ಪಕ್ಷಕ್ಕೆ ಮುಜುಗರ ತರುವಂತ ಹೇಳಿಕೆ ನೀಡಬಾರದು: ವಿಶ್ವನಾಥ್‌ ಹೇಳಿಗೆ ಹೆಬ್ಬಾರ್‌ ಅಸಮಾಧಾನ

Suvarna News   | Asianet News
Published : Aug 28, 2020, 03:44 PM ISTUpdated : Aug 28, 2020, 09:11 PM IST
ಪಕ್ಷಕ್ಕೆ ಮುಜುಗರ ತರುವಂತ ಹೇಳಿಕೆ ನೀಡಬಾರದು: ವಿಶ್ವನಾಥ್‌ ಹೇಳಿಗೆ ಹೆಬ್ಬಾರ್‌ ಅಸಮಾಧಾನ

ಸಾರಾಂಶ

ಟಿಪ್ಪು ಸುಲ್ತಾನ್ ಈ ನೆಲದ ಮಗ, ವೀರ ಹೋರಾಟಗಾರ ಎಂದು ಹೇಳಿದ ಎಚ್. ವಿಶ್ವನಾಥ್‌| ಬಿಜೆಪಿ‌ ನಿಲುವು ನನ್ನ ನಿಲುವು ಒಂದೇ ಆಗಿದೆ| ಪಕ್ಷದ ಸ್ಡ್ಯಾಂಡ್ ಏನಿರುತ್ತೆ ಅದೇ ನಮ್ಮದಾಗಿರುತ್ತದೆ| ಯಾವಾಗಲೂ ಪಕ್ಷಕ್ಕೆ ಹಾಗೂ ಪಕ್ಷದ ಸಿದ್ಧಾಂತಕ್ಕೆ ನಾವು ಬದ್ಧರಾಗಿರಲೇಬೇಕು| ಯಾವುದೇ ಕಾರಣಕ್ಕೂ ಇಲ್ಲದಲ್ಲದ ಹೇಳಿಕೆಗಳನ್ನು ನೀಡಬಾರದು: ಶಿವರಾಮ್‌ ಹೆಬ್ಬಾರ್| 

ಹುಬ್ಬಳ್ಳಿ(ಆ.28): ವಿಧಾನ ಪರಿಷತ್‌ ಸದಸ್ಯ ಎಚ್. ವಿಶ್ವನಾಥ್‌ ಅವರು ಯಾವ ಉದ್ದೇಶಕ್ಕಾಗಿ ಟಿಪ್ಪು ಸುಲ್ತಾನ್ ಪರ ಹೇಳಿಕೆ ನೀಡಿದ್ದಾರೋ  ನನಗೆ ಗೊತ್ತಿಲ್ಲ, ಯಾರೇ ಆದರೂ ಒಂದು ಪಕ್ಷಕ್ಕೆ ಬಂದ ಮೇಲೆ ಆ ಪಕ್ಷದ ತತ್ವ ಸಿದ್ಧಾಂತಕ್ಕೆ ಬದ್ಧರಾಗಿ ಇರಬೇಕು. ಪಕ್ಷಕ್ಕೆ ಮುಜುಗರ ತರುವಂತ ಹೇಳಿಕೆಗಳನ್ನ ನೀಡಬಾರದು ಎಂದು ಸಚಿವ ಶಿವರಾಮ್ ಹೆಬ್ಬಾರ ಅವರು ಹೇಳಿದ್ದಾರೆ. 

ಟಿಪ್ಪು ಸುಲ್ತಾನ್ ಈ ನೆಲದ ಮಗ, ವೀರ ಹೋರಾಟಗಾರ ಎಂದು ಹೇಳಿದ ಎಚ್. ವಿಶ್ವನಾಥ್‌ ಹೇಳಿಕೆಗೆ ಇಂದು(ಶುಕ್ರವಾರ) ನಗರದಲ್ಲಿ ಮಾಧ್ಯಮದರೊಂದಿಗೆ ಮಾತನಾಡಿದ ಅವರು, ಬಿಜೆಪಿ‌ ನಿಲುವು ನನ್ನ ನಿಲುವು ಒಂದೇ ಆಗಿದೆ. ಪಕ್ಷದ ಸ್ಡ್ಯಾಂಡ್ ಏನಿರುತ್ತೆ ಅದೇ ನಮ್ಮದಾಗಿರುತ್ತದೆ ಎಂದು ಹೇಳಿದ್ದಾರೆ.

ಟಿಪ್ಪು ಸುಲ್ತಾನ್‌ ಈ ನೆಲದ ಮಗ, ವೀರ ಹೋರಾಟಗಾರ: ಬಿಜೆಪಿ ನಾಯಕ

ಯಾವಾಗಲೂ ಪಕ್ಷಕ್ಕೆ ಹಾಗೂ ಪಕ್ಷದ ಸಿದ್ಧಾಂತಕ್ಕೆ ನಾವು ಬದ್ಧರಾಗಿರಲೇಬೇಕು. ಯಾವುದೇ ಕಾರಣಕ್ಕೂ ಇಲ್ಲದಲ್ಲದ ಹೇಳಿಕೆಗಳನ್ನು ನೀಡಬಾರದು ಎಂದು ಹೇಳುವ ಮೂಲಕ ಎಚ್.ವಿಶ್ವನಾಥ್‌ ಅವರ ಹೇಳಿಕೆಗೆ ಸಚಿವ ಶಿವರಾಮ್‌ ಹೆಬ್ಬಾರ್ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. 

"

PREV
click me!

Recommended Stories

ರೈತ, ಆಟೋ ಚಾಲಕರ ಹೆಣ್ಮಕ್ಕಳಿಗೆ ಗವಿಮಠದಿಂದ ಫ್ರೀ ಕಾಲೇಜು, ಹಾಸ್ಟೆಲ್‌
ಆತಂಕದ ವಿಷಯ: ಬೆಂಗಳೂರಿನಲ್ಲಿ 11 ವರ್ಷದ ಮಕ್ಕಳಿಗೂ ಡ್ರಗ್ಸ್‌ ಚಟ!