ಸಹಕಾರ ಇಲಾಖೆಯ ಕಾರ್ಯ ವೈಖರಿಯಲ್ಲಿ ಸಾಕಷ್ಟು ಮಾರ್ಪಾಡು ಮಾಡಬೇಕಿದೆ. ಈ ಕ್ಷೇತ್ರದಲ್ಲಿಯೂ ದುಡ್ಡೇ ದೊಡ್ಡಪ್ಪ ಆಗಿದೆ. ನಾವು ರೊಕ್ಕ ಕೊಟ್ಟು ಕೆಲಸ ಮಾಡಿಕೊಳ್ಳಬೇಕಿದೆ. ಬಹಳ ದಿನದಿಂದ ತಳ ಊರಿರುವ ಅಧಿಕಾರಿಗಳನ್ನು ಬದಲಾಯಿಸಿ ಎಂದು ಸಲಹೆ ನೀಡಿದ ಎಸ್‌ಟಿಎಸ್
ವಿಜಯಪುರ(ನ.21): ಗ್ರಾಮೀಣ ಪ್ರದೇಶದ ಜನಾರೋಗ್ಯದ ಸಲುವಾಗಿ ಪ್ರತಿಹಳ್ಳಿಯಲ್ಲಿ ಜನೌಷಧ ಮಳಿಗೆಗಳನ್ನು ಸ್ಥಾಪಿಸುವ ನಿಟ್ಟಿನಲ್ಲಿ ಸಹಕಾರ ಇಲಾಖೆ ಚಿಂತನೆ ನಡೆಸಿದೆ ಎಂದು ಸಹಕಾರ ಸಚಿವ ಎಸ್.ಟಿ. ಸೋಮಶೇಖರ ಹೇಳಿದ್ದಾರೆ.
ಶುಕ್ರವಾರ ನಗರದ ವೀರರಾಣಿ ಕಿತ್ತೂರ ಚನ್ನಮ್ಮ ಸಭಾಂಗಣದಲ್ಲಿ ವಿಜಯಪುರ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್, ಸಹಕಾರ ಇಲಾಖೆ, ವಿಜಯಪುರ ಜಿಲ್ಲಾ ಸಹಕಾರಿ ಸಂಘಗಳ ಒಕ್ಕೂಟ ಸೇರಿದಂತೆ ವಿವಿಧ ಸಹಕಾರ ಸಂಘಗಳ ಆಶ್ರಯದಲ್ಲಿ ಜರುಗಿದ 67ನೇ ಅಖಿಲ ಭಾರತ ಸಹಕಾರ ಸಪ್ತಾಹದ ರಾಜ್ಯ ಮಟ್ಟದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.
undefined
ಗ್ರಾಮೀಣ ಭಾಗದಲ್ಲಿಯೇ ಹೆಚ್ಚು ಆದ್ಯತೆ ಮೇರೆಗೆ ಜನೌಷಧ ಮಳಿಗೆಗಳನ್ನು ಆರಂಭಿಸಿ ಅವರಿಗೆ ಕಡಿಮೆ ದರದಲ್ಲಿ ಔಷಧ ಪಡೆಯುವ ಸೌಲಭ್ಯವನ್ನು ಇಲಾಖೆ ಶೀಘ್ರದಲ್ಲಿಯೇ ರೂಪಿಸಿ ಅನುಷ್ಠಾನಗೊಳಿಸಲಿದೆ. ಗ್ರಾಮೀಣ ಜನತೆಗೆ ಈ ಜನೌಷಧ ಮಳಿಗೆಗಳು ವರದಾನವಾಗಲಿವೆ ಎಂದರು.
