಿಲ್ಲ. ಯಾವುದೇ ಕಾರಣಕ್ಕೂ ಅವರು ರಾಜೀನಾಮೆ ನೀಡುವುದಿಲ್ಲ ಎಂದು ಕಾರ್ಮಿಕ ಇಲಾಖೆ ಸಚಿವ ಶಿವರಾಮ ಹೆಬ್ಬಾರ್‌ ಹೇಳಿದ್ದಾರೆ. 

ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ಜಾರಕಿಹೊಳಿ ನನ್ನ ಪರಮಾಪ್ತ ಸ್ನೇಹಿತ. ಉದ್ವೇಗಕ್ಕೆ ಒಳಗಾಗಿ ಅವರು ರಾಜೀನಾಮೆ ಬಗ್ಗೆ ಪ್ರಸ್ತಾಪಿಸಿರಬಹುದು. ಆದರೆ, ರಾಜೀನಾಮೆ ನೀಡದಂತೆ ತಿಳಿಸಿದ್ದೇವೆ’ ಎಂದರು.

ನಮ್ಮ ಬೆಂಬಲ ರಮೇಶ್ ಜಾರಕಿಹೊಳಿಗೆ : ಸಚಿವ .

ಮುಖ್ಯಮಂತ್ರಿ ಸ್ಥಾನದ ಕುರಿತಂತೆ ಆರೋಗ್ಯ ಸಚಿವ ಸುಧಾಕರ ಅವರ ಹೇಳಿಕೆ ಕುರಿತು ಪ್ರಸ್ತಾಪಿಸಿದ ಹೆಬ್ಬಾರ್‌, ಮುಂದಿನ ಎರಡೂವರೆ ವರ್ಷಗಳ ಬಳಿಕ ಯಾವ ಪರಿಸ್ಥಿತಿ ಇರಲಿದೆ ಎಂಬುದನ್ನು ಈಗಲೇ ಭವಿಷ್ಯ ನುಡಿಯಲು ಸಾಧ್ಯವಿಲ್ಲ. 

ಈಗ ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗಿದ್ದು ಅವಧಿ ಸಂಪೂರ್ಣಗೊಳಿಸಲಿದ್ದಾರೆ. ನಾನು ಮುಖ್ಯಮಂತ್ರಿ ಆಗುವ ಯಾವುದೇ ಪ್ರಸ್ತಾಪ ಇಲ್ಲ, ನನ್ನ ಇತಿಮಿತಿ ಅರಿತು ನಡೆಯುತ್ತೇನೆ ಹೊರತೂ ಪ್ರಚಾರ ಪಡೆಯಲು ನಾನು ಸಿದ್ಧನಿಲ್ಲ ಎಂದರು.

PREV
click me!

Recommended Stories

ದ್ವೇಷ ಭಾಷಣ ಪ್ರಕರಣ; ಆರ್‌ಎಸ್‌ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್‌ಗೆ ನಿರೀಕ್ಷಣಾ ಜಾಮೀನು!
Uttara Kannada: ಆಸ್ಪತ್ರೆಗೆ ಹೋಗಿದ್ದ ಗರ್ಭಿಣಿ ಹುಟ್ಟುಹಬ್ಬದಂದೇ ಸಾವು; ಹೊಟ್ಟೆಯಲ್ಲೇ ಅಸುನೀಗದ ಮಗು!