ಧಾರವಾಡ: ಸಮರ್ಪಕ ಮಾಹಿತಿ ನೀಡದ ಅಧಿಕಾರಿಗಳ ಬೆವರಿಳಿಸಿದ ಸಚಿವ ಲಾಡ್..!

By Girish Goudar  |  First Published Oct 11, 2023, 12:58 PM IST

ಸರ್ಕಾರದ ಯೋಜನೆಗಳನ್ನು ಜನಸಾಮಾನ್ಯರಿಗೆ ತಲುಪಿಸುವ ನಿಟ್ಟಿನಲ್ಲಿ ಪ್ರತಿಯೊಬ್ಬ ಅಧಿಕಾರಿಗಳು ಪ್ರಯತ್ನಿಸಲು ವಿಫಲರಾಗಿದ್ದಾರೆ ಅಧಿಕಾರಿಗಳು ಎಂದು ಬೇಸರ ವ್ಯಕ್ತಪಡಿಸಿದ ಸಚಿವ ಸಂತೋಷ್ ಲಾಡ್‌ 


ವರದಿ: ಪರಮೇಶ್ವರ ಅಂಗಡಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಧಾರವಾಡ 

ಧಾರವಾಡ(ಅ.11):  ಸರ್ಕಾರದ ಯೋಜನೆಗಳನ್ನು ಜನಸಾಮಾನ್ಯರಿಗೆ ತಲುಪಿಸುವ ನಿಟ್ಟಿನಲ್ಲಿ ಪ್ರತಿಯೊಬ್ಬ ಅಧಿಕಾರಿಗಳು ಪ್ರಯತ್ನಿಸಿ, ಸರ್ಕಾರದ ಅನುದಾನ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಕಾರ್ಮಿಕರ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

Tap to resize

Latest Videos

ಸರ್ಕಾರದ ಯೋಜನೆಗಳನ್ನು ಜನಸಾಮಾನ್ಯರಿಗೆ ತಲುಪಿಸುವ ನಿಟ್ಟಿನಲ್ಲಿ ಪ್ರತಿಯೊಬ್ಬ ಅಧಿಕಾರಿಗಳು ಪ್ರಯತ್ನಿಸಲು ವಿಫಲರಾಗಿದ್ದಾರೆ ಅಧಿಕಾರಿಗಳು ಎಂದು ಸಚಿವ ಸಂತೋಷ್ ಲಾಡ್‌ ಬೇಸರ ವ್ಯಕ್ತಪಡಿಸಿದ್ದಾರೆ. ಇಂದು(ಬುಧವಾರ) ಧಾರವಾಡ ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಸೆಪ್ಟೆಂಬರ್ 2023 ಅತ್ಯಂಕ್ಕೆ ಕೊನೆಗೊಂಡ 2ನೇ ತ್ರೈಮಾಸಿಕ ಕೆಡಿಪಿ ಪ್ರಗತಿ ಪರಿಶೀಲನಾ ಸಭೆ ನಡೆಸಿ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್‌ ಸರಿಯಾಗಿ ಮಾಹಿತಿ ನೀಡಿದ ಅಧಿಕಾರಿಗಳಿಗೆ ಫುಲ್ ಕ್ಲಾಸ್ ತೆಗದುಕೊಂಡಿದ್ದಾರೆ. 

ಅಶ್ಲೀಲ ವಿಡಿಯೋ ವೈರಲ್ ಮಾಡುವುದಾಗಿ 96 ಸಾವಿರ ರೂ ವಂಚಿಸಿದ ದುಷ್ಕರ್ಮಿಗಳು! 

ತೋಟಗಾರಿಕೆ ಇಲಾಖೆ ಡಿಡಿ ಕಾಶಿ ನಾಥ್ ಭದ್ರನ್ನವರ ಫುಲ್ ಕ್ಲಾಸ್ ತೆಗೆದುಕೊಂಡ ಸಚಿವರು ತೋಟಗಾರಿಕೆ ಇಲಾಖೆಯ ಯಾವುದೇ ಮಾಹಿತಿಯನ್ನ‌ ನೀಡದ ಅಧಿಕಾರಿಗಳಿಗೆ ಶಾಸಕರೇ ಕರೆ ಮಾಡಿದರೂ ಸಂಪರ್ಕಕ್ಕೆ‌ ಸಿಗದ ಅಧಿಕಾರಿಗಳು ನಾವು ಸಭೆಯ ಎಲ್ಲ ಮಾಹಿತಿಯನ್ನ‌ ಓದಿಕೊಂಡು ಬಂದಿರುತ್ತೇನೆ. ನೀವು ಜಲ್ಲೆಯ ಕಾಮಗಾರಿಗಳ ಬಗ್ಗೆ ಒಂದು ಮಾಹಿತಿ‌ ಇರಲ್ಲ ಸಾಮಾಜಿ ಅರಣ್ಯ ಇಲಾಖೆ, ಕೃಷಿ ಇಲಾಖೆ, ತೋಟಗಾರಿಕೆಯ ಇಲಾಖೆಯ ಅಧಿಕಾರಿಗಳ ಮೇಲೆ‌ ಗರಂ ಆದರು. 

