ಪಂಕ್ಚರ್‌ ಆದ ಆ್ಯಂಬುಲೆನ್ಸ್‌ ಚಕ್ರ ಬದಲಿಸಿದ ಪೇದೆ: ಪೊಲೀಸಪ್ಪನ ಮಾನವೀಯ ಕೆಲಸಕ್ಕೆ ಬಹುಪರಾಕ್‌..!

Kannadaprabha News   | Asianet News
Published : Feb 03, 2022, 09:17 AM ISTUpdated : Feb 03, 2022, 10:57 AM IST
ಪಂಕ್ಚರ್‌ ಆದ ಆ್ಯಂಬುಲೆನ್ಸ್‌ ಚಕ್ರ ಬದಲಿಸಿದ ಪೇದೆ: ಪೊಲೀಸಪ್ಪನ ಮಾನವೀಯ ಕೆಲಸಕ್ಕೆ ಬಹುಪರಾಕ್‌..!

ಸಾರಾಂಶ

*   ಸಕಾಲದಲ್ಲಿ ರೋಗಿ ಆಸ್ಪತ್ರೆಗೆ ತೆರಳಲು ಕಲ್ಲೂರ್‌ ನೆರವು *   ಸಂಕಷ್ಟಕ್ಕೆ ಸಿಲುಕಿದ್ದವರ ನೆರವಿಗೆ ಧಾವಿಸಿದ ಪೇದೆ *   ಪೇದೆ ಚಕ್ರ ಬದಲಾಯಿಸುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ 

ಬೆಂಗಳೂರು(ಫೆ.03): ಪ್ರಸುತ್ತ ಟೋಯಿಂಗ್(Towing) ವ್ಯವಸ್ಥೆ ಮುಂದಿಟ್ಟು ಸಂಚಾರ ಪೊಲೀಸರ(Traffic Police) ಮೇಲೆ ನಾಗರಿಕರು ಟೀಕೆಗಳು ಸುರಿಸುತ್ತಿರುವ ಹೊತ್ತಿನಲ್ಲೇ ಸಂಚಾರ ಠಾಣೆ ಕಾನ್‌ಸ್ಟೇಬಲ್‌ವೊಬ್ಬರ(Constable) ಮಾನವೀಯ ಕೆಲಸಕ್ಕೆ ಸಾರ್ವಜನಿಕ ವಲಯದಲ್ಲಿ ಬಹುಪರಾಕ್‌ ಸಿಕ್ಕಿದೆ.

ಕಬ್ಬನ್‌ ಪಾರ್ಕ್ ಸಂಚಾರ ಠಾಣೆಯ ಕಾನ್‌ಸ್ಟೇಬಲ್‌ ಕಾಸಪ್ಪ ಕಲ್ಲೂರ್‌(Kasappa Kallur) ಅವರೇ ಪ್ರಶಂಸೆಗೆ ಪಾತ್ರವಾಗಿದ್ದು, ಆಸ್ಪತ್ರೆಗೆ ರೋಗಿಯನ್ನು(Patient) ಕರೆದೊಯ್ಯುವ ವೇಳೆ ಮಾರ್ಗ ಮಧ್ಯೆ ಪಂಕ್ಚರ್‌ ಆಗಿ ನಿಂತಿದ್ದ ಆ್ಯಂಬುಲೆನ್ಸ್‌ನ(Ambulance) ಚಕ್ರ ಬದಲಾಯಿಸಿ ಸಕಾಲಕ್ಕೆ ರೋಗಿ ಆಸ್ಪತ್ರೆ(Hospital) ಸೇರಲು ನೆರವಾಗಿದ್ದಾರೆ. ತನ್ಮೂಲಕ ಅವರ ಪ್ರಾಣ ರಕ್ಷಿಸಿ ಕಲ್ಲೂರ್‌ ಕರ್ತವ್ಯ ಪ್ರಜ್ಞೆ ಮೆರೆದಿದ್ದಾರೆ.

 

ಸಿಐಡಿ ಜಂಕ್ಷನ್‌ನಲ್ಲಿ ಮಂಗಳವಾರ ಕಾಸಪ್ಪ ಕಲ್ಲೂರ್‌ ಅವರು ಕರ್ತವ್ಯ ನಿರ್ವಹಿಸುತ್ತಿದ್ದರು. ಅದೇ ವೇಳೆ ಗ್ಲೋಬಲ್‌ ಆಸ್ಪತ್ರೆಯಿಂದ ತುರ್ತು ಚಿಕಿತ್ಸೆ ಸಲುವಾಗಿ ಬೇರೆ ಆಸ್ಪತ್ರೆಗೆ ರೋಗಿಯನ್ನು ಕರೆದೊಯ್ಯುತ್ತಿದ್ದ ಆ್ಯಂಬುಲೆನ್ಸ್‌ ಸಿಐಡಿ ಜಂಕ್ಷನ್‌ ಬಳಿ ಪಂಕ್ಚರ್‌ ಆಗಿದೆ. ಇದರಿಂದ ರೋಗಿ ಜೊತೆಯಲ್ಲಿದ್ದ ಅವರ ಕುಟುಂಬದವರು ಕಂಗಲಾಗಿದ್ದಾರೆ.

