Vijayanagara: ಹೆಣ್ಣು ಒಲಿದರೆ ನಾರಿ, ಮುನಿದರೆ ಮಾರಿ: ಅಧಿಕಾರಿಗಳಿಗೆ ಖಡಕ್‌ ಎಚ್ಚರಿಕೆ ಕೊಟ್ಟ ಜೊಲ್ಲೆ

Kannadaprabha News   | Asianet News
Published : Feb 03, 2022, 12:51 PM IST
Vijayanagara: ಹೆಣ್ಣು ಒಲಿದರೆ ನಾರಿ, ಮುನಿದರೆ ಮಾರಿ: ಅಧಿಕಾರಿಗಳಿಗೆ ಖಡಕ್‌ ಎಚ್ಚರಿಕೆ ಕೊಟ್ಟ ಜೊಲ್ಲೆ

ಸಾರಾಂಶ

*  ಮೊದಲ ಸಭೆಯಲ್ಲೇ ಅಧಿಕಾರಿಗಳಿಗೆ ಖಡಕ್‌ ಎಚ್ಚರಿಕೆ ಕೊಟ್ಟ ಸಚಿವೆ ಶಶಿಕಲಾ ಜೊಲ್ಲೆ  *  ವಿಜಯನಗರ ಜಿಲ್ಲೆಯ ಅಭಿವೃದ್ಧಿಗಾಗಿ ಅಧಿಕಾರಿಗಳು ಶ್ರಮವಹಿಸಬೇಕು  *  ರಾಗಿ ಖರೀದಿ ಕೇಂದ್ರ ಆರಂಭ  

ಹೊಸಪೇಟೆ(ಫೆ.03): ವಿಜಯನಗರ(Vijayanagara) ಜಿಲ್ಲೆ ಸಮಗ್ರ ಅಭಿವೃದ್ಧಿಗೆ ನಾವು ಎಲ್ಲರೂ ತಂಡವಾಗಿ ಕೆಲಸ ಮಾಡೋಣ. ಸಚಿವೆ ಸಪ್ಪಗೆ ಮಾತಾಡ್ತಾರೆ ಅಂತ ತಿಳಿಯಬೇಡಿ. ಹೆಣ್ಣು ಒಲಿದರೆ ನಾರಿ. ಮುನಿದರೆ ಮಾರಿ’’ ಎಂದು ಸಚಿವೆ ಶಶಿಕಲಾ ಜೊಲ್ಲೆ ಖಡಕ್ಕಾಗಿ ಎಚ್ಚರಿಸಿದ್ದಾರೆ. 

ವಿಜಯನಗರ ಜಿಲ್ಲಾ ಉಸ್ತುವಾರಿ ಸಚಿವರಾಗಿ ಜವಾಬ್ದಾರಿ ವಹಿಸಿಕೊಂಡ ನಂತರ ಮೊದಲ ಬಾರಿಗೆ ನಗರದ ಒಳಾಂಗಣ ಕ್ರೀಡಾಂಗಣ ಸಭಾಂಗಣದಲ್ಲಿ ಬುಧವಾರ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆ ನಡೆಸಿ ಮಾತನಾಡಿದ ಅವರು, ಇದು ಔಪಚಾರಿಕ ಸಭೆ ಎಂದು ನಾನು ಸುಮ್ಮನಿರುವೆ. ಜನರ ಕೆಲಸ ಮಾಡದಿದ್ದರೆ ಖಡಕ್ಕಾಗಿಯೇ ಕೇಳುವೆ. ಅದಕ್ಕೆ ಆಸ್ಪದ ಕೊಡದೆ ತಮಗೆ ವಹಿಸಿರುವ ಕೆಲಸವನ್ನು ಮಾಡಬೇಕು’ ಎಂದು ಸಚಿವೆ ಎಚ್ಚರಿಸಿದರು.
ರಾಜ್ಯದ(Karnataka) 31ನೇ ಜಿಲ್ಲೆಯಾಗಿ ಹೊರಹೊಮ್ಮಿರುವ ವಿಜಯನಗರ ಜಿಲ್ಲೆಯ ಅಭಿವೃದ್ಧಿಗಾಗಿ ಅಧಿಕಾರಿಗಳು ಶ್ರಮವಹಿಸಬೇಕು. ತಮ್ಮ ಹೊಣೆಗಾರಿಕೆಯನ್ನು ಸಮರ್ಪಕವಾಗಿ ನಿರ್ವಹಿಸಬೇಕು. ಒಂದೊಮ್ಮೆ ನಿರ್ಲಕ್ಷ್ಯವಹಿಸಿದರೆ ಕ್ರಮ ಜರುಗಿಸಬೇಕಾಗುತ್ತದೆ ಎಂದರು.