ಮುದ್ದೇಬಿಹಾಳ: ಕೂಲಿ ಕಾರ್ಮಿಕ ದಂಪತಿಯ ಬರ್ಬರ ಹತ್ಯೆ
ಕರ್ನಾಟಕ ದೇಶದಲ್ಲೇ ನಂಬರ್ 1:
ಮೊದಲು ಸಹಕಾರ ಸಂಘಗಳ ಸಾಧನೆಯ ವಿಷಯ ಬಂದಾಗ ಗುಜರಾತ್, ಮಹಾರಾಷ್ಟ್ರ ರಾಜ್ಯಗಳ ಹೆಸರು ಮುಂಚೂಣಿಯಲ್ಲಿ ಇರುತ್ತಿತ್ತು. ಆದರೆ ಇದೀಗ ಕರ್ನಾಟಕ ರಾಜ್ಯವು ಸಹಕಾರ ರಂಗದಲ್ಲಿ ನಂಬರ್ 1 ಸ್ಥಾನದಲ್ಲಿದೆ. ರಾಷ್ಟ್ರಮಟ್ಟದಲ್ಲಿ ಸಹಕಾರ ಸಂಘಗಳ ಸಾಧನೆಯ ವಿಷಯ ಬಂದಾಗ ಕರ್ನಾಟಕದ ಸ್ಥಾನ ಅಗ್ರಗಣ್ಯವಾಗಿದೆ. ಮುಂದಿನ ಸಹಕಾರಿ ಸಪ್ತಾಹದಲ್ಲಿ ಪ್ರತಿ ಜಿಲ್ಲೆಯ ಉತ್ತಮ ಸಹಕಾರಿ ಸಂಸ್ಥೆ ಕುರಿತ ಕಿರು ಹೊತ್ತಿಗೆ ಹೊರ ತರಲು ಚಿಂತನೆ ನಡೆಸಲಾಗುತ್ತಿದೆ ಎಂದರು.
ವಿಜಯಪುರ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಸಾಮಾಜಿಕ ಕಳಕಳಿಯನ್ನು ಹೊಂದಿದೆ. ಕೋವಿಡ್ ಸಂದರ್ಭದಲ್ಲಿ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಡಿಸಿಸಿ ಬ್ಯಾಂಕ್ 1 ಕೋಟಿ ಹಾಗೂ ನೆರೆ ಪರಿಹಾರಕ್ಕೂ ದೊಡ್ಡ ಪ್ರಮಾಣದಲ್ಲಿ ನೆರವು ನೀಡಿದೆ. ಕೋವಿಡ್ ವಾರಿಯರ್ಸ್‌ಗಳಾದ ಆಶಾ ಕಾರ್ಯಕರ್ತೆಯರಿಗೆ ಫುಡ್ ಕಿಟ್ ಜೊತೆಗೆ ಜಿಲ್ಲೆಯ ತಲಾ . 3000 ಪ್ರೋತ್ಸಾಹ ಧನ ವಿತರಿಸಿದೆ ಎಂದರು.
ಲಾಕ್‌ಡೌನ್ ನಂತರ ಸಹಕಾರಿ ಇಲಾಖೆಯಿಂದ ವಿಭಾಗವಾರು ಆರ್ಥಿಕ ಚೇತನಕ್ಕಾಗಿ ಆರ್ಥಿಕ ಸ್ಪಂದನ ಕಾರ್ಯಕ್ರಮ ನಬಾರ್ಡ್ ಅನುದಾನದಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ. ಆತ್ಮ ನಿರ್ಭರ ಯೋಜನೆಯಡಿ 625 ಕೋಟಿ ವರೆಗೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿಕೊಳ್ಳಲಾಗಿದೆ. ವಿಜಯಪುರ ಜಿಲ್ಲೆಯಲ್ಲಿ ಅತ್ಯಂತ ಹಿರಿಯ ಸಹಕಾರಿಗಳಿದ್ದಾರೆ. ವಿಜಯಪುರ ಡಿಸಿಸಿ ಬ್ಯಾಂಕ್ 1200 ಕೋಟಿಗೂ ಮೀರಿದ ಸಾಲ ನೀಡಲು ಮುಂದಾಗಿದೆ. ರಾಜ್ಯದ 21 ಡಿಸಿಸಿ ಬ್ಯಾಂಕುಗಳಲ್ಲಿ ನಾಲ್ಕೈದು ಡಿಸಿಸಿ ಬ್ಯಾಂಕ್ ಅತ್ಯುತ್ತಮ ಕಾರ್ಯ ನಿರ್ವಹಣೆ ಮಾಡುತ್ತಿವೆ. ಅವುಗಳಲ್ಲಿ ವಿಜಯಪುರ ಡಿಸಿಸಿ ಬ್ಯಾಂಕ್ ನಂಬರ್ 1 ನೇ ಸ್ಥಾನದಲ್ಲಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಸಹಕಾರಿ ನಿಯಮಗಳಲ್ಲಿ ಬದಲಾವಣೆಯಾಗಲಿ:
ಸಹಕಾರ ಇಲಾಖೆಯ ಕಾರ್ಯ ವೈಖರಿಯಲ್ಲಿ ಸಾಕಷ್ಟು ಮಾರ್ಪಾಡು ಮಾಡಬೇಕಿದೆ. ಈ ಕ್ಷೇತ್ರದಲ್ಲಿಯೂ ದುಡ್ಡೇ ದೊಡ್ಡಪ್ಪ ಆಗಿದೆ. ನಾವು ರೊಕ್ಕ ಕೊಟ್ಟು ಕೆಲಸ ಮಾಡಿಕೊಳ್ಳಬೇಕಿದೆ. ಬಹಳ ದಿನದಿಂದ ತಳ ಊರಿರುವ ಅಧಿಕಾರಿಗಳನ್ನು ಬದಲಾಯಿಸಿ ಎಂದು ಸಲಹೆ ನೀಡಿದರು.