ಅಲ್ಲದೆ ಆ್ಯಂಬುಲೆನ್ಸ್‌ನಲ್ಲಿದ್ದ ರೋಗಿಗೆ ಆಮ್ಲಜನಕ(Oxygen) ಪ್ರಮಾಣ ಸಹ ಕಡಿಮೆಯಾಗುತ್ತಿತ್ತು. ಆಗ ಅದೇ ವೃತ್ತದಲ್ಲಿ ಕರ್ತವ್ಯದಲ್ಲಿದ್ದ ಕಾಸಪ್ಪ ಅವರು, ಕೂಡಲೇ ಸಂಕಷ್ಟಕ್ಕೆ ಸಿಲುಕಿದ್ದವರ ನೆರವಿಗೆ ಧಾವಿಸಿದ್ದಾರೆ. ಕೆಲವು ಆ್ಯಂಬುಲೆನ್ಸ್‌ಗಳಿಗೆ ಕರೆ ಮಾಡಿದರೂ ಪ್ರಯೋಜನವಾಗಿಲ್ಲ. ಕೊನೆಗೆ ತಾವೇ ಖುದ್ದಾಗಿ ಚಕ್ರ(Wheel) ಬದಲಾಯಿಸಿ ಆ್ಯಂಬುಲೆನ್ಸ್‌ ಹೊರಡಲು ನೆರವಾಗಿದ್ದಾರೆ. ಕಾಸಪ್ಪ ಕಲ್ಲೂರ್‌ ಅವರ ಚಕ್ರ ಬದಲಾಯಿಸುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ(Social Media) ವೈರಲ್‌(Viral) ಆಗಿದೆ. ಅಲ್ಲದೆ, ಸಂಚಾರ ವಿಭಾಗದ ಜಂಟಿ ಪೊಲೀಸ್‌ ಆಯುಕ್ತ ಡಾ. ಬಿ.ಆರ್‌.ರವಿಕಾಂತೇಗೌಡ ಅವರು ಕಲ್ಲೂರ್‌ ಅವರನ್ನು ತಮ್ಮ ಕಚೇರಿಗೆ ಕರೆಸಿಕೊಂಡು .5 ಸಾವಿರ ನಗದು ಪುರಸ್ಕಾರ ಜೊತೆ ಪ್ರಶಂಸನಾ ಪತ್ರ ನೀಡಿ ಅಭಿನಂದಿಸಿದ್ದಾರೆ.

ಟ್ರಾಫಿಕ್‌ ಪೊಲೀಸ್‌ ಟೋಯಿಂಗ್‌ ವಾಹನದಿಂದಲೇ ಸಿಗ್ನಲ್‌ ಜಂಪ್‌: ಬಿತ್ತು ಭರ್ಜರಿ ದಂಡ

ಬೆಂಗಳೂರು: ಸಿಗ್ನಲ್‌ ಜಂಪ್‌ ಮಾಡಿ ಸಂಚಾರ ನಿಯಮ ಉಲ್ಲಂಘಿಸಿದ (Traffic Rules Violation)  ತಮ್ಮದೇ ಠಾಣೆಯ ಟೋಯಿಂಗ್‌ ವಾಹನಕ್ಕೆ (towing Vehicle) ಹೈಗ್ರೌಂಡ್ಸ್‌ ಠಾಣೆ ಸಂಚಾರ ಪೊಲೀಸರು (Police) 500ರು. ದಂಡ ವಿಧಿಸಿದ ಘಟನೆ ಕಳೆದ ವರ್ಷ ಡಿ.13 ರಂದು ನಡೆದಿತ್ತು. 

ನಗರದ ಚಾಲುಕ್ಯ ಸರ್ಕಲ್‌ನಲ್ಲಿ ಟೋಯಿಂಗ್‌ ವಾಹನ ಸಂಚಾರ ನಿಯಮ ಉಲ್ಲಂಘಿಸಿದ್ದು, ಟ್ವಿಟರ್‌ನಲ್ಲಿ (twitter) ಸಾರ್ವಜನಿಕರು ನೀಡಿದ ದೂರು ಆಧರಿಸಿ ಟೋಯಿಂಗ್‌ ವಾಹನಕ್ಕೆ ಪೊಲೀಸರು ದಂಡ ವಿಧಿಸಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದರು.