District incharge Ministers ವಿಜಯನಗರದಿಂದ ಆನಂದ್‌ ಸಿಂಗ್‌ಗೆ ಕೋಕ್, ಭುಗಿಲೆದ್ದ ಆಕ್ರೋಶ

ಸಿಎಂ ಕನಸು:

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommai) ಅವರು ವಿಜಯನಗರ ಜಿಲ್ಲೆಯ ಅಭಿವೃದ್ಧಿಗೆ ಬಹಳಷ್ಟು ಕನಸುಗಳನ್ನಿಟ್ಟುಕೊಂಡಿದ್ದಾರೆ. ಅವುಗಳನ್ನೆಲ್ಲಾ ನಾವೆಲ್ಲ ಈಡೇರಿಸಬೇಕಾಗಿದೆ. ಇದಕ್ಕಾಗಿ ಸಚಿವರು, ಶಾಸಕರು, ಸಂಸದರು ಹಾಗೂ ಜನಪ್ರತಿನಿಧಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಜಿಲ್ಲೆಯನ್ನು ಅತ್ಯಂತ ವೇಗವಾಗಿ ಅಭಿವೃದ್ಧಿಪಡಿಸಬೇಕಿದೆ. ಈ ಕಾರ್ಯಕ್ಕೆ ಅಧಿಕಾರಿಗಳ ಪಾತ್ರ ಮುಖ್ಯವಾಗುತ್ತದೆ ಎಂದರು. ಸರಕಾರದ ಯೋಜನೆಗಳ ಯಶಸ್ವಿಗೆ ಹಾಗೂ ಜನಪ್ರತಿನಿಧಿಗಳ ಅಭಿವೃದ್ಧಿ ಅಪೇಕ್ಷಗಳನ್ನು ಈಡೇರಿಸುವಲ್ಲಿ ಅಧಿಕಾರಿಗಳ ಪಾತ್ರ ಅತ್ಯಂತ ಪ್ರಮುಖವಾಗಿದೆ; ಒಂದು ತಂಡವಾಗಿ ಮಾಡಿದಾಗ ಮಾತ್ರ ಯೋಜನೆಗಳು ಕೆಳಹಂತದವರೆಗೆ ತಲುಪಲು ಸಾಧ್ಯ ಎಂದರು.

ಕಡತ ವರ್ಗಾವಣೆ:

ನೂತನ ಜಿಲ್ಲೆಗೆ ಸಂಬಂಧಿಸಿದಂತೆ ತ್ವರಿತ ಗತಿಯಲ್ಲಿ ದಾಖಲೆಗಳ ವರ್ಗಾವಣೆಯಾಗಬೇಕು. ಇದರಿಂದ ವಿಜಯನಗರದ ಜನರು ಬಳ್ಳಾರಿಗೆ(Ballari) ಅಲೆದಾಡುವುದು ತಪ್ಪಿಸಬೇಕು ಎಂದು ಸಲಹೆ ನೀಡಿದರು.

ತುರ್ತು ಕಾರ್ಯಗಳ ಪಟ್ಟಿ ಸಲ್ಲಿಸಿ:

ಜಿಲ್ಲಾ ಮಟ್ಟದ ಅಧಿಕಾರಿಗಳು ತಮ್ಮ ತಮ್ಮ ಇಲಾಖೆಯಲ್ಲಿ ತುರ್ತಾಗಿ ಆಗಬೇಕಾಗಿರುವ ಪ್ರಮುಖವಾದ 5 ಕಾರ್ಯಗಳ ಪಟ್ಟಿಯನ್ನು ಇನ್ನೊಂದು ವಾರದೊಳಗೆ ಜಿಲ್ಲಾಧಿಕಾರಿಗಳಿಗೆ ಸಲ್ಲಿಸಬೇಕು ಎಂದರು.

ಜಿಲ್ಲೆಯಲ್ಲಿ ಐಸಿಯೂ, ಆಕ್ಸಿಜನ್‌, ಬೆಡ್‌ ಕೊರತೆ ಕಂಡು ಬಂದಿರುವುದಿಲ್ಲ. ಜನವರಿಯಲ್ಲಿ ಜಿಲ್ಲೆಯಲ್ಲಿ 2400 ಮಕ್ಕಳಿಗೆ ಕೋವಿಡ್‌ ಪ್ರಕರಣಗಳು ದೃಡಪಟ್ಟಿದ್ದವು; ಎಲ್ಲರೂ ಚೇತರಿಸಿಕೊಂಡಿದ್ದಾರೆ. ಬೆಡ್‌ಗಳ ಸಾಮರ್ಥ್ಯ, ಆಕ್ಸಿಜನ್‌ ಕೊರತೆಯಿಲ್ಲ. ಜಿಲ್ಲೆಯಲ್ಲಿ ಕೋವಿಡ್‌ ಪಾಸಿಟಿವಿಟಿ ರೇಟ್‌(Covid Positivity Rate) ಶೇ. 10.28 ಇದೆ. ಜಿಲ್ಲೆಯಲ್ಲಿ 2366 ಸಕ್ರಿಯ ಪ್ರಕರಣಗಳಿದ್ದು, 2086 ಜನರು ಹೋಂಐಸೋಲೇಶನ್‌ನಲ್ಲಿದ್ದಾರೆ ಡಿಎಚ್‌ಒ ಜನಾರ್ಧನ್‌ ಸಭೆಗೆ ತಿಳಿಸಿದರು.