ಸಹಕಾರ ಸಂಘಗಳಿಗೆ ವಿಧಿಸಲಾಗಿರುವ ಕೆಲವೊಂದು ನಿಬಂಧನೆಗಳನ್ನು ಪರಿಷ್ಕರಿಸಬೇಕಿದೆ. ಅದರಲ್ಲಿ ಬಹುಮುಖ್ಯವಾಗಿ ಸಹಕಾರ ಸಂಘದ ಮೂರು ಸಾಮಾನ್ಯ ಸಭೆಗಳಿಗೆ ಹಾಜರಾದರೆ ಮಾತ್ರ ಮತದಾನ ಮಾಡುವ ಹಕ್ಕು ನೀಡುತ್ತಿರುವುದು ಸರಿಯಲ್ಲ, ಎಲ್ಲರಿಗೂ ಮತದಾನದ ಹಕ್ಕು ದೊರೆಯಬೇಕು. ಈ ಹಿನ್ನೆಲೆಯಲ್ಲಿ ಸಹಕಾರ ಸಂಘಗಳ ಹಿತರಕ್ಷಣೆಗೆ ಮಾರಕವಾಗಿರುವ ಈ ಎಲ್ಲ ಅವೈಜ್ಞಾನಿಕ ನಿಯಮಗಳನ್ನು ತೆಗೆದುಹಾಕಬೇಕು ಎಂದು ಒತ್ತಾಯಿಸಿದರು.
ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಸರ್ಕಾರ ಹಣ ಇಡುತ್ತದೆ. ಅದೇ ತೆರನಾಗಿ ಸಹಕಾರಿ ಸಂಸ್ಥೆಗಳಲ್ಲೂ ಸರ್ಕಾರ ಹಣ ಇಡಬೇಕು. ಅಮೂಲ್ ಆಗಲು ನೆಹರು ಒಬ್ಬರೇ ಅಲ್ಲ. ಸರದಾರ್ ವಲ್ಲಭಬಾಯಿ ಪಟೇಲ್ ಕೂಡ ಕಾರಣರು. ಕ್ಷೀರ ಕ್ರಾಂತಿಗೆ ಜೋಮನ್ ವರ್ಗಿಸ್ ಮಾತ್ರವಲ್ಲ. ಲಾಲ್ ಬಹದ್ದೂರ್ ಶಾಸ್ತ್ರೀ ಕೂಡಾ ಕಾರಣಿಕರ್ತರು ಎಂದು ಯತ್ನಾಳ ವಿವರಿಸಿದರು.
