ಕೋವಿಡ್‌ ಕೇಸ್‌ 13ಕ್ಕೆ ಇಳಿಕೆ : ಕಡಿಮೆಯಾದ ಮಹಾಮಾರಿ ಅಬ್ಬರ

By Kannadaprabha News  |  First Published Nov 21, 2020, 1:41 PM IST

ಕೋವಿಡ್‌ ಪಾಸಿಟಿವ್‌ ಕೇವಲ 13 ಹೊಸ ಪ್ರಕರಣಗಳು ಪತ್ತೆಯಾಗುವ ಮೂಲಕ ಕೊರೋನಾ ನಾಗಲೋಟ ತಗ್ಗಿದೆ. ಇದರಿಂದ ಕೊರೋನಾ ದೂರ ಸರಿಯುತ್ತಿದೆ. 


ಚಿಕ್ಕಬಳ್ಳಾಪುರ (ನ.21): ಜಿಲ್ಲೆಯಲ್ಲಿ   ಕೋವಿಡ್‌ ಪಾಸಿಟಿವ್‌ ಕೇವಲ 13 ಹೊಸ ಪ್ರಕರಣಗಳು ಪತ್ತೆಯಾಗುವ ಮೂಲಕ ಕೊರೋನಾ ನಾಗಲೋಟ ತಗ್ಗಿದ್ದು ಒಟ್ಟಾರೆ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 12,051ಕ್ಕೆ ಏರಿಕೆ ಕಂಡಿದೆ.

 ಹೊಸ ಪ್ರಕರಣಗಳಲ್ಲಿ ಚಿಕ್ಕಬಳ್ಳಾಪುರ 4, ಬಾಗೇಪಲ್ಲಿ 1, ಚಿಂತಾಮಣಿ 3, ಗೌರಿಬಿದನೂರು 5 ಪ್ರಕರಣಗಳು ಕಂಡು ಬಂದಿದೆ. ನಿನ್ನೆ ಒಂದೇ ದಿನ 35 ಮಂದಿ ಸೋಂಕಿತರು ಚೇತರಿಕೆ ಕಂಡು ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದು ಇನ್ನು ಜಿಲ್ಲೆಯಲ್ಲಿ 101 ಸಕ್ರಿಯ ಪ್ರಕರಣಗಳು ಇವೆ.

Tap to resize

Latest Videos

ಕೊರೊನಾ 2 ಅಲೆ ಭೀತಿ : ಭಾರತದಲ್ಲಿಯೂ ಸರ್ಕ್ಯೂಟ್ ಬ್ರೇಕರ್ ಲಾಕ್‌ಡೌನ್ ಜಾರಿ? .

ಜಿಲ್ಲೆಯಲ್ಲಿ ಕೊರೊನಾ ಆರಂಭಗೊಂಡ ದಿನದಿಂದ ಇಲ್ಲಿಯವರೆಗೂ ಜಿಲ್ಲಾದ್ಯಂತ ಒಟ್ಟು 2,01,561 ಮಂದಿಗೆ ಕೊರೊನಾ ಪರೀಕ್ಷೆ ನಡೆಸಲಾಗಿದ್ದು ಆ ಪೈಕಿ 12,051 ಮಂದಿಯಲ್ಲಿ ಮಾತ್ರ ಕೊರೊನಾ ಪಾಸಿಟೀವ್‌ ಕಂಡು ಬಂದಿದ್ದರೆ ಉಳಿದಂತೆ 1,89,51 ಮಂದಿಗೆ ಕೋವಿಡ್‌ ನೆಗೆಟಿವ್‌ ಬಂದಿದೆ. ಒಟ್ಟು 112 ಮಂದಿಗೆ ಜಿಲ್ಲೆಯಲ್ಲಿ ಕೊರೊನಗೆ ಬಲಿಯಾಗಿದ್ದಾರೆ. 7 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

click me!