Anand Singh-DKS Meeting ಅಸಮಾಧಾನ ಹೊರ ಹಾಕಿದ ಬೆನ್ನಲ್ಲೇ ಡಿಕೆಶಿ ಭೇಟಿಯಾದ ಆನಂದ್ ಸಿಂಗ್

ರಾಗಿ ಖರೀದಿ ಕೇಂದ್ರ ಆರಂಭ:

ರೈತರ(Farmers) ಅನುಕೂಲಕ್ಕಾಗಿ ಜಿಲ್ಲೆಯಲ್ಲಿ ರಾಗಿ ಖರೀದಿ ಕೇಂದ್ರ ತೆರೆಯಲು ಶೀಘ್ರ ಕ್ರಮ ವಹಿಸಲಾಗುವುದು. ಬೆಳೆಹಾನಿ ಸಮೀಕ್ಷೆ ಸಂದರ್ಭದಲ್ಲಿ ರೈತರು ಯಾವುದೇ ದೂರುಗಳಿಗೆ ಅಧಿಕಾರಿಗಳು ತಕ್ಷಣವೇ ಸ್ಪಂದಿಸಿ ಪರಿಹರಿಸಬೇಕು. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌, ಕೃಷಿ, ಧಾರ್ಮಿಕ ಇಲಾಖೆ, ನಗರಾಭಿವೃದ್ಧಿ, ಸಮಾಜಕಲ್ಯಾಣ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಪ್ರಗತಿ ಸಭೆ ನಡೆಸಿ ಅಗತ್ಯ ಸಲಹೆ-ಸೂಚನೆ ನೀಡಿದರು.

ಜಿಲ್ಲಾಧಿಕಾರಿಗಳ ಕಚೇರಿಗೆ ಸಚಿವೆ ಭೇಟಿ:

ನಗರದ ಟಿಎಸ್‌ಪಿ ಆವರಣದಲ್ಲಿ ನವೀಕರಿಸಲಾಗಿರುವ ನೂತನ ಜಿಲ್ಲಾಧಿಕಾರಿಗಳ ಕಚೇರಿ ಕಟ್ಟಡಕ್ಕೆ ಸಚಿವೆ ಶಶಿಕಲಾ ಜೊಲ್ಲೆ ಬುಧವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕಟ್ಟಡದಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಮತ್ತು ಜಿಪಂ ಸಿಇಒ ಕಚೇರಿ ಕಾರ್ಯನಿರ್ವಹಿಸಲಿವೆ. ಇವುಗಳ ಜತೆಗೆ ಇನ್ನೂ ಕೆಲ ಕಚೇರಿಗಳು ಕಾರ್ಯನಿರ್ವಹಿಸಲಿವೆ ಎಂದು ಜಿಲ್ಲಾಧಿಕಾರಿ ಅನಿರುದ್ಧ ಶ್ರವಣ್‌ ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಜಿಪಂ ಸಿಇಒ ಬೋಯರ್‌ ಹರ್ಷಲ್‌ ನಾರಾಯಣ, ಎಸ್ಪಿ ಡಾ. ಅರುಣ, ಅಪರ ಜಿಲ್ಲಾಧಿಕಾರಿ ಮಹೇಶಬಾಬು ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳು ಇದ್ದರು.
 

PREV
Read more Articles on
click me!

Recommended Stories

ಪುಟಿನ್‌ಗೆ ಇಲ್ಲೇ ಎಲೆಕ್ಷನ್‌ ನಿಲ್ಲೋಕೆ ಟಿಕೆಟ್‌ ಕೊಡ್ತಾರೆ ಅಂದ್ಕೊಂಡಿದ್ದೆ.. ಸಂತೋಷ್‌ ಲಾಡ್‌ ಲೇವಡಿ
ಗಡುವು ಮೀರಿಸಿದರೆ ಮುಂದೆ ಕೆಲಸವಿಲ್ಲ: ಮೆಟ್ರೋ ಗುತ್ತಿಗೆದಾರರಿಗೆ ಡಿ.ಕೆ.ಶಿವಕುಮಾರ್‌ ಎಚ್ಚರಿಕೆ