ಚಿಕ್ಕಮಗಳೂರು: ಪ್ರವಾಸಿತಾಣದಲ್ಲಿ ನಿಗೂಢವಾಗಿ ಯುವಕ ಕಣ್ಮರೆ..!

By Girish Goudar  |  First Published Oct 11, 2023, 12:46 PM IST

ಬೆಳ್ತಂಗಡಿ ತಾಲೂಕು ಕೊಯ್ಯುರು ಗ್ರಾಮದ ದೀಕ್ಷಿತ್ ನಾಪತ್ತೆಯಾದ ಯುವಕ. ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ಮೂಲದ ನಾಲ್ವರು ಯುವಕರು ಮಲೆನಾಡಿನ ಪ್ರವಾಸಿತಾಣವಾದ ದೇವರಮನೆ ಗುಡ್ಡಕ್ಕೆ ಬಂದಿದ್ದರು. ಎರಡು ದಿನದ ಪ್ರವಾಸ ಕೈಗೊಂಡಿದ್ದ ಯುವಕರು ನಿನ್ನೆ ಪ್ರವಾಸ ಮುಗಿಸಿ ದೇವರಮನೆಯಿಂದ ವಾಪಸ್ ಬರುವಾಗ ನಾಲ್ವರು ಯುವಕರಲ್ಲಿ ಓರ್ವ ನಾಪತ್ತೆಯಾಗಿದ್ದಾನೆ. 


ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು 

ಚಿಕ್ಕಮಗಳೂರು(ಅ.11):  ಪ್ರವಾಸಕ್ಕೆ ಬಂದಿದ್ದ ಓರ್ವ ಯುವಕ ಅನುಮಾನಾಸ್ಪದವಾಗಿ ಕಣ್ಮರೆಯಾಗಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಪ್ರವಾಸಿ ತಾಣ ದೇವರಮನೆ ಗುಡ್ಡದ ಬಳಿ ನಡೆದಿದೆ.

Tap to resize

Latest Videos

undefined

ಬೆಳ್ತಂಗಡಿ ತಾಲೂಕು ಕೊಯ್ಯುರು ಗ್ರಾಮದ ದೀಕ್ಷಿತ್ (27) ನಾಪತ್ತೆಯಾದ ಯುವಕ. ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ಮೂಲದ ನಾಲ್ವರು ಯುವಕರು ಮಲೆನಾಡಿನ ಪ್ರವಾಸಿತಾಣವಾದ ದೇವರಮನೆ ಗುಡ್ಡಕ್ಕೆ ಬಂದಿದ್ದರು. ಎರಡು ದಿನದ ಪ್ರವಾಸ ಕೈಗೊಂಡಿದ್ದ ಯುವಕರು ನಿನ್ನೆ ಪ್ರವಾಸ ಮುಗಿಸಿ ದೇವರಮನೆಯಿಂದ ವಾಪಸ್ ಬರುವಾಗ ನಾಲ್ವರು ಯುವಕರಲ್ಲಿ ಓರ್ವ ನಾಪತ್ತೆಯಾಗಿದ್ದಾನೆ. ಸ್ನೇಹಿತರೊಂದಿಗೆ ಗುಡ್ಡೆತೋಟದ ಬಳಿ ಕಾರು ನಿಲ್ಲಿಸಿ ಜಗಳವಾಡಿಕೊಂಡು ದೀಕ್ಷಿತ್, ಮಾತಿನ ಚಕಮಕಿ ಬಳಿಕ ಸಿಟ್ಟು ಮಾಡಿಕೊಂಡು ಕಾರು ಹತ್ತದೆ ಹೊರಟುಹೋಗಿದ್ದಾನೆ. ಅಲ್ಲಿಂದ ಹೊರಟುಹೋದ ದೀಕ್ಷಿತ್ ಅನುಮಾನಾಸ್ಪದವಾಗಿ ಕಣ್ಮರೆಯಾಗಿದ್ದಾನೆ.

ಸೋಮಣ್ಣ ಸೋತಿದ್ದಷ್ಟೇ ಅಲ್ಲ, ಮಂತ್ರಿ ಮಾಡಿದ್ದನ್ನೂ ಹೇಳಬೇಕು: ಜೀವರಾಜ್

ಈ ಯುವಕನಿಗಾಗಿ ಪೊಲೀಸರು ಹಾಗೂ ಅರಣ್ಯ ಸಿಬ್ಬಂದಿಗಳು ತೀವ್ರ ಹುಡುಕಾಟ ನಡೆಸುತ್ತಿದ್ದು, ದೀಕ್ಷಿತ್ ನಿಗೂಢ ನಾಪತ್ತೆ ಅನುಮಾನನ್ನು ಹುಟ್ಟುಹಾಕಿದೆ. ಮೂಡಿಗೆರೆ ತಾಲೂಕು ಬಣಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣವು ದಾಖಲಾಗಿದೆ.

click me!