ಐಸಿಐಸಿಐ ಬ್ಯಾಂಕ್‌ನಲ್ಲಿ ಹಗರಣ:
ವಿಜಯಪುರದಲ್ಲಿ ಐಸಿಐಸಿಐ ಬ್ಯಾಂಕ್ ಹಗರಣ ದೊಡ್ಡ ಮಟ್ಟದಲ್ಲಿ ನಡೆದಿದೆ. ಅದೇ ತೆರನಾಗಿ ಈಶ್ವರ ಕೋ ಅಪರೇಟಿವ್ ಸೊಸೈಟಿಯಲ್ಲಿ ಹಗರಣ ನಡೆದಿದೆ. ಆದರೆ ಯಾರ ಮೇಲೆಯೂ ಇನ್ನೂವರೆಗೂ ಕ್ರಮ ಕೈಗೊಂಡಿಲ್ಲ ಎಂದು ಹೇಳಿದರು. ಸಹಕಾರ ಸಚಿವ ಸೋಮಶೇಖರ ಅವರು ಪ್ರಸಕ್ತ ವರ್ಷ 7.5 ಕೋಟಿ ಉಳಿಸಿ ಸರ್ಕಾರದ ಬೊಕ್ಕಸಕ್ಕೆ ವಾಪಾಸ್ಸು ನೀಡಿದ್ದಾರೆ. ಇದು ಸಹಕಾರ ಸಚಿವ ಎಸ್.ಟಿ.ಸೋಮಶೇಖರ ಅವರ ಕಾರ್ಯದಕ್ಷತೆ ಹಾಗೂ ಪ್ರಾಮಾಣಿಕತೆಗೆ ಒಂದು ನಿದರ್ಶನ ಎಂದರು. ಅದೇ ತೆರನಾಗಿ ಭೀಮಾಶಂಕರ ಸಹಕಾರಿ ಸಕ್ಕರೆ ಕಾರ್ಖಾನೆಯನ್ನು ಬಾರಾಕಮಾನ್ ಎಂದೇ ಅನೇಕರು ವ್ಯಂಗ್ಯವಾಡುತ್ತಿದ್ದರು. ಆದರೆ ಶಾಸಕ ಯಶವಂತರಾಯಗೌಡ ಅವರ ಪ್ರಯತ್ನದಿಂದ ಭೀಮಾಶಂಕರ ಸಹಕಾರಿ ಕಾರ್ಖಾನೆ ಮತ್ತೆ ಪುನಃಶ್ಚೇತನಗೊಂಡಿದೆ ಎಂದರು.
ಪಾಟೀಲತ್ರಯರನ್ನು ಕೊಂಡಾಡಿದ ಸಚಿವ
ವಿಜಯಪುರ ಜಿಲ್ಲೆಯ ಶಾಸಕರಾದ ಶಿವಾನಂದ ಪಾಟೀಲ, ಬಸನಗೌಡ ಪಾಟೀಲ ಯತ್ನಾಳ, ಯಶವಂತರಾಯಗೌಡ ಪಾಟೀಲ ಅವರು ತಮ್ಮ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿದ್ದಾರೆ. ಅವರೆಲ್ಲರ ಸಾಧನೆ ಇತರರಿಗೆ ಮಾದರಿಯಾಗಿದೆ ಎಂದು ಸಚಿವ ಎಸ್.ಟಿ. ಸೋಮಶೇಖರ ಮುಕ್ತಕಂಠದಿಂದ ಹೊಗಳಿದರು. ಶಾಸಕ ಬಸನಗೌಡ ಪಾಟೀಲ ಯತ್ನಾಳರ ನೇತೃತ್ವದಲ್ಲಿ ಸೌಹಾರ್ದ ಸಂಸ್ಥೆ ಕೂಡ ಉತ್ತಮ ಕಾರ್ಯ ನಿರ್ವಹಣೆ ಮಾಡುತ್ತಿದೆ. ಕೋಮಾ ಸ್ಥಿತಿಯಲ್ಲಿದ್ದ ಭೀಮಾಶಂಕರ ಸಹಕಾರಿ ಸಕ್ಕರೆ ಕಾರ್ಖಾನೆಗೆ ಶಾಸಕ ಯಶವಂತರಾಯಗೌಡ ಪಾಟೀಲ ಪುನಃಶ್ಚೇತನ ನೀಡಿದ್ದಾರೆ. ಶಾಸಕ ಶಿವಾನಂದ ಪಾಟೀಲ ಅವರ ನೇತೃತ್ವದಲ್ಲಿ ಡಿಸಿಸಿ ಬ್ಯಾಂಕ್ ರಾಜ್ಯದ ನಂ.1 ಡಿಸಿಸಿ ಬ್ಯಾಂಕ್ ಆಗಿದೆ. ಈ ಮೂವರಿಗೂ ರಾಜಕಾರಣದಲ್ಲಿಯೂ ಕಾರ್ಯಬದ್ಧತೆ, ನಿಷ್ಠೆ ಇದೆ ಎಂದು ಸಹಕಾರ ಸಚಿವ ಎಸ್.ಟಿ. ಸೋಮಶೇಖರ ಶ್ಲಾಘಿಸಿದರು.