ರಾಜಭವನ ರಸ್ತೆಯಿಂದ ಬಂದ ಟೋಯಿಂಗ್‌ ವಾಹನ ಚಾಲುಕ್ಯ ವೃತ್ತದಲ್ಲಿ ಸಿಗ್ನಲ್‌ ಜಂಪ್‌ (Signal Jumnp) ಮಾಡಿ ಸಾಗಿತ್ತು. ಆಗ ಟೋಯಿಂಗ್‌ ವಾಹನ ಸಂಚಾರ ನಿಯಮ ಉಲ್ಲಂಘಿಸಿದ್ದನ್ನು ಮೊಬೈಲ್‌ ಸೆರೆ ಹಿಡಿದಿದ್ದ ವ್ಯಕ್ತಿಯೊಬ್ಬರು, ‘ಏಜೆಂಟ್‌ ಪೀಣ್ಯ’ ಹೆಸರಿನಲ್ಲಿ ಟ್ವಿಟ್‌ ಮಾಡಿ ಬೆಂಗಳೂರು ಸಂಚಾರ ಪೊಲೀಸರಿಗೆ (Bengaluru Traffic Police) ಟ್ಯಾಗ್‌ ಮಾಡಿದ್ದರು. ನಿಮ್ಮ ವಾಹನವೇ ಸಿಗ್ನಲ್‌ ಜಂಪ್‌ ಮಾಡಿದೆ. ನೀವು ದಂಡ ವಿಧಿಸಿ ಚಲನ್‌ ಅನ್ನು ಟ್ವಿಟರ್‌ನಲ್ಲಿ ಶೇರ್‌ ಮಾಡಿ ಎಂದು ಒತ್ತಾಯಿಸಿದ್ದರು.

ರೂಲ್ಸ್ ಬ್ರೇಕ್ ಮಾಡಿದರೆ ಎಸ್‌ಎಂಎಸ್‌ ಬರುತ್ತೆ:

ಸಂಚಾರ ನಿಯಮಗಳನ್ನು ಉಲ್ಲಂಘಿಸಿದರೆ ಕ್ಷಣಾರ್ಧದಲ್ಲಿ ಆ ವಾಹನಗಳ ಮಾಲೀಕರ ಮೊಬೈಲ್‌ಗೆ ಸಂಚಾರ ಉಲ್ಲಂಘನೆ ಸ್ವರೂಪ ಹಾಗೂ ದಂಡದ ವಿವರಗಳನ್ನು ಎಸ್‌ಎಂಎಸ್‌(SMS) ಮೂಲಕ ಮಾಹಿತಿ ನೀಡುವ ಹೊಸ ವ್ಯವಸ್ಥೆಯನ್ನು ನಗರ ಸಂಚಾರ ವಿಭಾಗದ ಪೊಲೀಸರು(Traffic Police) ಆರಂಭಿಸಿದ್ದಾರೆ. ಈ ವ್ಯವಸ್ಥೆಯಿಂದ ಕಾನೂನು ಮೀರಿದವರನ್ನು ಹುಡುಕಿಕೊಂಡು ಮನೆಗಳಿಗೆ ಹೋಗುವ ಪೊಲೀಸರ(Police) ಶ್ರಮ ಮತ್ತು ಸಮಯ ಹಾಗೂ ಅಂಚೆ ವೆಚ್ಚ ಉಳಿಯಲಿದೆ. ಅಲ್ಲದೆ ತ್ವರಿತವಾಗಿ ನಿಯಮ ಉಲ್ಲಂಘನೆ ಮಾಹಿತಿಯನ್ನು ವಾಹನ(Vehicle) ಮಾಲೀಕರಿಗೆ ತಿಳಿಸಲು ನೆರವಾಗಲಿದೆ.

PREV
Read more Articles on
click me!

Recommended Stories

ಪುಟಿನ್‌ಗೆ ಇಲ್ಲೇ ಎಲೆಕ್ಷನ್‌ ನಿಲ್ಲೋಕೆ ಟಿಕೆಟ್‌ ಕೊಡ್ತಾರೆ ಅಂದ್ಕೊಂಡಿದ್ದೆ.. ಸಂತೋಷ್‌ ಲಾಡ್‌ ಲೇವಡಿ
ಗಡುವು ಮೀರಿಸಿದರೆ ಮುಂದೆ ಕೆಲಸವಿಲ್ಲ: ಮೆಟ್ರೋ ಗುತ್ತಿಗೆದಾರರಿಗೆ ಡಿ.ಕೆ.ಶಿವಕುಮಾರ್‌ ಎಚ್ಚರಿಕೆ