ಸಿಎಂ BSYಗೆ ಕುಮಾರಸ್ವಾಮಿ ಪತ್ರ : ನನಗೆ ಈ ಸ್ಥಾನವೇ ಬೇಡ ಎಂದ ಮುಖಂಡ

By Kannadaprabha News  |  First Published Aug 28, 2020, 3:11 PM IST

ನನಗೆ ನೀವು ನೀಡಿದ ಸ್ಥಾನ ಬೇಡ ಎಂದು ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರಿಗೆ ಪತ್ರ ಬರೆಯುವ ಮೂಲಕ ಮನವಿ ಮಾಡಿದ್ದಾರೆ. ಯಾವ ಮನವಿ ಮಾಡಿದ್ದಾರೆ.? ಇಲ್ಲಿದೆ ಮಾಹಿತಿ


ಚಿಕ್ಕಮಗಳೂರು (ಆ.28) : ನಿಗಮ, ಮಂಡಳಿ ಅಧ್ಯಕ್ಷರನ್ನಾಗಿ ಮಾಡಿ ಎಂದು ನಾನು ಯಾವತ್ತೂ ಕೇಳಿಲ್ಲ. ಈಗ ನೀಡಿರುವ ಎಂಸಿಎ ಅಧ್ಯಕ್ಷ ಸ್ಥಾನವನ್ನು ಅಲಂಕರಿಸುವುದಿಲ್ಲ ಎಂದು ಮೂಡಿಗೆರೆ ಶಾಸಕ ಎಂ.ಪಿ.ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರಿಗೆ ಪತ್ರ ಬರೆದು ತಿಳಿಸಿದ್ದಾರೆ.

ಗುರುವಾರ ಖುದ್ದಾಗಿ ಅವರೇ ಬೆಂಗಳೂರಿಗೆ ತೆರಳಿ ಸಿಎಂ ಕಚೇರಿಗೆ ಈ ಸಂಬಂಧ ಪತ್ರವನ್ನು ತಲುಪಿಸಿದ್ದಾರೆ. ಮೂರನೇ ಬಾರಿಗೆ ಶಾಸಕನಾಗಿದ್ದೇನೆ.

Tap to resize

Latest Videos

ಬಿಜೆಪಿ ಸೇರಲು ಸಜ್ಜಾದ್ರು ಜೆಡಿಎಸ್ ಹಾಗೂ ಕೈ ಮುಖಂಡರು...

ನನ್ನ ಮೇಲಿರುವ ವಿಶ್ವಾಸಕ್ಕಾಗಿ ಎಂಸಿಎ ನಿಗಮದ ಅಧ್ಯಕ್ಷ ಸ್ಥಾನವನ್ನು ನೀಡಿದ್ದೀರಿ, ಅಧ್ಯಕ್ಷ ಸ್ಥಾನ ಅಲಂಕರಿಸುವುದಿಲ್ಲ ಎಂದು ಹೇಳಿರುವುದಕ್ಕೆ ಅನ್ಯತಾ ಭಾವಿಸುವುದು ಬೇಡ. ಉಳಿದ ಮೂರು ವರ್ಷಗಳಲ್ಲಿ ತಮ್ಮ ನಾಯಕತ್ವದಲ್ಲಿ ಬಿಜೆಪಿ ಸರ್ಕಾರದ ಆಡಳಿತ ಮುಖ್ಯ ಎಂದು ಅವರು ಪತ್ರದಲ್ಲಿ ತಿಳಿಸಿದ್ದಾರೆ.

ಬಿಜೆಪಿ ತೊರೆದು ಕಾಂಗ್ರೆಸ್‌ ಸೇರಿದ ಹಿರಿಯ ಮುಖಂಡ...

ಪರಿಶಿಷ್ಟಜಾತಿಯ ಬಲಗೈ ಸಮುದಾಯಕ್ಕೆ ಸೇರಿರುವ ಮೂವರು ಶಾಸಕರಿದ್ದು, ಇವರಲ್ಲಿ ಯಾರನ್ನಾದರೂ ರಾಜ್ಯ ಸರ್ಕಾರದಲ್ಲಿ ಮಂತ್ರಿಯನ್ನಾಗಿ ಮಾಡಬೇಕೆಂದು ಪತ್ರದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಬಳಿ ಶಾಸಕ ಕುಮಾರಸ್ವಾಮಿ ಅವರು ಪತ್ರದಲ್ಲಿ ಮನವಿ ಮಾಡಿದ್ದಾರೆ.

click me!