ಸುಮ್ಮನೆ ಮೀಟಿಂಗ್ ಬಂದು ಟಿ ಕಾಪಿ ಕುಡಿಯಲಿಕ್ಕೆ ಬಂದಿರಿ ಸರಕಾರದ ವೇತನ ಪಡಿತ್ತಿರಿ ಪದೆ ಪದೆ ನಿಮಗೆ ಇದನ್ನೆ ಹೇಳೋದು ಆಗುತ್ತಿದೆ.ಯಾರು ಸರಿಯಾದ ಮಾಹಿತಿಯನ್ನ ನೀಡುತ್ತಿಲ್ಲ ಬೇಸಿಕ್ ಇನ್ಪಾರ್ಮೆಶನ್ ಇಲ್ಲ, ಸಚಿವರು ಬೈದ್ರೆ ಸೊಕ್ಕಿನವರು ಅಂತಿರಿ ಆದರೆ ನಾನು ಸಿಬಿಐ ವಿಚಾರಣೆ ಮಾಡಲಿಕ್ಕೆ ಬಂದಿಲ್ಲ ಸೂಕ್ತವಾದ ಒಂದು ಉತ್ತರ ಇಲ್ಲ, ಯಾವುದೇ ಮಾಹಿತಿ ಇಲ್ಲ ಎಂದ ಸಚಿವ ಸಂತೋಷ್ ಲಾಡ್ ಕೆಡಿಪಿ ಸಭೆಯಲ್ಲಿ ಅಧಿಕಾರ ದಿವ್ಯ ನಿರ್ಲಕ್ಷ್ಯದಿಂದ ಜಿಲ್ಲೆ ಅಭಿವೃದ್ದಿಯಾಗಲ್ಲ ಯಾವ ಅಧಿಕಾರಿಗಳು ಸರಿಯಾದ ಡಾಟಾ ನೀಡುತ್ತಿಲ್ಲ ಎಂದ ಸಂತೋಷ್ ಲಾಡ ಬೇಸರ ವ್ಯಕ್ತಪಡಿಸಿದರು.

ಶಾಮನೂರು ಪ್ರಶ್ನೆಗೆ ಸಿಎಂ ಸಿದ್ದರಾಮಯ್ಯ ಉತ್ತರಿಸಲಿ: ಬೊಮ್ಮಾಯಿ

ಸಭೆಯಲ್ಲಿ ಮಾತನಾಡಿದ ಶಾಸಕ ಎನ್.ಎಚ್. ಕೋನರೆಡ್ಡಿ ಅವರು, ಜಿಲ್ಲೆಯಲ್ಲಿ ಯಾವುದೇ ಅಭಿವೃದ್ಧಿ ಕಾಮಗಾರಿಗಳನ್ನ ಅಧಿಕಾರಿಗಳು ಮಾಡಿಸುತ್ತಿಲ್ಲ. ಕೇವಲ ಇವರು ಸಚಿವರಿಗೆ ತಪ್ಪು ಮಾಹಿತಿ ನೀಡಿ ಅಧಿಕಾರಿಗಳು ಕಾಮಗಾರಿಗಳ ಹಾದಿಯನ್ನ ತಪ್ಪಿಸುತ್ತಿದ್ದಾರೆ. ಸಚಿವರು ಇಷ್ಡೆಲ್ಲ‌ ಮಾಹಿತಿ ಕೇಳಿದರೂ ಯಾವೊಬ್ಬ ಅಧಿಕಾರಿಯು ಕೆಡಿಪಿ ಸಭೆಗೆ ಬಂದರೆ ಯಾಕೆ ಮಾಹಿತಿ ನೀಡುತ್ತಿಲ್ಲ ಎಂದ ಕೋನರೆಡ್ಡಿ ಅಸಮಾಧನಾ ವ್ಯಕ್ತಪಡಿಸಿದರು

ಸಭೆಯಲ್ಲಿ ವಿಧಾನ ಪರಿಷ್ಯತ್ ಸದಸ್ಯ ಸಲೀಂ ಅಹ್ಮದ್, ನವಲಗುಂದ ಶಾಸಕ ಎನ್.ಎಚ್. ಕೋನರೆಡ್ಡಿ, ಹುಬ್ಬಳ್ಳಿ ಶಾಸಕ ಮಹೇಶ ಟೆಂಗಿನಕಾಯಿ, ಕುಂದಗೋಳ ಶಾಸಕ ಎಂ.ಆರ್ ಪಾಟೀಲ ಭಾಗವಹಿಸಿದ್ದರು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸ್ವರೂಪ ಟಿ.ಕೆ., ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗೋಪಾಲ ಬ್ಯಾಕೋಡ್ ಸಭೆಯಲ್ಲಿ ಉಪಸ್ಥಿತಿರಿದ್ದರು.

click me!